ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಜಲಿಯನ್ ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಮಂಡನೆಗೊಳಿಸಲಾಗಿದೆ. ಈ ಮಸೂದೆಯ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷರುಗಳು ಇನ್ನು ಮುಂದೆ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಖಾಯಂ ಸದಸ್ಯರಾಗಿರುವುದಿಲ್ಲ.
ಕಾಂಗ್ರೆಸ್ ಅಧ್ಯಕ್ಷರುಗಳಾದವರು ಸ್ವಯಂಚಾಲಿತವಾಗಿ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮಾರಕವನ್ನು ಮುನ್ನಡೆಸುವ ಟ್ರಸ್ಟಿನ ಖಾಯಂ ಸದಸ್ಯರಾಗುತ್ತಾರೆ. ಈ ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿ ಮೋದಿ ಸರ್ಕಾರವು ಲೋಕಸಭೆಯಲ್ಲಿ ಇಂದು ಜಲಿಯನ್ ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಮಂಡನೆಗೊಳಿಸಲಾಗಿದೆ
ಈ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿ ಸದನದಿಂದ ಹೊರ ನಡೆದಿದೆ. ಅದಕ್ಕೂ ಮುನ್ನ ಪ್ರತಿಪಕ್ಷಗಳು ಮಸೂದೆಯ ತಿದ್ದುಪಡಿಗೆ ಇಟ್ಟ ಬೇಡಿಕೆ ಮತಗಳ ಮೂಲಕ ಖುಲಾಸೆಗೊಂಡಿದೆ. ಮಸೂದೆಯ ಪರವಾಗಿ 214 ಮತ್ತು ವಿರುದ್ಧ 30 ಮತಗಳು ಬಿದ್ದಿವೆ.
ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಮಸೂದೆಯನ್ನು ಮಂಡನೆಗೊಳಿಸಿದ್ದು, ಸಂಸ್ಥೆಗಳನ್ನು ರಾಜಕೀಯಕರಣಗೊಳಿಸುವ ಪದ್ಧತಿ ಇರಬಾರದು, ಅವುಗಳ ಕೇವಲ ರಾಷ್ಟ್ರೀಕರಣಗೊಂಡಿರಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.