
ನವದೆಹಲಿ: ಇಸ್ರೇಲ್ ಮತ್ತು ಭಾರತದ ಹಂಚಿಕೆಯ ಇತಿಹಾಸ, ಸಂಸ್ಕೃತಿ ಮತ್ತು ಮೌಲ್ಯಗಳು ಎರಡೂ ರಾಷ್ಟ್ರಗಳನ್ನು ಹೇಗೆ ಒಟ್ಟಿಗೆ ತರುತ್ತವೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರ್ಯೂವೆನ್ ಅಜರ್ ಹೇಳಿದ್ದಾರೆ.
ಶುಕ್ರವಾರ ದೆಹಲಿಯ ಲೋಧಿ ಕಾಲೋನಿಯಲ್ಲಿ ಗಾಯಕ ಜುಬಿನ್ ಮೆಹ್ತಾ ಅವರ ಹೊಸ ಭಿತ್ತಿಚಿತ್ರವನ್ನು ಉದ್ಘಾಟಿಸುವ ಮೂಲಕ ಅವರು ದೇಶಗಳ ಆಳವಾದ ಬಾಂಧವ್ಯ ಮತ್ತು ಸಂಪರ್ಕಗಳನ್ನು ಆಚರಿಸಿದರು.
ಬಳಿಕ ಮಾತನಾಡಿದ ಅಜರ್, ಭಾರತದಲ್ಲಿ ಯಹೂದಿಗಳು ಯಾವಾಗಲೂ ಸುರಕ್ಷಿತವಾಗಿದ್ದಾರೆ. ಏಕೆಂದರೆ ಯಹೂದಿ ಮತ್ತು ಭಾರತೀಯರು ಯಾವಾಗಲೂ ಇನ್ನೊಬ್ಬರನ್ನು ಒಪ್ಪಿಕೊಳ್ಳುವ ಸಮಾಜವಾಗಿದೆ ಎಂದಿದ್ದಾರೆ.
“ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳು ನಮ್ಮನ್ನು ಒಟ್ಟಿಗೆ ಸೇರಿಸುತ್ತವೆ ಎಂಬುದನ್ನು ನಾವು ನೆನಪಿಸುವುದು ಮುಖ್ಯ. ಭಾರತ ಮತ್ತು ಇಸ್ರೇಲ್ ಎರಡೂ ಹಳೆಯ ರಾಷ್ಟ್ರಗಳು ಮತ್ತು ಆಧುನಿಕ ದೇಶಗಳು, ಮತ್ತು ನಮ್ಮ ಆಧುನಿಕ ದೇಶಗಳ ಈ ಸಣ್ಣ ಇತಿಹಾಸದುದ್ದಕ್ಕೂ, ನಾವು ವೈಯಕ್ತಿಕ ಸಂಪರ್ಕಗಳು, ರಾಷ್ಟ್ರೀಯ ಸಂಪರ್ಕಗಳು ಮತ್ತು ಸಂಗೀತದ ಮೂಲಕ ಈ ಸಾಂಸ್ಕೃತಿಕ ಸಂಪರ್ಕವನ್ನು ಮಾಡಲು ಸಾಧ್ಯವಾಗಿದೆ, ಅದನ್ನು ನಾವಿಂದು ಆಚರಿಸುತ್ತಿರುವುದು ಬಹಳ ವಿಶಿಷ್ಟವಾಗಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


