ವಿಶ್ವಸಂಸ್ಥೆ : ಸಮಯಕ್ಕೆ ಸರಿಯಾಗಿ ವಿಶ್ವಸಂಸ್ಥೆಗೆ ಸಲ್ಲಬೇಕಾದ ಎಲ್ಲಾ ಮೊತ್ತವನ್ನು ಪಾವತಿಸಿದ ಭಾರತಕ್ಕೆ ವಿಶ್ವಸಂಸ್ಥೆ ಧನ್ಯವಾದ ಹೇಳಿದೆ. ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಈ ಹೆಗ್ಗಳಿಕೆಯನ್ನು ಪಡೆದಿವೆ ಎಂದು ಅದು ಹೇಳಿದೆ.
ಭಾರತವು ಜನವರಿ 10 ರಂದು $23,396,496 ನಿವ್ವಳ ಮೊತ್ತವನ್ನು ಪಾವತಿಸಿದೆ, ಹಣಕಾಸು ನಿಯಂತ್ರಣದಲ್ಲಿ ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯೊಳಗೆ ಅಂದರೆ ಫೆಬ್ರವರಿ 1, 2020 ರೊಳಗೆ ತನ್ನ ನಿಯಮಿತ ಬಜೆಟ್ ಮೌಲ್ಯಮಾಪನಗಳನ್ನು ಪೂರ್ಣವಾಗಿ ಪಾವತಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
“ನಾವು ಅರ್ಮೇನಿಯಾ, ಪೋರ್ಚುಗಲ್ ಮತ್ತು ಉಕ್ರೇನ್, ಭಾರತಕ್ಕೆ ಧನ್ಯವಾದಗಳನ್ನು ಅರ್ಪಣೆ ಮಾಡುತ್ತಿದ್ದೇವೆ” ಎಂದು ಯುಎಸ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.
ಕೆಲವೇ ರಾಷ್ಟ್ರಗಳು ಬಾಕಿ ಮೊತ್ತಗಳನ್ನು ಪಾವತಿ ಮಾಡಿವೆ, ಮುಂದೆ ಎಲ್ಲಾ ರಾಷ್ಟ್ರಗಳು ಪಾವತಿ ಮಾಡುತ್ತವೆ ಎಂಬ ನಂಬಿಕೆಯನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಕಳೆದ ವರ್ಷವೂ ಭಾರತ ತನ್ನೆಲ್ಲಾ ಮೊತ್ತವನ್ನು ವಿಶ್ವಸಂಸ್ಥೆಗೆ ಸರಿಯಾದ ಸಮಯದಲ್ಲಿ ಪಾವತಿ ಮಾಡಿ ಭೇಷ್ ಎನಿಸಿಕೊಂಡಿತ್ತು. ಯುಎನ್ನ ಹಣಕಾಸು ನಿಯಂತ್ರಣ ನಿಯಮಗಳ ಪ್ರಕಾರ ನಿರ್ದಿಷ್ಟಪಡಿಸಿದ ಅವಧಿಗೂ ಮುನ್ನವೇ 2019 ರ ಜನವರಿ 31 ರ ವೇಳೆಗೆ ಭಾರತ ನಿಯಮಿತ ಬಜೆಟ್ ಮೌಲ್ಯಮಾಪನಗಳಲ್ಲಿನ ತನ್ನ 23.25 ಮಿಲಿಯನ್ ಮೊತ್ತವನ್ನು ಪಾವತಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.