
2001 ರಲ್ಲಿ ಬಾಮಿಯಾನ್ ಬುದ್ಧ ಪ್ರತಿಮೆಗಳ ಧ್ವಂಸವು ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು. ಆದರೆ ಅದೇನು ಹೊಸತ್ತಾಗಿರಲಿಲ್ಲ. ಭಾರತೀಯ ಉಪಖಂಡವು ಸಾವಿರಾರು ವರ್ಷಗಳ ಹಿಂದಿನಿಂದಲೂ ಇಂತಹ ವಿನಾಶವನ್ನು ನೋಡುತ್ತಲೇ ಬಂದಿದೆ. ಕ್ರಿ.ಶ. 1025 ರಲ್ಲಿ, ‘ಬಟ್-ಶಿಕಾನ್’ (ಮೂರ್ತಿ ಭಂಜಕ) ಎಂಬ ಬಿರುದನ್ನು ಪಡೆಯಲು ಮಹಮ್ಮದ್ ಘಜ್ನಿ, ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ, ಗರ್ಭಗುಡಿಯನ್ನು ನಾಶಪಡಿಸಿ, ಅದರ ಸಂಪತ್ತನ್ನು ಲೂಟಿ ಮಾಡಿದ್ದ ಎಂಬುದು ನಮಗೆಲ್ಲಾ ತಿಳಿದೇ ಇರುವ ಸಂಗತಿ. ಆದರೆ, ಈ ಹುಚ್ಚುತನ ಭಾರತದಲ್ಲಿ ಹುಟ್ಟಿಕೊಂಡಿರಲಿಲ್ಲ. ಸೋಮನಾಥಕ್ಕಿಂತ 25 ವರ್ಷಗಳ ಮೊದಲು (ಕ್ರಿ.ಶ. 1001-1006 ರ ನಡುವೆ), ಘಜ್ನಿ ಬಾಮಿಯಾನ್ ಕಣಿವೆಯ ಬೃಹತ್ ಬುದ್ಧನ ಪ್ರತಿಮೆಗಳ ಮೇಲೆ ತನ್ನ ದೃಷ್ಟಿ ನೆಟ್ಟಿದ್ದ. ಸೋಮನಾಥವನ್ನು ಧ್ವಂಸಗೊಳಿಸಿದ ಅದೇ ಸಿದ್ಧಾಂತವನ್ನು ಅಫ್ಘಾನಿಸ್ತಾನದ ಗುಹೆಗಳಲ್ಲಿ ‘ಪೂರ್ವಾಭ್ಯಾಸ’ ಮಾಡಲಾಗುತ್ತಿತ್ತು. ಆತ ನಡೆಸಿದ ಬಾಮಿಯನ್ ಬುದ್ಧ ವಿನಾಶವು ಹಠಾತ್ ಅಪರಾಧವಾಗಿರಲಿಲ್ಲ. ಅದು ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ದೀರ್ಘ, ವ್ಯವಸ್ಥಿತ ದಾಳಿಗಳ ಸರಣಿಯಾಗಿತ್ತು.
ಘಜ್ನಿ ಮನಸ್ಥಿತಿ: ಮತಾಂಧತೆಯ ಅಡಿಪಾಯ
ಮಹಮ್ಮದ್ ಘಜ್ನಿಗೆ ಇತರ ಧರ್ಮಗಳ ಮೇಲಿದ್ದ ತೀವ್ರ ದ್ವೇಷವು ಬಾಮಿಯಾನ್ನ ಬುದ್ಧ ವಿಗ್ರಹಗಳ ಮೇಲೆ ಅವನ ಕಣ್ಣು ಹಾಯುವಂತೆ ಮಾಡಿತು. 55 ಮೀಟರ್ ಎತ್ತರದ ಕಲ್ಲಿನ ಪ್ರತಿಮೆಗಳು 11 ನೇ ಶತಮಾನದ ತಂತ್ರಜ್ಞಾನದ ವ್ಯಾಪ್ತಿಯನ್ನು ಮೀರಿದ್ದವು. ಇಂತಹ ಬೃಹತ್ ಪ್ರತಿಮೆಗಳನ್ನು ನಾಶಪಡಿಸುವುದು ಆತನ ಸಾಮರ್ಥ್ಯವನ್ನು ಮೀರಿದ್ದ ಕಾರ್ಯವಾಗಿತ್ತು, ಇದರಿಂದ ನಿರಾಶೆಗೊಂಡ ಅವನು ಹತ್ತಿರದ ಬೌದ್ಧ ಮಠಗಳನ್ನು ಲೂಟಿ ಮಾಡಿದ ಮತ್ತು ‘ಮೂರ್ತಿ ಭಂಜಕ’ ಬಿರುದನ್ನು ಪಡೆಯಲು ಅಮೂಲ್ಯವಾದ ಕಲಾಕೃತಿಗಳನ್ನು ಕದ್ದ. ಘಜ್ನಿ ಇಸ್ಲಾಂ ಮತಕ್ಕೆ ವಿರುದ್ಧವಾದ ನಾಗರಿಕತೆಯ ಎಲ್ಲಾ ಸಂಕೇತಗಳನ್ನು ಅಳಿಸಿಹಾಕುವ ಅಪಾಯಕಾರಿ ಪ್ರವೃತ್ತಿಯನ್ನು ಪ್ರಾರಂಭಿಸಿದ.
