ನವದೆಹಲಿ: ಪ್ರವಾಹ ಪೀಡಿತ ಮಡಗಾಸ್ಕರ್ಗೆ ಭಾರತೀಯ ರಾಯಭಾರಿ ಅಭಯ್ ಕುಮಾರ್ ಅವರು ಭಾರತ ಸರ್ಕಾರದ ಪರವಾಗಿ 600 ಟನ್ ಅಕ್ಕಿಯನ್ನು ಹಸ್ತಾಂತರಿಸಿದ್ದಾರೆ.
ಪ್ರವಾಹ ಪೀಡಿತರಿಗೆ ಶೀಘ್ರ ಪರಿಹಾರವನ್ನು ಒದಗಿಸುವ ಸಲುವಾಗಿ ಮಡಗಾಸ್ಕರ್ ವಿದೇಶಾಂಗ ಸಚಿವ ತೆಹಿಂದ್ರಜನರಿವೆಲೊ ಜಾಕೋಬಾ ಲಿವಾ ಅವರಿಗೆ ಅಕ್ಕಿಯನ್ನು ಹಸ್ತಾಂತರ ಮಾಡಲಾಗಿದೆ.
ಭಾರತೀಯ ನೌಕಾ ಹಡಗು (ಐಎನ್ಎಸ್) ಶಾರ್ದುಲ್ ಮಾ.10 ರಂದು ಮಡಗಾಸ್ಕರ್ನ ಅಂತ್ಸಿರನನ ಬಂದರಿಗೆ ಅಕ್ಕಿಯನ್ನು ಹೊತ್ತೊಯ್ದಿತ್ತು. ಈ ವರ್ಷದ ಜನವರಿಯಲ್ಲಿ ಮಡಗಾಸ್ಕರ್ ಕರಾವಳಿಯಲ್ಲಿ ಅಪ್ಪಳಿಸಿದ ಡಯೇನ್ ಚಂಡಮಾರುತದಿಂದ ಅಲ್ಲಿ ಅಪಾರ ಪ್ರಮಾಣ ನಷ್ಟಗಳು ಸಂಭವಿಸಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದಕ್ಕೂ ಮೊದಲು ಜನವರಿ 30 ರಂದು ಭಾರತ ಐಎನ್ಎಸ್ ಐರಾವತ್ ಮೂಲಕ ತಕ್ಷಣದ ಪರಿಹಾರ ಸಾಮಗ್ರಿಗಳನ್ನು ಅಲ್ಲಿಗೆ ತಲುಪಿಸಿತ್ತು. ಇಲ್ಲಿ ಚಂಡಮಾರುತದಿಂದ ಉಂಟಾದ ವಿನಾಶದ ಸಂದರ್ಭದಲ್ಲಿ ಸ್ಪಂದಿಸಿದ ಮೊದಲ ದೇಶ ಭಾರತ.
ಮಡಗಾಸ್ಕರ್ನ ವಿದೇಶಾಂಗ ಸಚಿವರು ಈ ನೆರವು ಐತಿಹಾಸಿಕವಾದುದು, ಮಡಗಾಸ್ಕರ್ ಮತ್ತು ಭಾರತದ ಅತ್ಯುತ್ತಮ ಸಂಬಂಧವನ್ನು ಇದು ಸಾಬೀತುಪಡಿಸುತ್ತದೆ ಮತ್ತು ಸಂಕಷ್ಟಕ್ಕೆ ಸ್ಪಂದಿಸುವ ಸ್ನೇಹಿತ ನಿಜಕ್ಕೂ ಸ್ನೇಹಿತ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.