News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

100 ಹಿರಿಯ ಪ್ರಾಥಮಿಕ ಶಾಲೆಗೆ ತುಳು ಅಕ್ಷರಮಾಲೆ ವಿತರಣೆ

ಬಂಟ್ವಾಳ : ತುಳು ಲಿಪಿ ಮುಖ್ಯ ಶಿಕ್ಷಕ ಬಿ.ತಮ್ಮಯನವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜರವರು 100 ಹಿರಿಯ ಪ್ರಾಥಮಿಕ ಶಾಲೆಗಳಿಗೆ ತುಳು ಲಿಪಿ ಅಕ್ಷರ ಮಾಲೆಯ ಪ್ರತಿಗಳನ್ನು ಅರ್ಪಿಸಿದರು .   ಈ ಪ್ರತಿಗಳಲ್ಲಿ ಸ್ವರಗಳು , ವ್ಯಂಜನಗಳು ,...

Read More

ಗಂಗೊಳ್ಳಿ : ಶ್ರೀ ಚೌಡೇಶ್ವರಿ ಯುತ್ ಕ್ಲಬ್ ವಾರ್ಷಿಕೋತ್ಸವ

ಬೈಂದೂರು : ಗಂಗೊಳ್ಳಿಯ ಶ್ರೀ ಚೌಡೇಶ್ವರಿ ಯುತ್ ಕ್ಲಬ್ ವಾರ್ಷಿಕೋತ್ಸವ ಸಮಾರಂಭ ಇತ್ತೀಚಿಗೆ ಸ್ಥಳೀಯ ದೊಡ್ಡಹಿತ್ಲು ವಠಾರದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷ ಪ್ರಕಾಶ್ ಟಿ.ಮೆಂಡನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಬಾಲಕೃಷ್ಣ ಶೆಟ್ಟಿ, ಸಾಹಿತಿ...

Read More

ಸೋಮಶೇಖರ್ ಖಾರ್ವಿಗೆ ಮಿ.ಕರ್ನಾಟಕ ಬೆಂಗಳೂರು ಪ್ರಶಸ್ತಿ

ಬೈಂದೂರು : ಬೆಂಗಳೂರಿನ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವು ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಜನಮನ ಜಿಮ್’ ಪುರುಷರ ದೇಹದಾರ್ಢ್ಯ ಸ್ಪರ್ಧೆಯ 65 ಕೆಜಿ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಲಲಿತ್ ಫಿಟ್‌ನೆಸ್‌ನ ಸೋಮಶೇಖರ್ ಖಾರ್ವಿ ಪ್ರಥಮ ಸ್ಥಾನ ಪಡೆದು ಮಿಸ್ಟರ್ ಕರ್ನಾಟಕ...

Read More

ಬರಲಿದೆ ವಿಶ್ವಬಂಟರ ಮಾಹಿತಿ ಕೋಶ

ಮಂಗಳೂರು : ವಿಶ್ವದೆಲ್ಲೆಡೆ ಇರುವ ಬಂಟ ಸಮುದಾಯದ ಜನರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹ ಮಾಡುವ ಸಲುವಾಗಿ ವಿಶ್ವ ಬಂಟರ ಮಾಹಿತಿ ಕೋಶ ಅನಾವರಣ ಗೊಳಿಸುವ ಉದ್ದೇಶ ಇದೆ ಎಂದು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು. ಬಂಟರ...

Read More

ಮಂಗಳೂರಿನಲ್ಲಿ ಆಕಸ್ಮಿಕವಾಗಿ ಗುಂಡು ಹಾರಿ ಭದ್ರತಾ ಸಿಬ್ಬಂದಿ ಸಾವು

ಮಂಗಳೂರು: ನಗರದ ಪಿವಿಎಸ್ ವೃತ್ತದ ಬಳಿ ಕೋಟಕ್ ಬ್ಯಾಂಕಿನ ಭದ್ರತಾ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಮೃತ ಸಿಬ್ಬಂದಿಯನ್ನು ತಮ್ಮಯ್ಯ(55) ಎಂದು ಗುರುತಿಸಲಾಗಿದ್ದು, ಮೂಲತ: ಮಡಿಕೇರಿಯವರಾಗಿದ್ದು ಕಳೆದ 11 ವರ್ಷಗಳಿಂದ ಇವರು ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ....

