ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥವಾಗಿ ಗುಜರಾತಿನ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾದ 182 ಮೀಟರ್ ಎತ್ತರದ ಪ್ರತಿಮೆಯನ್ನು ಟೈಮ್ ನಿಯತಕಾಲಿಕೆಯು ತನ್ನ ವಿಶ್ವದ ಶ್ರೇಷ್ಠ ಸ್ಥಳ 2019 ರ ಎರಡನೇ ವಾರ್ಷಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ.
ಗುಜರಾತ್ನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ್ ಅಣೆಕಟ್ಟಿನ ಬಳಿ ಸಾಧು ಬೆಟ್ ಎಂಬ ದ್ವೀಪದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ ಮತ್ತು ಇದು ಯುನೈಟೆಡ್ ಸ್ಟೇಟ್ಸ್ನ ಸ್ಟ್ಯಾಚು ಆಫ್ ಲಿಬರ್ಟಿಗಿಂತ ಎರಡು ಪಟ್ಟು ಎತ್ತರವಾಗಿದೆ.
ಈ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018ರ ಅಕ್ಟೋಬರ್ 31ರಂದು ಉದ್ಘಾಟಿಸಿದರು. ಈ ಪ್ರತಿಮೆ ಭಾರತದ ಏಕತೆಯನ್ನು ವ್ಯಾಖ್ಯಾನಿಸುವ ಸ್ಮಾರಕವಾಗಿದೆ. ಇದನ್ನು ಸ್ಟ್ಯಾಚು ಆಫ್ ಯುನಿಟಿ (ಏಕತಾ ಪ್ರತಿಮೆ) ಎಂದು ಕರೆಯಲಾಗುತ್ತದೆ.
ಒಂದು ಕಡೆ ಈ ಪ್ರತಿಮೆಯು ದೇಶದ ಉಕ್ಕಿನ ಮನುಷ್ಯ ಮತ್ತು ಭಾರತದ ಮೊದಲ ಉಪ ಪ್ರಧಾನಮಂತ್ರಿಗೆ ಗೌರವ ಸಲ್ಲಿಸಿದರೆ, ಇನ್ನೊಂದು ಕಡೆ ಇದು ಅತಿದೊಡ್ಡ ಪ್ರವಾಸಿ ಆಕರ್ಷಣೆಯಾಗಿದೆ, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಇದು ತನ್ನತ್ತ ಸೆಳೆಯುತ್ತಿದೆ.
ಮುಂಬಯಿಯ ಸೊಹೊ ಹೌಸ್ ಕೂಡ ಟೈಮ್ ನಿಯತಕಾಲಿಕೆಯ ವಿಶ್ವದ ಅತ್ಯುತ್ತಮ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅರೇಬಿಯನ್ ಸಮುದ್ರಕ್ಕೆ ಮುಖಮಾಡಿರುವ 11 ಅಂತಸ್ತಿನ ಕಟ್ಟಡ ಇದಾಗಿದೆ. ಸೊಹೊ ಹೌಸ್ ಲೈಬ್ರೆರಿ, 34 ಆಸನಗಳ ಸಿನೆಮಾ, ಮೇಲ್ಛಾವಣಿ ಬಾರ್ ಮತ್ತು ಸ್ವಿಮ್ಮಿಂಗ್ ಪೂಲ್ ಅನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.