News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಅಹ್ಮದಾಬಾದ್ ಏರ್­ಪೋರ್ಟ್­ನಲ್ಲಿ ‘ಶಂಖನಾದ’ದ ಮೂಲಕ ಟ್ರಂಪ್­ಗೆ ಸ್ವಾಗತ 

ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮುಂದಿನ ವಾರ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಂದರ್ಭದಲ್ಲಿ ಅವರನ್ನು ಶಂಖನಾದ ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಸ್ವಾಗತಿಸಲಾಗುತ್ತದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ. ಅಮೆರಿಕದ ಅಧ್ಯಕ್ಷರ ಅಧಿಕೃತ...

Read More

13 ಗಂಟೆ ಹಿಮ್ಮುಖವಾಗಿ ಓಡಿ ಗಿನ್ನೆಸ್ ದಾಖಲೆಗೆ ಪ್ರಯತ್ನಿಸಿದ ಗುಜರಾತಿನ ಇಬ್ಬರು ಮಹಿಳೆಯರು

ಅಹ್ಮದಾಬಾದ್ : ಮಹಾತ್ಮ ಗಾಂಧಿಯವರ 150 ನೇ ಜನ್ಮ ವರ್ಷಾಚರಣೆಯಂದು ಗುಜರಾತಿನ ಬಾರ್ಡೋಲಿಯ ಇಬ್ಬರು ಮಹಿಳೆಯರು 13 ಗಂಟೆಗಳಲ್ಲಿ ಒಟ್ಟು 53 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿದ್ದಾರೆ. ಇವರು ಪೂರ್ಣ ಓಟವನ್ನು ಹಿಮ್ಮುಖವಾಗಿ ಓಡಿದ್ದು ವಿಶೇಷ. ಟಿ-ಶರ್ಟ್ಸ್ ಮತ್ತು ಟ್ರ್ಯಾಕ್ ಪ್ಯಾಂಟ್­ ಧರಿಸಿ ಓಟ...

Read More

ಜಮ್ಮು ಕಾಶ್ಮೀರದ ಬಗೆಗಿನ ನಿರ್ಧಾರ ಸರ್ದಾರ್ ಪಟೇಲ್­ರಿಂದ ಪ್ರೇರಿತಗೊಂಡಿದ್ದು: ಮೋದಿ

ಕೇವಡಿಯಾ: ಜಮ್ಮು ಕಾಶ್ಮೀರದ ಬಗೆಗೆ ನಾವು ತೆಗೆದುಕೊಂಡ ನಿರ್ಧಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಂದ ಪ್ರೇರಿತಗೊಂಡಿದ್ದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ನಾವು ದಶಕಗಳ ಹಳೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ....

Read More

ಮೋದಿ ಜನ್ಮದಿನಕ್ಕೆ 700 ಅಡಿ ಎತ್ತರದ 7 ಸಾವಿರ ಕೆಜಿಯ ಕೇಕ್ ತಯಾರಿಸಿದ ಗುಜರಾತ್ ಬೇಕರಿ

ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿರುವ ಬೇಕರಿಗಳು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುವ ಯೋಜನೆಗಳನ್ನು ಹಾಕಿಕೊಂಡಿವೆ. ಸೂರತ್‌ನ ಬ್ರೆಡ್‌ಲೈನ್ ಬೇಕರಿ 7,000 ಕೆಜಿ ತೂಕದ 700 ಅಡಿ ಉದ್ದದ ಕೇಕ್ ತಯಾರಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಮೋದಿಯವರ...

Read More

ನಿಷ್ಕಳಂಕ ಮಹಾದೇವ ಮಂದಿರ ಎಂಬ ವಿಸ್ಮಯ

ಜಗತ್ತಿನಲ್ಲಿ ವಿಸ್ಮಯಗಳಿಗೆ ಕೊರತೆಯಿಲ್ಲ. ಕೆಲವು ಪ್ರಕೃತಿ ನಿರ್ಮಿತ ವಿಸ್ಮಯಗಳಾದರೆ ಇನ್ನು ಕೆಲವು ಮನುಷ್ಯ ನಿರ್ಮಿತ ವಿಸ್ಮಯಗಳು. ಮನುಷ್ಯ ನಿರ್ಮಿತ ವಿಸ್ಮಯಗಳನ್ನು ನೋಡಿದರೆ ಅಚ್ಚರಿ ಎನಿಸಬಹುದಾದರೂ ಮನುಷ್ಯನೇ ಅದರ ಹಿಂದಿನ ಸೃಷ್ಟಿಕರ್ತನಾದ್ದರಿಂದ ಮನುಷ್ಯ ಪ್ರಯತ್ನದಿಂದ ಏನೂ ಬೇಕಾದರೂ ಸಾಧ್ಯ ಎಂಬ ಭಾವ ಮನದಲ್ಲಿ...