ಮೊಘಲ್ ಪರಂಪರೆ: ಬಾಬರನಿಂದ ಔರಂಗಜೇಬನವರೆಗೆ
ಘಜ್ನಿಯೊಂದಿಗೆ ವಿನಾಶ ನಿಲ್ಲಲಿಲ್ಲ. ಬಾಬರನಿಂದ ಔರಂಗಜೇಬನವರೆಗೆ, ಪ್ರತಿಯೊಬ್ಬರು ದೈವಿಕ ಸಂಕೇತಗಳನ್ನು ಅಪವಿತ್ರಗೊಳಿಸುವ ಸಿದ್ಧಾಂತವನ್ನು ಹೊತ್ತುಕೊಂಡು ತಿರುಗಿದರು. ಬಾಬರ್ ತನ್ನ ‘ಬಾಬರ್ ನಾಮ’ದಲ್ಲಿ ದೇವಾಲಯಗಳ ನಾಶವನ್ನು ಸಮರ್ಥಿಸಿದರೆ, 17 ನೇ ಶತಮಾನದಲ್ಲಿ ಔರಂಗಜೇಬನು ಬಾಮಿಯಾನ್ಗೂ ಅದೇ ಮತಾಂಧತೆಯನ್ನು ಅನ್ವಯಿಸಿದನು. ಕಾಶಿ ವಿಶ್ವನಾಥ ಮತ್ತು ಮಥುರಾದಂತಹ ಭಾರತದಲ್ಲಿ ಸಾವಿರಾರು ದೇವಾಲಯಗಳನ್ನು ನಾಶಪಡಿಸಿದ ಅದೇ ಕ್ರೂರತೆಯನ್ನು ಬಳಸಿ ಅವನು ಬಾಮಿಯಾನ್ ಬುದ್ಧ ವಿಗ್ರಹಗಳ ಮೇಲೆ ಬೃಹತ್ ಫಿರಂಗಿಗಳನ್ನು ಬಳಸಿದನು. ಅವುಗಳನ್ನು ಶಾಶ್ವತವಾಗಿ ವಿರೂಪಗೊಳಿಸುವ ಉದ್ದೇಶದಿಂದ ಪ್ರತಿಮೆಗಳ ಮುಖ ಮತ್ತು ಕಾಲುಗಳ ಮೇಲೆ ಗುಂಡು ಹಾರಿಸಲು ಆದೇಶಿಸಿದನು.
