ಗಾಂಧಿನಗರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮುಂದಿನ ವಾರ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಂದರ್ಭದಲ್ಲಿ ಅವರನ್ನು ಶಂಖನಾದ ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಸ್ವಾಗತಿಸಲಾಗುತ್ತದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.
ಅಮೆರಿಕದ ಅಧ್ಯಕ್ಷರ ಅಧಿಕೃತ ವಿಮಾನವಾದ ಏರ್ ಫೋರ್ಸ್ ಒನ್ನಿಂದ ಟ್ರಂಪ್ ಹೊರಬಂದ ಕೂಡಲೇ ಸುಮಾರು 19 ಕಲಾವಿದರು “ಶಂಖನಾದ” ಮೊಳಗಿಸಲಿದ್ದಾರೆ. ಇಡೀ ವಿಮಾನ ನಿಲ್ದಾಣ ಪ್ರದೇಶವು ಶಂಖನಾದಗಳೊಂದಿಗೆ ಪ್ರತಿಧ್ವನಿಸಲಿದೆ.
ಟ್ರಂಪ್ ಫೆಬ್ರವರಿ 24 ಮತ್ತು 25 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಸಾಂಪ್ರದಾಯಿಕ ಗುಜರಾತಿ ಶೈಲಿಯಲ್ಲಿ ಟ್ರಂಪ್ ಅವರನ್ನು ಸ್ವಾಗತಿಸಲಾಗುವುದು. ಏರ್ ಫೋರ್ಸ್ ಒನ್ನಿಂದಲೇ, 150 ಅಡಿ ಅಗಲದ ರೆಡ್ ಕಾರ್ಪೆಟ್ನ ಎರಡೂ ಬದಿಗಳಲ್ಲಿ ಆರು ನೃತ್ಯ ತಂಡಗಳು ‘ಬೇಡಾ ನರ್ತ್ಯ’, ‘ಜನವಿಯಾ ಧೋಲ್’, ‘ಪಾರ್ ಬೇಡಾ ನೃತ್ಯ’, ‘ಧೋಲ್ ಭೂಂಗ್ಲಿ ಶೆಹ್ನೈ’, ‘ಫೂಲ್ ಮಂದವಿ’, ‘ ಜಾಗ್ವಾಲಿ ಲೇಡಿಸ್’ ಮುಂತಾದವುಗಳನ್ನು ಸುಮಾರು 116 ಕಲಾವಿದರು ಪ್ರದರ್ಶಿಸಲಿದ್ದಾರೆ.
ಇದಲ್ಲದೆ, ವಿಮಾನ ನಿಲ್ದಾಣದಾದ್ಯಂತ ವಿಸ್ತಾರವಾದ ಹುಲ್ಲುಹಾಸಿನ ಮೇಲೆ 14 ತಂಡಗಳ 256 ಕಲಾವಿದರು ಗುಜರಾತ್ನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಚಿತ್ರಿಸುವ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. “ಅಮೆರಿಕ ಅಧ್ಯಕ್ಷರು ನೇರವಾಗಿ ವಾಷಿಂಗ್ಟನ್ನಿಂದ ಅಹಮದಾಬಾದ್ಗೆ ಬಂದಿಳಿಯಲಿದ್ದಾರೆ. ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಇದು ಗುಜರಾತ್ಗೆ ಒಂದು ಐತಿಹಾಸಿಕ ಘಟನೆಯಾಗಿದೆ” ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
“ಟ್ರಂಪ್-ಮೋದಿ ರೋಡ್ ಶೋಗೆ ಸಿದ್ಧತೆಗಳು ಬಹುತೇಕ ಮುಗಿದಿವೆ. ಟ್ರಂಪ್ ಸ್ವಾಗತದಲ್ಲಿ ಯಾವುದೇ ತೊಂದರೆಗಳು ಅಥವಾ ಕೊರತೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ವಿಶೇಷ ಕಾಳಜಿ ವಹಿಸುತ್ತಿದ್ದೇವೆ” ಎಂದು ರೂಪಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.