
ಟೆಹ್ರಾನ್: ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯ ಬಳಿಕ ಇರಾನ್ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖಮೇನಿ ಹತ್ಯೆ ಕೆಲವರಿಗೆ ದುಖಃದ ವಿಚಾರವಾದರೆ, ಇನ್ನು ಕೆಲವರಿಗೆ ಖುಷಿಯ ಸುದ್ದಿಯಾಗಿದೆ.
ಖಮೇನಿಯನ್ನು ಹತ್ಯೆಗೈದಿರುವುದನ್ನು ಖಂಡಿಸಿ ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಭಾರತದ ಹಲವೆಡೆ ಭಾರೀ ಪ್ರತಿಭಟನೆ ನಡೆದಿದೆ. ಖಮೇನಿ ಅನುಯಾಯಿಗಳು ಕಪ್ಪು ಬಟ್ಟೆ ಧರಿಸಿ, ರೋಧಿಸುತ್ತಾ, ತಲೆಚಚ್ಚಿಕೊಳ್ಳುತ್ತಾ ಇಸ್ರೇಲ್, ಅಮೇರಿಕಾ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಇವರನ್ನು ಇರಾನ್ ದೇಶದ ಮಹಿಳೆಯರೇ ಅಣಕಿಸಿರುವುದು ಭಾರೀ ಸುದ್ದಿಯಾಗುತ್ತಿದೆ.
ಖಮೇನಿ ಸಾವನ್ನು ಸಂಭ್ರಮಿಸುತ್ತಿರುವ ಇರಾನ್ ದೇಶದ ಮಹಿಳೆಯರು, ಭಾರತದ ಮಹಿಳೆಯರು ರೋಧಿಸುವುದನ್ನು ಅಣಕಿಸುತ್ತಾ ವಿಡಿಯೋ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ನಡುವೆ ಇರಾನ್ ಮಹಿಳೆಯೊಬ್ಬರು ವಿಡಿಯೋ ಮೂಲಕ “ನೀವು ಇರಾನಿಯನ್ನರು ಆಗಿರದಿದ್ದರೆ ನಿಮ್ಮ ನಾಟಕ ನಿಲ್ಲಿಸಿ, ನಾವು ಇಲ್ಲಿ ಖುಷಿಯಾಗಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
“If you are not Iranian, stop the drama. We are all happy.”
An Iranian girl has a message for Indian Muslims. 👇😂 pic.twitter.com/Ba5mOXOoPD
— Abhinav Mishra (@abhinav_blogger) March 2, 2026
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


