News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ರಫೆಲ್ ಪೂರೈಕೆಯಲ್ಲಿ ವಿಳಂಬವಿಲ್ಲ : ಫ್ರಾನ್ಸ್

ನವದೆಹಲಿ: ಭಾರತಕ್ಕೆ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡುವುದರಲ್ಲಿ ಯಾವುದೇ ವಿಳಂಬಗಳನ್ನು ಮಾಡುವುದಿಲ್ಲ, ನಿಗದಿತ ಅವಧಿಯ ವೇಳೆಗೆ ವಿಮಾನಗಳು ಭಾರತದ ಕೈ ಸೇರಲಿದೆ ಎಂದು ಫ್ರಾನ್ಸ್ ಭರವಸೆ ನೀಡಿದೆ. ಭಾರತ ಆರ್ಡರ್ ನೀಡಿದ 36 ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಲು...

Read More

ಭಾರತದಲ್ಲಿ ಕಳೆದ ಕ್ಷಣ ಅದ್ಭುತವಾಗಿತ್ತು : ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತದಲ್ಲಿ ನಾನು ಉತ್ತಮ ಸಮಯವನ್ನು ಕಳೆದಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದು, ತಾವು ಮತ್ತು ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ. “ನಾವು ಭಾರತದಲ್ಲಿ ಉತ್ತಮ ಸಮಯವನ್ನು ಹೊಂದಿದೆವು. ಅದು ನಿಜಕ್ಕೂ...

Read More

ಪ್ರವಾಹ ಪೀಡಿತ ಮಡಗಾಸ್ಕರ್‌ಗೆ 600 ಟನ್ ಅಕ್ಕಿ ಹಸ್ತಾಂತರಿಸಿದ ಭಾರತ

ನವದೆಹಲಿ:  ಪ್ರವಾಹ ಪೀಡಿತ ಮಡಗಾಸ್ಕರ್‌ಗೆ ಭಾರತೀಯ ರಾಯಭಾರಿ ಅಭಯ್ ಕುಮಾರ್ ಅವರು ಭಾರತ ಸರ್ಕಾರದ ಪರವಾಗಿ 600 ಟನ್ ಅಕ್ಕಿಯನ್ನು ಹಸ್ತಾಂತರಿಸಿದ್ದಾರೆ. ಪ್ರವಾಹ ಪೀಡಿತರಿಗೆ ಶೀಘ್ರ ಪರಿಹಾರವನ್ನು ಒದಗಿಸುವ ಸಲುವಾಗಿ ಮಡಗಾಸ್ಕರ್ ವಿದೇಶಾಂಗ ಸಚಿವ ತೆಹಿಂದ್ರಜನರಿವೆಲೊ ಜಾಕೋಬಾ ಲಿವಾ ಅವರಿಗೆ ಅಕ್ಕಿಯನ್ನು...

Read More

ಕೊರೋನ­ವೈರಸ್­ನಿಂದ ಆರ್ಥಿಕತೆಗೆ ಹೊಡೆತ : ಗೆಳೆಯ ಮೋದಿಗೆ ಫೋನಾಯಿಸಿದ ನೆತನ್ಯಾಹು

ನವದೆಹಲಿ: ಜಗತ್ತಿನಲ್ಲಿ ಕೊರೋನವೈರಸ್ ಭೀತಿ ಆತಂಕಕಾರಿಯಾದ ಮಟ್ಟದಲ್ಲಿ ಇದೆ. ಆರ್ಥಿಕ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ಹೊಡೆತವನ್ನು ಅನುಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆಯನ್ನು ಮಾಡಿ ಮಾತುಕತೆಯನ್ನು ನಡೆಸಿದ್ದಾರೆ. ಸ್ವತಃ ನೆತನ್ಯಾಹು...

Read More

18 ದೇಶಗಳಿಗೆ ಬುಲೆಟ್ ಪ್ರೂಫ್ ಜಾಕೆಟ್‌ ರಫ್ತು : ರಾಜನಾಥ್ ಸಿಂಗ್

ನವದೆಹಲಿ: ಭಾರತವು 18 ದೇಶಗಳಿಗೆ ಗುಂಡು ನಿರೋಧಕ ಜಾಕೆಟ್‌ಗಳನ್ನು ಪೂರೈಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಬುಲೆಟ್ ಪ್ರೂಫ್ ಜಾಕೆಟ್‌ಗಳ ಉತ್ಪಾದನೆಯ ಪ್ರಮಾಣ ಮತ್ತು ಈ ಜಾಕೆಟ್‌ಗಳನ್ನು ರಫ್ತು ಮಾಡಲಾಗುತ್ತಿರುವ ದೇಶಗಳ...

