ಅಹ್ಮದಾಬಾದ್: ಗುಜರಾತ್ ಸರ್ಕಾರವು ಜಾಮ್ನಗರ ಜಿಲ್ಲೆಯ ಜೋಡಿಯಾದಲ್ಲಿ 100 ಎಂಎಲ್ಡಿ (ದಿನಕ್ಕೆ ಮಿಲಿಯನ್ ಲೀಟರ್) ಸಾಮರ್ಥ್ಯದ ಸಮುದ್ರದ ನೀರಿನ ಶುದ್ಧೀಕರಣ ಘಟಕವನ್ನು ಮತ್ತು 27 ಕೋಟಿ ಲೀಟರ್ ಸಾಮರ್ಥ್ಯದ ಏಳು ಸಮುದ್ರ ನೀರು ಶುದ್ಧೀಕರಣ ಘಟಕಗಳನ್ನು ಸೌರಾಷ್ಟ್ರ-ಕಚ್ಛ್ ಪ್ರದೇಶದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ. ಕುಡಿಯುವ ನೀರಿನ ಉದ್ದೇಶಗಳಿಗಾಗಿ ಇದನ್ನು ಸ್ಥಾಪನೆ ಮಾಡಲಾಗುತ್ತಿದೆ. ಅಲ್ಲಿನ ಸಚಿವ ಕುನ್ವರ್ಜಿ ಬವಾಲಿಯಾ ವಿಧಾನಸಭೆಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಜೋಡಿಯಾದಲ್ಲಿನ ಸಮುದ್ರದ ನೀರಿನ ಶುದ್ಧೀಕರಣ ಘಟಕವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ‘ಜೋಡಿಯಾ ವಾಟರ್ ಡಿಸಿಲಿನೇಶನ್ ಲಿಮಿಟೆಡ್’ ಎಂಬ ವಿಶೇಷ ಉದ್ದೇಶದ ವಾಹನ (special purpose vehicle) ಮೂಲಕ ಸ್ಥಾಪಿಸಲಾಗುವುದು, ದಿನಕ್ಕೆ 100 ಮಿಲಿಯನ್ ಲೀಟರ್ ಸಮುದ್ರದ ನೀರನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ ಎಂದಿದ್ದಾರೆ.
special purpose vehicle ಭಾರತದ ಎಸೆಲ್ ಇನ್ಫ್ರಾಪ್ರೋಜೆಕ್ಟ್ಸ್ ಲಿಮಿಟೆಡ್ (ಇಐಎಲ್) ಮತ್ತು ಸ್ಪೇನ್ನ ಅಬಿನ್ಸಾ ಇನ್ಫ್ರಾಸ್ಟ್ರಕ್ಚುರಾಸ್ ಮೀಡಿಯೊ ಆಂಬಿನ್ಟೆನ ಜಂಟಿ ಉದ್ಯಮವಾಗಲಿದ್ದು, ಘಟಕದ ಸ್ಥಾಪನೆಗೆ 750 ಕೋಟಿ ರೂ.ಹೂಡಿಕೆಯನ್ನು ಮಾಡಲಾಗುತ್ತಿದೆ ಮತ್ತು ಉಳಿದ ವೆಚ್ಚಗಳಿಗಾಗಿ ವಾರ್ಷಿಕವಾಗಿ 100 ಕೋಟಿ ರೂ.ಹೂಡಿಕೆ ಮಾಡಲಾಗುತ್ತದೆ.
ಘಟಕವನ್ನು ಸ್ಥಾಪಿಸಲು ಕಂಪನಿಗೆ ಭೂಮಿಯನ್ನು ಒದಗಿಸಿರುವ ರಾಜ್ಯ ಸರ್ಕಾರ, ಎರಡು ವರ್ಷಗಳ ಕಾಲ ಲೀಟರ್ಗೆ 70 ಪೈಸೆ ದರದಲ್ಲಿ ನೀರನ್ನು ಖರೀದಿಸಲಿದೆ, ಖರೀದಿ ಬೆಲೆ ವಾರ್ಷಿಕವಾಗಿ ಶೇಕಡಾ 3 ರಷ್ಟು ಹೆಚ್ಚಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಜೋಡಿಯಾದಲ್ಲಿ ಸ್ಥಾಪನೆಯಾಗುತ್ತಿರುವ ಘಟಕವು, ಸಮುದ್ರದ ಉಪ್ಪುನೀರನ್ನು ಸಂಸ್ಕರಿಸಲು ರಿವರ್ಸ್ ಆಸ್ಮೋಸಿಸ್ ತಂತ್ರಜ್ಞಾನವನ್ನು ಬಳಸುತ್ತದೆ. ಈ ನೀರಿನಲ್ಲಿನ ಖನಿಜಾಂಶವನ್ನು ತೆಗೆದ ಬಳಿಕ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಸಮೃದ್ಧಗೊಳಿಸುವ ಮೂಲಕ ನೀರನ್ನು ಖನಿಜೀಕರಣಕ್ಕಾಗಿ ಸಂಸ್ಕರಿಸಲಾಗುತ್ತದೆ. ಇದು 500 ಟಿಡಿಎಸ್ಗಿಂತ ಕಡಿಮೆ ಇದ್ದು ಕುಡಿಯಲು ಯೋಗ್ಯವಾಗಿರುತ್ತದೆ.
ಎಸೆಲ್ ಇನ್ಫ್ರಾಪ್ರೋಜೆಕ್ಟ್ಸ್ ಈ ಯೋಜನೆಗಾಗಿ ಅಬೆಂಗೊವಾದ ಸ್ಪ್ಯಾನಿಷ್ ತಂತ್ರಜ್ಞಾನವನ್ನು ಬಳಸಲಿದೆ. ಹಣಕಾಸು ಮತ್ತು ರಚನಾತ್ಮಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆ ಏಜೆನ್ಸಿಯ ಮೇಲೆ ಇರುತ್ತದೆ, ಆದ್ದರಿಂದ ರಾಜ್ಯ ಸರ್ಕಾರದ ಮೇಲೆ ಯೋಜನೆಗೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ. ಯೋಜನೆಗೆ ರಿಯಾಯಿತಿ ಅವಧಿ 25 ವರ್ಷಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.