Read More

2019ರ ಭೇಟಿ ಕೊಡಬೇಕಾದ ವಿಶ್ವದ ತಾಣಗಳ ಟೈಮ್ಸ್­ ಪಟ್ಟಿಯಲ್ಲಿ ಏಕತಾ ಪ್ರತಿಮೆಗೆ ಸ್ಥಾನ

ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥವಾಗಿ ಗುಜರಾತಿನ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾದ 182 ಮೀಟರ್ ಎತ್ತರದ ಪ್ರತಿಮೆಯನ್ನು ಟೈಮ್ ನಿಯತಕಾಲಿಕೆಯು ತನ್ನ ವಿಶ್ವದ ಶ್ರೇಷ್ಠ ಸ್ಥಳ 2019 ರ ಎರಡನೇ ವಾರ್ಷಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯ...

Read More

ಗುಜರಾತ್ : ವಿದ್ಯಾರ್ಥಿಗಳು ತಪ್ಪು ಮಾಡಿದರೆ ಗಿಡ ನೆಡುವ ಶಿಕ್ಷೆ

ಸೂರತ್: ಎಲ್ಲರಿಗೂ ಮಾದರಿ ಎನಿಸುವ ಪರಿಸರ ಸ್ನೇಹಿಯಾದ ಕ್ರಮವನ್ನು ತೆಗೆದುಕೊಂಡಿರುವ ಗುಜರಾತ್ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಶೈಕ್ಷಣಿಕ  ಸಂಸ್ಥೆಯೊಂದು, ತನ್ನ ಆವರಣದಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಗಿಡ ನೆಡುವ ಶಿಕ್ಷೆಯನ್ನು ನೀಡುತ್ತಿದೆ. ಶ್ರೀ ಗಿಜುಭಾಯ್ ಛಗನ್ಭಾಯ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್, ಇಂಟೀರಿಯರ್ ಡಿಸೈನ್ ಆ್ಯಂಡ್ ಫೈನ್...

Read More

ಗುಜರಾತಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಕೆಮಿಕಲ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸೆಂಟರ್

ನವದೆಹಲಿ: ಗುಜರಾತ್ ರಾಜ್ಯಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಕೊಡುಗೆಯನ್ನು ನೀಡಲು ಸಜ್ಜಾಗಿದೆ. ಈ ರಾಜ್ಯದಲ್ಲಿ ಮೊಟ್ಟಮೊದಲ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಸಿಐಸಿಇಟಿ)ಯನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ದೇಶದ ಮೊದಲ ಸಿಐಸಿಇಟಿ ಕೂಡ ಆಗಲಿದೆ. ಸೂರತ್‌ನಲ್ಲಿ ಅಥವಾ ವತ್ವಾದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗುವುದು...

Read More

ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರವಾಹದಿಂದ ರಕ್ಷಿಸಿದ ಪೊಲೀಸ್­ಗೆ ಶ್ಲಾಘನೆಗಳ ಸುರಿಮಳೆ

ಅಹ್ಮದಾಬಾದ್: ಪ್ರವಾಹದ ನಡುವೆ ಮಕ್ಕಳಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಸುರಕ್ಷಿತವಾದ ಪ್ರದೇಶಕ್ಕೆ ಸ್ಥಳಾಂತರ ಮಾಡಿದ ಗುಜರಾತಿನ ಪೊಲೀಸ್ ಕಾನ್ಸ್­ಸ್ಟೇಬಲ್­ಗೆ ಅವರಿಗೆ ಎಲ್ಲಾ ಕಡೆಯಿಂದಲೂ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರೂ ಇವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ...

Read More

ಸಮುದ್ರ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿದ ಗುಜರಾತ್

ಅಹ್ಮದಾಬಾದ್:  ಗುಜರಾತ್ ಸರ್ಕಾರವು ಜಾಮ್‌ನಗರ ಜಿಲ್ಲೆಯ ಜೋಡಿಯಾದಲ್ಲಿ 100 ಎಂಎಲ್‌ಡಿ (ದಿನಕ್ಕೆ ಮಿಲಿಯನ್ ಲೀಟರ್) ಸಾಮರ್ಥ್ಯದ ಸಮುದ್ರದ ನೀರಿನ ಶುದ್ಧೀಕರಣ ಘಟಕವನ್ನು ಮತ್ತು 27 ಕೋಟಿ ಲೀಟರ್ ಸಾಮರ್ಥ್ಯದ ಏಳು ಸಮುದ್ರ ನೀರು ಶುದ್ಧೀಕರಣ ಘಟಕಗಳನ್ನು ಸೌರಾಷ್ಟ್ರ-ಕಚ್ಛ್ ಪ್ರದೇಶದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ....

Read More

Recent News

Back To Top