Read More

ಪೋಲ್ಯಾಂಡ್, ರಷ್ಯಾವನ್ನು ಹಿಂದಿಕ್ಕಿ $40 ಮಿಲಿಯನ್ ರಕ್ಷಣಾ ರಫ್ತು ಒಪ್ಪಂದ ಗೆದ್ದ ಭಾರತ

ನವದೆಹಲಿ: ರಷ್ಯಾ ಮತ್ತು ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕುವ ಮೂಲಕ ಭಾರತವು ಅರ್ಮೇನಿಯಾಗೆ ನಾಲ್ಕು ದೇಶೀಯವಾಗಿ ನಿರ್ಮಿಸಲಾದ ವೆಪನ್ ಲೊಕೇಟಿಂಗ್ ರಾಡಾರ್ (ಶತ್ರುಗಳ ಶಸ್ತ್ರಾಸ್ತ್ರವಿರುವ ಜಾಗ ಪತ್ತೆ ಮಾಡುವ ರಾಡಾರ್) ­ಗಳನ್ನು ಪೂರೈಸಲು  $40 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಪಡೆದುಕೊಂಡಿದೆ. “ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ...

Read More

ಭಾರತದೊಂದಿಗಿನ ಅಮೆರಿಕದ ಸಂಬಂಧ ಈಗ ಅಸಾಧಾರಣವಾಗಿದೆ : ಟ್ರಂಪ್

ವಾಷಿಂಗ್ಟನ್ : ಭಾರತದೊಂದಿಗಿನ ಅಮೆರಿಕದ ಸಂಬಂಧವು ಅಸಾಧಾರಣವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ನೀಡಿದ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧದಲ್ಲಿ  ಅಮೆರಿಕವು ಸಾಕಷ್ಟು  ಪ್ರಗತಿಯನ್ನು ಸಾಧಿಸಲಾಗಿದೆ, ಅಮೆರಿಕಾ  ಭಾರತದೊಂದಿಗೆ ದೊಡ್ಡ ಮಟ್ಟದ ವ್ಯವಹಾರವನ್ನು ನಡೆಸಲಿದೆ ಎಂದಿದ್ದಾರೆ. ಬುಧವಾರ ಭಾರತದಿಂದ ಹಿಂದಿರುಗಿದ...

Read More

ಕೊರೋನವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ 119 ಭಾರತೀಯರ ಕರೆ ತಂದ ಏರ್­ಇಂಡಿಯಾ

ನವದೆಹಲಿ: ಕೊರೋನವೈರಸ್ ಪೀಡಿತ ಕ್ಯಾರೆಂಟೈನ್ಡ್ ಕ್ರೂಸ್ ಹಡಗು ಡೈಮಂಡ್ ಪ್ರಿನ್ಸೆಸ್­ನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ 5 ಸದಸ್ಯರು ಮತ್ತು 119 ಭಾರತೀಯರನ್ನು ಹೊತ್ತ ವಿಶೇಷ ಏರ್­ಇಂಡಿಯಾ ವಿಮಾನ ಗುರುವಾರ ನವದೆಹಲಿಗೆ ಬಂದಿಳಿದಿದೆ. ಜನರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಜಪಾನ್...

Read More

ಮೇಕ್ ಇನ್ ಇಂಡಿಯಾ – ಇದು ಮೋದಿ ಯುಗ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ರಾಷ್ಟ್ರೀಯ ಉಪ್ರಕಮಗಳಲ್ಲಿ ಮೇಕ್ ಇನ್ ಇಂಡಿಯಾ ಕೂಡ ಒಂದು. ಭಾರತವನ್ನು ಉತ್ಪಾದನಾ ವಲಯದ ಹಬ್ ಆಗಿ ಪರಿವರ್ತಿಸುವುದು ಇದರ ಉದ್ದೇಶ. ಹೂಡಿಕೆಗೆ ಅನುಕೂಲವಾಗುವಂತೆ, ನಾವೀನ್ಯತೆಯನ್ನು ಉತ್ತೇಜಿಸಲು, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು...

Read More

ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದ ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ : ಸಮಯಕ್ಕೆ ಸರಿಯಾಗಿ ವಿಶ್ವಸಂಸ್ಥೆಗೆ ಸಲ್ಲಬೇಕಾದ ಎಲ್ಲಾ ಮೊತ್ತವನ್ನು ಪಾವತಿಸಿದ ಭಾರತಕ್ಕೆ ವಿಶ್ವಸಂಸ್ಥೆ ಧನ್ಯವಾದ ಹೇಳಿದೆ. ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಈ ಹೆಗ್ಗಳಿಕೆಯನ್ನು ಪಡೆದಿವೆ ಎಂದು ಅದು ಹೇಳಿದೆ. ಭಾರತವು ಜನವರಿ 10 ರಂದು $23,396,496 ನಿವ್ವಳ ಮೊತ್ತವನ್ನು ಪಾವತಿಸಿದೆ,...

Read More

Recent News

Back To Top