×
Home About Us Advertise With s Contact Us

ಎಪ್ರಿಲ್ 8: ಆರ್.ವಿ. ದೇಶ್‌ಪಾಂಡೆಯಿಂದ ಪಾಲಿಟೆಕ್ನಿಕ್ ಕಟ್ಟಡ ಉದ್ಘಾಟನೆ

RV Deshpandeಕಾರ್ಕಳ: 7 ವರ್ಷಗಳ ಹಿಂದೆ ಆರಂಭವಾದ ಕಾರ್ಕಳದ ಸರಕಾರಿ ಮಹಿಳಾ ಪಾಲಿಟೆಕ್ನಿಕ್‌ನ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದು, ಎ.8 ರಂದು ಕರ್ನಾಟಕ ಸರಕಾರ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಇಲಾಖಾ ಸಚಿವ ಆರ್.ವಿ.ದೇಶ್‌ಪಾಂಡೆಯವರು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಕಳ ತಾಲೂಕಿನ ಹಲವಾರು ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಮಾನ್ಯ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿದ್ದರು. ಇದೀಗ ಕಾರ್ಕಳ ತಾಲೂಕಿನ ಮೂರು ಪ್ರಮುಖ ರಸ್ತೆಗಳಾದ ನಾಡ್ಪಾಲು ಗ್ರಾಮದ ಕೂಡ್ಲು ಸಂಪರ್ಕ ರಸ್ತೆ, ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ರಸ್ತೆ, ಕಾರ್ಕಳ ಹಿರಿಯಂಗಡಿ ಬಸದಿ ರಸ್ತೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅನುದಾನ ಮಂಜೂರುಗೊಂಡಿತ್ತು.

ಈ ಎಲ್ಲಾ ರಸ್ತೆಗಳಿಗೆ ಮಾನ್ಯ ಸಚಿವರಾದ ಆರ್.ವಿ ದೇಶ್‌ಪಾಂಡೆ ಅಯವರು ಅಂದೇ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕಾರ್ಕಳ ಕ್ಷೇತ್ರದ ಶಾಸಕರು ಹಾಗೂ ವಿಧಾನ ಸಭೆ ವಿಪಕ್ಷ ಮುಖ್ಯ ಸಚೇತಕರಾದ ವಿ.ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Recent News

Back To Top
error: Content is protected !!