Date : Saturday, 03-08-2019
ಉಧಂಪುರ: ಜಮ್ಮು ಕಾಶ್ಮೀರದ ಉಧಂಪುರದ ರಾಮನಗರ್ ನಗರದಲ್ಲಿ ಬಹು ಉಪಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಜಿಲ್ಲೆಯ ಯುವಕರಿಗೆ ಕ್ರೀಡಾಭ್ಯಾಸ ಮಾಡಲು ವೇದಿಕೆಯನ್ನು ನೀಡುವ ಸಲುವಾಗಿ ರೂ.1.34 ಕೋಟಿ ವೆಚ್ಚದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ. ಜಮ್ಮು ಕಾಶ್ಮೀರ ಸ್ಪೋರ್ಟ್ಸ್...
Date : Saturday, 03-08-2019
ಗುವಾಹಟಿ: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಸಲುವಾಗಿ ದೇಶದಾದ್ಯಂತ ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ ಅನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಬಿಜೆಪಿ ಹೇಳಿದೆ. ಅಸ್ಸಾಂನಲ್ಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದೇಶದಾದ್ಯಂತದ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದಿದೆ. ಈ ಬಗ್ಗೆ ಪ್ರತಿಕ್ರಿಯೆ...
Date : Saturday, 03-08-2019
ರಾಯ್ಪುರ: ಛತ್ತೀಸ್ಗಢದ ಗೊಂಡಾ ಗುಂಪಿನ ಬುಡಕಟ್ಟು ಜನರು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃ ಭಾಷೆಯಲ್ಲೇ ಸುದ್ದಿಗಳನ್ನು ಆಲಿಸಲಿದ್ದಾರೆ. ಟೆಕ್ಸ್ಟ್ ಟು ಸ್ಪೀಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಆ್ಯಪ್, ಗೊಂಡಿ ಭಾಷೆಯಲ್ಲಿ ವರದಿಗಳನ್ನು ಓದಲಿದೆ. ಗೊಂಡಿ ಭಾಷೆ ಬುಡಕಟ್ಟು ಜನರ...
Date : Saturday, 03-08-2019
ನವದೆಹಲಿ: ಎಲ್ಲಾ ನಿರೀಕ್ಷೆಗಳನ್ನು ಮೀರಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯ ಸಂಗ್ರಹವು ಜುಲೈನಲ್ಲಿ ರೂ. 1.02 ಲಕ್ಷ ಕೋಟಿಗೆ ತಲುಪಿದೆ. ಇಲ್ಲಿಯವರೆಗೆ, ಪ್ರಸಕ್ತ ಹಣಕಾಸು ವರ್ಷದ ನಾಲ್ಕು ತಿಂಗಳುಗಳ ಪೈಕಿ ಮೂರರಲ್ಲಿ ಜಿಎಸ್ಟಿ ಸಂಗ್ರಹವು ರೂ.1 ಲಕ್ಷ ಕೋಟಿಗಿಂತ...
Date : Friday, 02-08-2019
ಶ್ರೀನಗರ: ತ್ವರಿತವಾಗಿ ಜಮ್ಮು-ಕಾಶ್ಮೀರವನ್ನು ಬಿಡುವಂತೆ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಸೂಚನೆಯನ್ನು ನೀಡಿದೆ. ಭಯೋತ್ಪಾದಕರ ಬೆದರಿಕೆಯ ಹಿನ್ನಲೆಯಲ್ಲಿ ಈ ಸೂಚನೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸುವ ಬಗ್ಗೆ...
Date : Friday, 02-08-2019
ತವಾಂಗ್: ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಹೀರೋ ವಿಕ್ಕಿ ಕೌಶಲ್ ಅವರು ಪ್ರಸ್ತುತ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತ-ಚೀನಾ ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ಕಾಲ ಕಳೆಯುತ್ತಿದ್ದು, ಯೋಧರಿಗೆ ಚೆಫ್ ಆಗಿದ್ದಾರೆ. ಉರಿ ಸಿನಿಮಾದ ಬಳಿಕ ಎರಡನೇಯ ಬಾರಿಗೆ ಅವರು ಸೇನೆಯ...
Date : Friday, 02-08-2019
ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಜಲಿಯನ್ ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಮಂಡನೆಗೊಳಿಸಲಾಗಿದೆ. ಈ ಮಸೂದೆಯ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷರುಗಳು ಇನ್ನು ಮುಂದೆ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಖಾಯಂ ಸದಸ್ಯರಾಗಿರುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷರುಗಳಾದವರು ಸ್ವಯಂಚಾಲಿತವಾಗಿ ಜಲಿಯನ್ ವಾಲಾಭಾಗ್...
Date : Friday, 02-08-2019
ನವದೆಹಲಿ: ಪಂಚಾಯತ್ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿರುವ ತ್ರಿಪುರಾ ಬಿಜೆಪಿ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ. “ಬಿಜೆಪಿ ಮೇಲೆ ತ್ರಿಪುರಾದ ನಂಬಿಕೆ ಅಚಲವಾಗಿ ಉಳಿದಿದೆ! ರಾಜ್ಯಾದ್ಯಂತ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವನ್ನು ಆಶೀರ್ವದಿಸಿದ್ದಕ್ಕಾಗಿ ನಾನು ರಾಜ್ಯದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತ್ರಿಪುರಾದ...
Date : Friday, 02-08-2019
ನವದೆಹಲಿ: ಸಂಸತ್ತಿನ ಆವರಣದಲ್ಲಿ ಪಾವತಿಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಯನ್ನೇ ಬಳಸಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜನಪ್ರತಿನಿಧಿಗಳಿಗೆ ಮತ್ತು ಪತ್ರಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. “ಸೆಂಟ್ರಲ್ ಹಾಲ್ನಲ್ಲಿನ ಸಂಸತ್ತಿನ ಸದಸ್ಯರುಗಳು ಮತ್ತು ಮಧ್ಯಮ ವ್ಯಕ್ತಿಗಳು ಆದಷ್ಟು ಡಿಜಿಟಲ್ ಪಾವತಿಯನ್ನೇ...
Date : Friday, 02-08-2019
ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ, ಮಸೂದೆಯ ಪರವಾಗಿ 147 ಮತಗಳು ಬಿದ್ದಿದ್ದು, 42 ಮತಗಳು ವಿರೋಧವಾಗಿ ಬಿದ್ದಿದೆ. ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸುವ ಬಗ್ಗೆ ತರಲಾದ ತಿದ್ದುಪಡಿಯನ್ನು ಗೃಹಸಚಿವ ಅಮಿತ್ ಶಾ ಅವರು ಸಮರ್ಥಿಸಿಕೊಂಡಿದ್ದು, ಭಯೋತ್ಪಾದಕ...