ನವದೆಹಲಿ: ಎಲ್ಲಾ ನಿರೀಕ್ಷೆಗಳನ್ನು ಮೀರಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯ ಸಂಗ್ರಹವು ಜುಲೈನಲ್ಲಿ ರೂ. 1.02 ಲಕ್ಷ ಕೋಟಿಗೆ ತಲುಪಿದೆ. ಇಲ್ಲಿಯವರೆಗೆ, ಪ್ರಸಕ್ತ ಹಣಕಾಸು ವರ್ಷದ ನಾಲ್ಕು ತಿಂಗಳುಗಳ ಪೈಕಿ ಮೂರರಲ್ಲಿ ಜಿಎಸ್ಟಿ ಸಂಗ್ರಹವು ರೂ.1 ಲಕ್ಷ ಕೋಟಿಗಿಂತ ಹೆಚ್ಚಾಗಿದೆ.
ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಜುಲೈನ ಜಿಎಸ್ಟಿ ಸಂಗ್ರಹವು ಕಳೆದ ಹಣಕಾಸು ವರ್ಷದ ಈ ತಿಂಗಳಿಗೆ ಹೋಲಿಸಿದರೆ ಶೇಕಡಾ 6 ರಷ್ಟು ಹೆಚ್ಚಾಗಿದೆ. 2019 ರ ಏಪ್ರಿಲ್-ಜುಲೈ ಅವಧಿಯಲ್ಲಿ ಡೊಮೆಸ್ಟಿಕ್ ಕಂಪೊನೆಟ್ ಅದರ ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇಕಡಾ 9.2 ರಷ್ಟು ಏರಿಕೆಯಾಗಿದೆ ಮತ್ತು ಆಮದಿನ ಮೇಲಿನ ಜಿಎಸ್ಟಿ ಶೇಕಡಾ 0.2 ರಷ್ಟು ಕಡಿಮೆಯಾಗಿದೆ. ಈ ಅವಧಿಯ ಒಟ್ಟು ಸಂಗ್ರಹವು ಶೇಕಡಾ 6.83 ರಷ್ಟು ಏರಿಕೆಯಾಗಿದೆ.
ಒಟ್ಟು ಸಂಗ್ರಹದಲ್ಲಿ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಲ್ಲಿ ಜಿಎಸ್ಟಿ ಪರಿಹಾರವಾಗಿ ರಾಜ್ಯಗಳಿಗೆ ರೂ. 717,789 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಒಟ್ಟು ಸಂಗ್ರಹದಲ್ಲಿ, ಸಿಜಿಎಸ್ಟಿ ರೂ. 17,912 ಕೋಟಿ, ಎಸ್ಜಿಎಸ್ಟಿ ರೂ. 25,008 ಕೋಟಿ, ಐಜಿಎಸ್ಟಿ ರೂ. 50,612 ಕೋಟಿ (ಆಮದಿನ ಮೇಲೆ ಸಂಗ್ರಹಿಸಿದ ರೂ. 24,246 ಕೋಟಿ ಸೇರಿದಂತೆ) ಮತ್ತು ಸೆಸ್ ರೂ. 8,551 ಕೋಟಿ (ಆಮದುಗಳಲ್ಲಿ ಸಂಗ್ರಹಿಸಿದ 7797 ಕೋಟಿ ಸೇರಿದಂತೆ). ಜೂನ್ 31, 2019 ರವರೆಗೆ ಜೂನ್ನಲ್ಲಿ ಸಲ್ಲಿಸಲಾದ ಒಟ್ಟು ಜಿಎಸ್ಟಿಆರ್ 3 ಬಿ ರಿಟರ್ನ್ಸ್ ಸಂಖ್ಯೆ 75.79 ಲಕ್ಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.