ನವದೆಹಲಿ: ಜಗತ್ತಿನಲ್ಲಿ ಕೊರೋನವೈರಸ್ ಭೀತಿ ಆತಂಕಕಾರಿಯಾದ ಮಟ್ಟದಲ್ಲಿ ಇದೆ. ಆರ್ಥಿಕ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ಹೊಡೆತವನ್ನು ಅನುಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆಯನ್ನು ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.
ಸ್ವತಃ ನೆತನ್ಯಾಹು ಅವರೇ ಮೋದಿಯವರಿಗೆ ಫೋನಾಯಿಸಿ ಮಾತುಕತೆಯನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.
“ನಾನು ಭಾರತದ ಪ್ರಧಾನಿ, ಗೆಳೆಯ ನರೇಂದ್ರ ಮೋದಿಯವರಿಗೆ ಫೋನಾಯಿಸಿ ಮಾತನಾಡಿದ್ದೇನೆ. ನಾವು ವಿವಿಧ ದೇಶಗಳಿಂದ ಪೂರೈಕೆ ಮಾರ್ಗಗಳನ್ನು ಅವಲಂಬಿಸಿದ್ದೇವೆ. ನಾವು ಇದನ್ನು ಸಾರ್ವಕಾಲಿಕವಾಗಿ ಪರಿಶೀಲಿಸುತ್ತಿದ್ದೇವೆ” ಎಂದು ನೆತನ್ಯಾಹು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ, ಇಸ್ರೇಲಿ ಪ್ರಧಾನಿ ಕಚೇರಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮೋದಿಯವರೊಂದಿಗೆ ನೆತನ್ಯಾಹು ಚರ್ಚಿಸಿದ ವಿಷಯವನ್ನು ಉಲ್ಲೇಖಿಸಿಲ್ಲ.
ವೈರಸ್ ಹರಡುವಿಕೆಯಿಂದ ಎದುರಾಗುವ ಸವಾಲುಗಳ ಹಿನ್ನಲೆಯಲ್ಲಿ ಆರ್ಥಿಕ ಚಟುವಟಿಕೆಗೆ ಅನುಕೂಲವಾಗುವಂತೆ ಇಸ್ರೇಲ್ ಪ್ರಧಾನಿ 10 ಬಿಲಿಯನ್ ಎನ್ಐಎಸ್ (2.86 ಬಿಲಿಯನ್ ಡಾಲರ್) ಪ್ಯಾಕೇಜ್ ಘೋಷಿಸಿದ್ದಾರೆ. “ಇಸ್ರೇಲಿ ಆರ್ಥಿಕತೆಯು ವಿಶ್ವದ ಹೆಚ್ಚಿನ ಆರ್ಥಿಕತೆಗಳಿಗಿಂತ ಉತ್ತಮ ಪರಿಸ್ಥಿತಿಯಲ್ಲಿದೆ. ನಿರುದ್ಯೋಗ ಕಡಿಮೆ, ಬೆಳವಣಿಗೆ ಹೆಚ್ಚಾಗಿದೆ ಮತ್ತು ಜಿಡಿಪಿ ಅನುಪಾತ ಉತ್ತಮವಾಗಿದೆ” ಎಂದು ನೆತನ್ಯಾಹು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಹುಟ್ಟಿದ ಮಾರಣಾಂತಿಕ ಕೊರೋನವೈರಸ್ 4,200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 107 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 117,330 ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.