ನವದೆಹಲಿ: ಪಂಚಾಯತ್ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿರುವ ತ್ರಿಪುರಾ ಬಿಜೆಪಿ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ.
“ಬಿಜೆಪಿ ಮೇಲೆ ತ್ರಿಪುರಾದ ನಂಬಿಕೆ ಅಚಲವಾಗಿ ಉಳಿದಿದೆ! ರಾಜ್ಯಾದ್ಯಂತ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವನ್ನು ಆಶೀರ್ವದಿಸಿದ್ದಕ್ಕಾಗಿ ನಾನು ರಾಜ್ಯದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತ್ರಿಪುರಾದ ಗ್ರಾಮೀಣ ಪ್ರದೇಶಗಳಲ್ಲಿನ ಪರಿವರ್ತನೀಯ ಕಾರ್ಯಕ್ರಮಗಳು ಅನೇಕ ಜನರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ. ಈ ಕಠಿಣ ಪರಿಶ್ರಮಕ್ಕಾಗಿ ಸ್ಥಳೀಯ ಬಿಜೆಪಿ ಘಟಕಕ್ಕೆ ಅಭಿನಂದನೆಗಳು” ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರು ಪಂಚಾಯತ್ ಫಲಿತಾಂಶವನ್ನು ಪ್ರಕಟಿಸಿದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಮೋದಿ ಟ್ವೀಟ್ ಮಾಡಿದ್ದಾರೆ.
ತ್ರಿಪುರಾದ ಕಾರ್ಯಕರ್ತರೊಂದಿಗೆ ನಿರಂತರ ಸಂವಹನಗಳನ್ನು ನಡೆಸುವಂತೆ ಮೊದಿ ಇತರ ರಾಜ್ಯಗಳ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಗುರುವಾರ ತ್ರಿಪುರಾದ ಪಂಚಾಯತ್ ಚುನಾವಣೆಗಳು ಘೋಷಣೆಯಾಗಿದ್ದು, ಶೇ. 95 ರಷ್ಟು ಸೀಟುಗಳನ್ನು ಗೆದ್ದುಕೊಂಡು ಬಿಜೆಪಿ ಬೀಗಿದೆ.
ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 116 ಸೀಟುಗಳ ಪೈಕಿ ಬಿಜೆಪಿಯು 114 ಸೀಟುಗಳನ್ನು ಪಡೆದುಕೊಂಡಿದೆ. ಪಂಚಾಯತಿಯ 419 ಸೀಟುಗಳ ಪೈಕಿ 411 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಬಿಪ್ಲವ್ ಹೇಳಿದ್ದಾರೆ.
Tripura’s faith in @BJP4India remains unwavering!
I thank the people of the state for blessing the party in the Panchayat Elections across the state. The transformative work in Tripura’s rural areas is positively impacting many lives.
Kudos to the local unit for the hardwork! https://t.co/miki9OKf53
— Narendra Modi (@narendramodi) August 2, 2019
I would urge @BJP4India Karyakartas from other states to interact with Karyakartas from Tripura. The Party’s repeated successes in the state demonstrate the power of development politics and democratic temperament. It also shows that with the right effort, everything is possible.
— Narendra Modi (@narendramodi) August 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.