News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೂನ್ 21ರಂದು ಡೆಹ್ರಾಡೂನ್‌ನಲ್ಲಿ ಬೃಹತ್ ಯೋಗ ಸಮಾರಂಭ: ಮೋದಿ ಭಾಗಿ

ಡೆಹ್ರಾಡೂನ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಮುಖ ಕಾರ್ಯಕ್ರಮ ಈ ವರ್ಷ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗಿಯಾಗಲಿದ್ದಾರೆ. ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಣೆ ಮಾಡಿದ್ದು, ಇದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದೆ. ಬೃಹತ್...

Read More

ಭಾರತದ ಮಕ್ಕಳಲ್ಲಿ ಧಾರ್ಮಿಕ ಸೌಹಾರ್ದತೆಯ ನಿಲುವಿದೆ: ಅಧ್ಯಯನ

ವಾಷಿಂಗ್ಟನ್: ಭಾರತೀಯ ಮಕ್ಕಳು ಇತರ ಧರ್ಮಗಳ ಆಚರಣೆ, ನಿಯಮಗಳ ಬಗ್ಗೆ ಸೌಹಾರ್ದತೆಯನ್ನು ಬೆಳೆಸಿಕೊಂಡಿದ್ದಾರೆ ಎಂಬುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ. ಯೂನಿವಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂತಕ್ರೂಸ್ ಅಧ್ಯಯನ ಹೇಳುವಂತೆ, ‘ಭಾರತದ ಮಕ್ಕಳು ಹಿಂದೂಗಳು ಹಿಂದೂ ಪದ್ಧತಿಗಳನ್ನು, ಮುಸ್ಲಿಂರು ಮುಸ್ಲಿಂ ಪದ್ಧತಿಯನ್ನು ಅನುಸರಿಸಬೇಕೆಂಬ ನಿಲುವನ್ನು...

Read More

ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಿದೆ ಸಿಂಗಾಪುರ

ನವದೆಹಲಿ: ಸಿಂಗಾಪುರದ ಇ-ಗವರ್ನ್‌ಮೆಂಟ್ ಲೀಡರ್‌ಶಿಪ್ ಸೆಂಟರ್ ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತ್ವ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೋರೇಶನ್ ಮತ್ತು ಸಿಂಗಾಪುರದ ಇ-ಗವರ್ನ್‌ಮೆಂಟ್ ಲೀಡರ್‌ಶಿಪ್ ಸೆಂಟರ್ ಜಂಟಿಯಾಗಿ ಭಾರತದ ಕಾರ್ಯಪಡೆಯ ಕೌಶಲ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಿದೆ....

Read More

ಇಂಗ್ಲೇಂಡ್‌ನ ’ಕಿಯಾ ಸೂಪರ್ ಲೀಗ್’ನಲ್ಲಿ ಆಡಲಿದ್ದಾರೆ ಸ್ಮೃತಿ ಮಂದಣ್ಣ

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಣ್ಣ ಅವರು ಇಂಗ್ಲೇಂಡ್‌ನ ಮಹಿಳಾ ಕ್ರಿಕೆಟ ಸುಪರ್ ಲೀಗ್ ‘ಕಿಯಾ ಸೂಪರ್ ಲೀಗ್’ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ವೆಸ್ಟರ್ನ್ ಸ್ಟಾಮ್ ತಂಡದೊಂದಿಗೆ ಅವರು ಸಹಿ ಮಾಡಿಕೊಂಡಿದ್ದು, ಶೀಘ್ರದಲ್ಲೇ...

Read More

ರೂ.10ಕ್ಕೆ ಎರಡು ಹೊತ್ತಿನ ಊಟ ನೀಡುತ್ತದೆ ಸೇವಾ ಭಾರತಿ ಟ್ರಸ್ಟ್

ಹೈದರಾಬಾದ್: ಬಹುತೇಕ ಭಾರತೀಯರು ಈಗಲೂ ಎರಡು ಹೊತ್ತಿನ ಊಟಕ್ಕೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ ಹೈದರಾಬಾದ್‌ನ ಸೇವಾ ಭಾರತಿ ಟ್ರಸ್ಟ್. ಸೂರು ಕಲ್ಪಿಸುವುದು ಮಾತ್ರವಲ್ಲದೇ ದಿನಕ್ಕೆ ಎರಡು ಹೊತ್ತಿನ ಊಟವನ್ನು ಇದು ಕೇವಲ ರೂ.10ಕ್ಕೆ ನೀಡುತ್ತಿದೆ. ಸಮೀಪ...