ಪರ್ಷಿಯನ್ ಮತ್ತು ಅಫ್ಘಾನ್ ಆಕ್ರಮಣಕಾರರು
18 ನೇ ಶತಮಾನದಲ್ಲಿ, ಪರ್ಷಿಯನ್ ದೊರೆ ನಾದಿರ್ ಷಾ ದೆಹಲಿಯನ್ನು ಲೂಟಿ ಮಾಡಲು ಹೋಗುವಾಗ ಈ ಪ್ರತಿಮೆಗಳ ಮೇಲೆ ಫಿರಂಗಿಗಳಿಂದ ದಾಳಿ ಮಾಡಿದ. ನಂತರ, 19 ನೇ ಶತಮಾನದಲ್ಲಿ, ಆಫ್ಘನ್ ದೊರೆ ಅಮೀರ್ ಅಬ್ದುರ್ ರೆಹಮಾನ್ ಖಾನ್ ಬುದ್ಧ ಪತ್ರಿಮೆಗಳ ಮುಖಗಳನ್ನು ಮತ್ತಷ್ಟು ವಿರೂಪಗೊಳಿಸಲು ಫೈರ್-ಗನ್ಗಳನ್ನು ಬಳಸಿದ. ಸಾವಿರ ವರ್ಷಗಳ ಕಾಲ, ಈ ಪ್ರತಿಮೆಗಳು ನಿರಂತರ ದಾಳಿಗೆ ಒಳಗಾದವು. ಕಲ್ಲಿನ ಸ್ಮಾರಕಗಳು ಗಾಯಗೊಂಡ ಸಂಕೇತಗಳಾಗಿ ಉಳಿದಿದ್ದರೂ, ಪ್ರತಿಯೊಬ್ಬ ಆಕ್ರಮಣಕಾರರಿಗೂ ಒಂದೇ ಗುರಿ ಇತ್ತು – ತಮ್ಮದೇ ಆದ ನಂಬಿಕೆಗಳನ್ನು ಹೊರತುಪಡಿಸಿ ಇತರ ನಂಬಿಕೆಗಳ ಬಗ್ಗೆ ತೀವ್ರವಾದ ದ್ವೇಷವನ್ನು ಪ್ರದರ್ಶಿಸುವುದು.
2001 ತಾಲಿಬಾನ್ ವಿನಾಶ – ಉನ್ಮಾದದ ಪರಾಕಾಷ್ಠೆ
ಮಾರ್ಚ್ 2, 2001 ರಂದು, ಆ ಸಹಸ್ರಮಾನದ ಮನಸ್ಥಿತಿಯು ಅತ್ಯಂತ ಭಯಾನಕ ರೂಪವನ್ನು ಪಡೆದುಕೊಂಡಿತು. ಬಾಮಿಯಾನ್ ಕಣಿವೆ ತಾಲಿಬಾನ್ಗಳ ಕೂಗಿಗೆ ನಡುಗಿತು, 1,500 ವರ್ಷಗಳ ಮಾನವ ಪರಂಪರೆಯನ್ನು “ಸುಳ್ಳು ಪ್ರತಿಮೆಗಳು” ಎಂದು ಕರೆದಿತು. ಪ್ರತಿಮೆಗಳನ್ನು ಇಟ್ಟುಕೊಳ್ಳುವುದು “ಪಾಪ” ಎಂದು ಅವರು ಘೋಷಿಸಿದರು. ಆರಂಭದಲ್ಲಿ ಬಂದೂಕುಗಳು ಮತ್ತು ಫಿರಂಗಿ ದಳಗಳಿಂದ ಪತ್ರಿಮೆ ನಾಶ ಮಾಡಲು ವಿಫಲವಾದ ತಾಲಿಬಾನ್, ವಿನಾಶದ ವಿಳಂಬಕ್ಕೆ ಪ್ರಾಯಶ್ಚಿತ್ತವಾಗಿ (ಕಫ್ಫಾರಾ) 100 ಹಸುಗಳನ್ನು ಬಲಿ ನೀಡುವುದಾಗಿ ಪ್ರತಿಜ್ಞೆ ಮಾಡಿತು. ಇದರ ಭಾಗವಾಗಿ, ಮೊದಲು 12 ಹಸುಗಳನ್ನು ಅಫ್ಘಾನ್ ಅಧ್ಯಕ್ಷೀಯ ಅರಮನೆಯಲ್ಲಿ ವಧಿಸಲಾಯಿತು. ಉಳಿದ ಹಸುಗಳನ್ನು ದೇಶದ ಇತರ ಭಾಗಗಳಲ್ಲಿ ಬಲಿ ನೀಡಲಾಯಿತು.
