ನವದೆಹಲಿ: ಸಂಸತ್ತಿನ ಆವರಣದಲ್ಲಿ ಪಾವತಿಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಯನ್ನೇ ಬಳಸಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜನಪ್ರತಿನಿಧಿಗಳಿಗೆ ಮತ್ತು ಪತ್ರಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
“ಸೆಂಟ್ರಲ್ ಹಾಲ್ನಲ್ಲಿನ ಸಂಸತ್ತಿನ ಸದಸ್ಯರುಗಳು ಮತ್ತು ಮಧ್ಯಮ ವ್ಯಕ್ತಿಗಳು ಆದಷ್ಟು ಡಿಜಿಟಲ್ ಪಾವತಿಯನ್ನೇ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ” ಎಂದು ಸದನದಲ್ಲಿ ಬಿರ್ಲಾ ಹೇಳಿದ್ದಾರೆ. ನಗದಿನ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಒಲವನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಅವರು ಈ ಕರೆಯನ್ನು ನೀಡಿದ್ದಾರೆ.
ಸಂಸತ್ತಿನ ಕ್ಯಾಂಟೀನ್ ಸೇರಿದಂತೆ ವಿವಿಧ ಕಡೆಗಳಲ್ಲೂ ಡಿಜಿಟಲ್ ಪಾವತಿ ಮತ್ತು ನಗದು ರಹಿತ ವರ್ಗಾವಣೆಗಳ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದನ್ನು ಬಳಸುವಂತೆ ಅಲ್ಲಿಗೆ ಆಗಮಿಸುವವರಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ವರದಿಗಳ ಪ್ರಕಾರ, ಸಂಸತ್ತಿನ ಕ್ಯಾಂಟೀನುಗಳಲ್ಲಿ ದಿನಕ್ಕೆ 3 ಸಾವಿರ ಮಂದಿ ಆಹಾರವನ್ನು ಸೇವಿಸುತ್ತಾರೆ.
2016ರ ನವೆಂಬರ್ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ದೇಶದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿದೆ. ಆದರೆ ಸಂಸತ್ತಿನಲ್ಲಿ ಇನ್ನೂ ಡಿಜಿಟಲ್ ಪಾವತಿ ಅಷ್ಟೊಂದು ಏರಿಕೆಯನ್ನು ಪಡೆದುಕೊಂಡಿಲ್ಲ. ಬಿಲ್ಗಳು ರೂ.100ಕ್ಕಿಂತ ಕಡಿಮೆಯೇ ಬೀಳುವುದರಿಂದ ಹೆಚ್ಚಿನವರು ನಗದು ಪಾವತಿಗೆಯೇ ಜೋತು ಬೀಳುತ್ತಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.