Read More

ಪ್ರಧಾನ ಮಂತ್ರಿ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಮಂಜೂರು

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಬೇಬಿ.ಲಿಖಿತ, ರವರಿಗೆ ರೂ.50,000/- ,  ಶ್ರೀ.ಬಾಲಕೃಷ್ಣ.ಕೆ ರವರಿಗೆರೂ.50,000/-, ಮೊಹಮ್ಮದ್ ತಮೀಝ್ ರವರಿಗೆ ರೂ.50,000/- ಮತ್ತು ಮಾಸ್ಟರ್ ನಿಖಿತ್ ರವರಿಗೆ ರೂ.50,000/-   ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ...

Read More

ನಿಟ್ಟೆ ಕಾಲೇಜು ತಂಡ ಚಾಂಪಿಯನ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ಅಂತರ್ ಕಾಲೇಜು ಮಂಗಳೂರು ವಲಯ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ನಿಟ್ಟೆ ಕಾಲೇಜು ತಂಡವು ಜಯಗಳಿಸಿದೆ. ಫೈನಲ್ ಪಂದ್ಯಾಟದಲ್ಲಿ ನಿಟ್ಟೆ ಎನ್‌ಎಂಎಎಂ ತಂಡವು ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜು ತಂಡವನ್ನು 18-12...

Read More

ಎ.2ರಂದು ರುದ್ರಾಭಿಷೇಕ, ನಾಗಬ್ರಹ್ಮ ಪೂಜೆ

ಕಾರ್ಕಳ: ದುರ್ಗ-ಮಿಯ್ಯಾರು ಅಣೆಕಟ್ಟಿನ ಬಳಿಯ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ವರ್ಧಂತಿ ಪ್ರಯುಕ್ತ ರುದ್ರಾಭಿಷೇಕ, ನಾಗಬ್ರಹ್ಮ ಪೂಜೆ ಹಾಗೂ ವನಭೋಜನ ಕಾರ್ಯಕ್ರಮವು ಎ.2ರಂದು ನೆರವೇರಲಿದೆ ಎಂದು ಪ್ರಕಟಣೆ...

Read More

ಎಪ್ರಿಲ್ 8: ಆರ್.ವಿ. ದೇಶ್‌ಪಾಂಡೆಯಿಂದ ಪಾಲಿಟೆಕ್ನಿಕ್ ಕಟ್ಟಡ ಉದ್ಘಾಟನೆ

ಕಾರ್ಕಳ: 7 ವರ್ಷಗಳ ಹಿಂದೆ ಆರಂಭವಾದ ಕಾರ್ಕಳದ ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ನ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದು, ಎ.8 ರಂದು ಕರ್ನಾಟಕ ಸರಕಾರ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಇಲಾಖಾ ಸಚಿವ ಆರ್.ವಿ.ದೇಶ್‌ಪಾಂಡೆಯವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಕಳ ತಾಲೂಕಿನ ಹಲವಾರು ಪ್ರವಾಸಿ ಕೇಂದ್ರಗಳನ್ನು...

Read More

ಎ.2: ಪುನರ್ ಪ್ರತಿಷ್ಠೆ ಮಹೋತ್ಸವ

ಕಾರ್ಕಳ: ಕಾರ್ಕಳದ ಅರಮನೆ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಪೂರ್ವಕ ಪುನರ್ ಪ್ರತಿಷ್ಠೆ ಮಹೋತ್ಸವವು ಎ.2ರಿಂದ 4ರ ವರೆಗೆ ನಡೆಯಲಿದೆ. ದಾನಶಾಲೆ ಶ್ರೀ ಜೈನಮಠದ ಪರಮಪೂಜ್ಯ ರಾಜಗುರು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು...

Read More

Recent News

Back To Top