ನವದೆಹಲಿ: ಕೊರೋನವೈರಸ್ ಪೀಡಿತ ಕ್ಯಾರೆಂಟೈನ್ಡ್ ಕ್ರೂಸ್ ಹಡಗು ಡೈಮಂಡ್ ಪ್ರಿನ್ಸೆಸ್ನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ 5 ಸದಸ್ಯರು ಮತ್ತು 119 ಭಾರತೀಯರನ್ನು ಹೊತ್ತ ವಿಶೇಷ ಏರ್ಇಂಡಿಯಾ ವಿಮಾನ ಗುರುವಾರ ನವದೆಹಲಿಗೆ ಬಂದಿಳಿದಿದೆ.
ಜನರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಜಪಾನ್ ಅಧಿಕಾರಿಗಳಿಗೆ ಭಾರತ ಸರ್ಕಾರ ಧನ್ಯವಾದಗಳನ್ನು ಅರ್ಪಿಸಿದೆ.
“ಏರ್ ಇಂಡಿಯಾ ವಿಮಾನವು ಟೋಕಿಯೊದಿಂದ ದೆಹಲಿಗೆ ಬಂದಿಳಿದಿದೆ, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರುವಿನ 5 ಪ್ರಜೆಗಳು ಮತ್ತು 119 ಭಾರತೀಯರನ್ನು ಹೊತ್ತು ಈ ವಿಮಾನ ಇಳಿದಿದೆ. COVID-19 ಕಾರಣದಿಂದಾಗಿ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಇವರನ್ನು ನಿರ್ಬಂಧಕ್ಕೊಳಪಡಿಸಲಾಗಿತ್ತು. ಜಪಾನಿನ ಅಧಿಕಾರಿಗಳ ಸಹಾಯಕ್ಕಾಗಿ ಧನ್ಯವಾದಗಳು. ಏರ್ ಇಂಡಿಯಾಗೆ ಮತ್ತೊಮ್ಮೆ ಧನ್ಯವಾದ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
Air India flight has just landed in Delhi from Tokyo,carrying 119 Indians & 5 nationals from Sri Lanka,Nepal, South Africa&Peru who were quarantined onboard the #DiamondPrincess due to #COVID19. Appreciate the facilitation of Japanese authorities.
Thank you @airindiain once again— Dr. S. Jaishankar (@DrSJaishankar) February 26, 2020
ಐಷಾರಾಮಿ ಕ್ರೂಸ್ ಹಡಗಿನಲ್ಲಿದ್ದ 3,711 ಜನರಲ್ಲಿ 132 ಸಿಬ್ಬಂದಿ ಮತ್ತು ಆರು ಪ್ರಯಾಣಿಕರು ಸೇರಿದಂತೆ 138 ಭಾರತೀಯರು ಆಗಿದ್ದರು. ಒಬ್ಬ ಪ್ರಯಾಣಿಕರಿಗೆ ಕೊರೋನವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಇಡೀ ಹಡಗಿನಲ್ಲಿದ್ದ ಜನರನ್ನು ಫೆಬ್ರವರಿ 5 ರಿಂದ ಜಪಾನ್ ನಿರ್ಬಂಧಿಸಿತ್ತು.
37 ದೇಶಗಳಲ್ಲಿ 80,000 ಕ್ಕೂ ಹೆಚ್ಚು ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಕಳೆದ ಕೆಲವು ತಿಂಗಳುಗಳಲ್ಲಿ 2,600 ಕ್ಕೂ ಹೆಚ್ಚು ಸಾವುಗಳಿಗೆ ಈ ಸೋಂಕು ಕಾರಣವಾಗಿದೆ. ಚೀನಾದ ವುಹಾನ್ ನಗರ ಕೊರೋನ ವೈರಸ್ನಿಂದ ತೀವ್ರವಾಗಿ ಬಾಧಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.