ಕೊನೆಗೆ, ಮೂರು ದಿನಗಳವರೆಗೆ ಪ್ರತಿಮೆಗಳ ಸುತ್ತಲೂ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಇರಿಸಲಾಯಿತು. ಸ್ಫೋಟವನ್ನು ನಿಯಂತ್ರಿಸುವ ತಂತಿಗಳನ್ನು ಹತ್ತಿರದ ಮಸೀದಿಗೆ ವಿಸ್ತರಿಸಲಾಯಿತು ಮತ್ತು ಪ್ರತಿಮೆಗಳನ್ನು ಅಲ್ಲಿಂದ ಸ್ಫೋಟಿಸಲಾಯಿತು. ಪ್ರತಿಮೆಗಳನ್ನು ಸಂಪೂರ್ಣವಾಗಿ ನೆಲಕ್ಕೆ ಕೆಡವಲು ಅವರಿಗೆ 25 ದಿನಗಳು ಬೇಕಾಯಿತು. ವಿನಾಶ ಪೂರ್ಣಗೊಂಡ ನಂತರ, ತಾಲಿಬಾನ್ಗಳು ಗಾಳಿಯಲ್ಲಿ ಗುಂಡು ಹಾರಿಸಿ ನೃತ್ಯ ಮಾಡುವ ಮೂಲಕ ಆಚರಿಸಿದರು. ಆಚರಣೆಯ ಭಾಗವಾಗಿ, ಒಂಬತ್ತು ಹಸುಗಳನ್ನು ಬಲಿ ನೀಡಲಾಯಿತು. ಟನ್ಗಟ್ಟಲೆ ಸ್ಫೋಟಕಗಳು, ಟ್ಯಾಂಕ್ ವಿರೋಧಿ ಗಣಿ ಮತ್ತು ರಾಕೆಟ್ಗಳೊಂದಿಗೆ, ಅವರು ಮಧ್ಯಕಾಲೀನ ಆಕ್ರಮಣಕಾರರ ಕನಸನ್ನು ನನಸಾಗಿಸಿದರು. ಇದು ಇತಿಹಾಸದ ಮೇಲಿನ ಯುದ್ಧದ ಅಂತಿಮ ಅಧ್ಯಾಯವಾಗಿದೆ – ‘ಮೂರ್ತಿ ಭಂಜಕ’ ರಾಗುವ ಉನ್ಮಾದವು ಬೃಹತ್ ಪ್ರತಿಮೆಗಳನ್ನು ಧೂಳೀಕರಿಸಿದೆ.
ಅವಶೇಷಗಳಲ್ಲಿ ಬಹಿರಂಗಗೊಂಡ ಭಾರತೀಯ ಸತ್ಯ
ತಾಲಿಬಾನ್ಗಳು ಪ್ರತಿಮೆಗಳನ್ನು ಕೆಡವಿದಾಗಲೂ, ಅವಶೇಷಗಳು ಸ್ವತಃ ಅಳಿಸಲಾಗದ ರಹಸ್ಯಗಳನ್ನು ಬಹಿರಂಗಪಡಿಸಿವೆ. ಅಲ್ಲಿ, ವಿಶ್ವದ ಅತ್ಯಂತ ಹಳೆಯ ತೈಲ ವರ್ಣಚಿತ್ರಗಳು, ಸಂಸ್ಕೃತ ಗ್ರಂಥಗಳು ಮತ್ತು ಗುಹೆಗಳ ಕೆಳಗೆ ಅಡಗಿರುವ ‘ಪರಿನಿರ್ವಾಣ’ ಬುದ್ಧನ 19 ಮೀಟರ್ ಪ್ರತಿಮೆಯನ್ನು ಹೊರತೆಗೆಯಲಾಗಿದೆ. ಗುಪ್ತರ ಕಾಲದ ಭಾರತೀಯ ಕಲೆ ಮತ್ತು ಜ್ಞಾನದ ಪ್ರಭಾವವು ಅಫ್ಘಾನಿಸ್ತಾನದ ಹೃದಯಭಾಗವನ್ನು ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂಬುದನ್ನು ಅವು ಪ್ರದರ್ಶಿಸಿವೆ. ಬಾಮಿಯಾನ್ ಬೆಟ್ಟಗಳಲ್ಲಿನ ಆ ಖಾಲಿ ಗೂಡುಗಳು ಕೇವಲ ಖಾಲಿ ಸ್ಥಳಗಳಲ್ಲ; ಅವು ಆಧುನಿಕ ಜಗತ್ತಿಗೆ ಒಂದು ಕಠೋರ ಎಚ್ಚರಿಕೆ. ಬಾಮಿಯಾನ್ ಬುದ್ಧರ ಪತನವು ಕೇವಲ ಬಂಡೆಗಳ ಕುಸಿತವಲ್ಲ, ಅದು ಮಾನವ ನಾಗರಿಕತೆಯ ಮೇಲೆ ಸಾವಿರ ವರ್ಷಗಳ ದಾಳಿಯ ಪರಾಕಾಷ್ಠೆಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


