ರಾಯ್ಪುರ: ಛತ್ತೀಸ್ಗಢದ ಗೊಂಡಾ ಗುಂಪಿನ ಬುಡಕಟ್ಟು ಜನರು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃ ಭಾಷೆಯಲ್ಲೇ ಸುದ್ದಿಗಳನ್ನು ಆಲಿಸಲಿದ್ದಾರೆ.
ಟೆಕ್ಸ್ಟ್ ಟು ಸ್ಪೀಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಆ್ಯಪ್, ಗೊಂಡಿ ಭಾಷೆಯಲ್ಲಿ ವರದಿಗಳನ್ನು ಓದಲಿದೆ. ಗೊಂಡಿ ಭಾಷೆ ಬುಡಕಟ್ಟು ಜನರ ಪ್ರಮುಖ ಭಾಷೆಯಾಗಿದೆ, ಇದು ವಿವಿಧ ಬಾಹ್ಯ ಮೂಲಗಳಿಂದ ಗೊಂಡಿ ಭಾಷೆಯಲ್ಲಿ ವಿಷಯಗಳ ಭಂಡಾರವನ್ನು ಲಭ್ಯವಿರುವಂತೆ ಮಾಡುತ್ತದೆ.
ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ), ನಯಾ ರಾಯ್ಪುರ್, ಮೈಕ್ರೋಸಾಫ್ಟ್ ರಿಸರ್ಚ್ ಮತ್ತು ಸಿಜೆನೆಟ್ ಸ್ವರಾ ಫೌಂಡೇಶನ್ ಅಭಿವೃದ್ಧಿಪಡಿಸಿದ ಆದಿವಾಸಿ ರೇಡಿಯೋ ಆ್ಯಪ್ ಅನ್ನು ಬುಧವಾರ ರಾಯ್ಪುರದಲ್ಲಿ ಬಿಡುಗಡೆ ಮಾಡಲಾಯಿತು.
“ನಾವು ಬಸ್ತರ್ ಸೇರಿದಂತೆ ಛತ್ತೀಸ್ಗಢದ ಬುಡಕಟ್ಟು ಪ್ರದೇಶಗಳಿಗೆ ಹೋಗಿ ಜನರಿಗೆ ಅನುಕೂಲವಾಗುವ ತಂತ್ರಜ್ಞಾನಗಳನ್ನು ನಿರ್ಮಿಸಲು ಬಯಸುತ್ತೇವೆ. ಈ ಅಪ್ಲಿಕೇಶನ್ ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾ, ಸಿಜಿನೆಟ್ ಸ್ವರಾ ಮತ್ತು ಐಐಐಟಿ, ನಯಾ ರಾಯ್ಪುರದ ಸಹಭಾಗಿತ್ವದಿಂದ ಸೃಜಿಸಿದ ಪ್ರಯತ್ನಗಳಲ್ಲಿ ಒಂದಾಗಿದೆ ”ಎಂದು ಐಐಐಟಿಯ ನಿರ್ದೇಶಕ ಪ್ರದೀಪ್ ಕೆ ಸಿನ್ಹಾ ಹೇಳಿದ್ದಾರೆ.
“ಈ ಅಪ್ಲಿಕೇಶನ್ನಲ್ಲಿ ಬಹಳಷ್ಟು ಕೆಲಸಗಳನ್ನು ನಮ್ಮ ವಿದ್ಯಾರ್ಥಿ ಅನುರಾಗ್ ಮತ್ತು ಇತರರು ಮೈಕ್ರೋಸಾಫ್ಟ್ ತಂಡದ ಮಾರ್ಗದರ್ಶನದ ಮೂಲಕ ಮಾಡಿದ್ದಾರೆ” ಎಂದು ಸಿನ್ಹಾ ಹೇಳಿದರು.
ಛತ್ತೀಸ್ಗಢದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರು 31% ರಷ್ಟಿದ್ದಾರೆ ಮತ್ತು ಇವರಲ್ಲಿ ಗೊಂಡಾ ದೊಡ್ಡ ಗುಂಪಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.