Read More

ಟೆಕ್ಸಾಸ್: ‘ಪೈಪರ್ ಪ್ರೊಫೆಸರ್’ ಗೌರವಕ್ಕೆ ಪಾತ್ರಳಾದ ಭಾರತೀಯ ಸಂಜಾತೆ

ಹೌಸ್ಟನ್, ಟೆಕ್ಸಾಸ್: ಭಾರತೀಯ ಸಂಜಾತೆ ಪ್ರೊಫೆಸರ್ ಸಲೇಹ ಖುಮವಾಲ ಅವರು ಟೆಕ್ಸಾಸ್‌ನ ’ಮಿನ್ನೇ ಸ್ಟೀವನ್ಸ್ ಪೈಪರ್ ಫೌಂಡೇಶನ್’ ವತಿಯಿಂದ ನೀಡಲಾಗುವ ‘ಪೈಪರ್ ಪ್ರೋಪೆಸರ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಲೇಜು ಮಟ್ಟದಲ್ಲಿ ಉತ್ಕೃಷ್ಟ ಬೋಧನೆ ನೀಡುತ್ತಿರುವ ಸಲುವಾಗಿ ಗೌರವವನ್ನು ನೀಡಲಾಗಿದೆ. ಕಾಲೇಜು ಮಟ್ಟದಲ್ಲಿ ಅತ್ಯುನ್ನತ...

Read More

‘ಡಿಜಿಟಲ್ ಇಂಡಿಯಾ’ ಫಲಾನುಭವಿಗಳೊಂದಿಗೆ ಮೋದಿ ಸಂವಾದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ನಮೋ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಅವರು ಆಯೋಜಿಸುತ್ತಿರುವ ನಾಲ್ಕನೇ ಸಂವಾದ ಇದಾಗಿದೆ. ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ,...

Read More

‘ರೈಸಿಂಗ್ ಕಾಶ್ಮೀರ್’ ಸಂಪಾದಕ ಶುಜಾತ್ ಬುಖಾರಿಯನ್ನು ಹತ್ಯೆ ಮಾಡಿದ ಉಗ್ರರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯವರನ್ನು ಶ್ರೀನಗರದಲ್ಲಿನ ಅವರ ಕಛೇರಿಯ ಹೊರಭಾಗದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ದೇಶವನ್ನೇ ತಲ್ಲಣಗೊಳಿಸಿದೆ. ಬುಖಾರಿಯವರು ‘ರೈಸಿಂಗ್ ಕಾಶ್ಮೀರ್’ ನ್ಯೂಸ್‌ಪೇಪರ್ ಸಂಪಾದಕರಾಗಿದ್ದು, ಅತೀ ಸಮೀಪದಲ್ಲೇ ದುಷ್ಕರ್ಮಿಗಳು...

Read More

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ವೀರ ಯೋಧ ಔರಂಗಜೇಬ್

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಅಪಹೃತ ಯೋಧ ಔರಂಗಜೇಬ್ ಅವರ ರಕ್ತಸಿಕ್ತ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಉಗ್ರರು ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈದ್ ಹಬ್ಬದ ಪ್ರಯುಕ್ತ ಔರಂಗಜೇಬ್ ಅವರು ವಾಹನದಲ್ಲಿ ಮನೆಗೆ ತೆರಳುತ್ತಿದ್ದರು,...

Read More

ಕೋಲ್ಕಾತಾ ಸರಕು ಸಾಗಣೆ ಹಡಗಿನಲ್ಲಿ ಬೆಂಕಿ : ಎಲ್ಲಾ 22 ನಾವಿಕರ ರಕ್ಷಣೆ

ಕೋಲ್ಕಾತಾ (ಪ.ಬ): ಕಳೆದ ರಾತ್ರಿ ಎಮ್ ವಿ ಎಸ್‌ಎಸ್‌ಎಲ್ ಕೋಲ್ಕಾತಾ ಸರಕು ಸಾಗಣೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ 22 ನಾವಿಕ ಸಿಬ್ಬಂದಿಗಳನ್ನು ನೌಕಾಪಡೆಯ ರಕ್ಷಣಾ ಕಾರ್ಯಾಚರಣ ತಂಡವು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ‘ನಾಪ್ತಾ’ ಎಂಬ ರಾಸಾಯನಿಕ ಟ್ಯಾಂಕರ್‌...

Read More

Recent News

Back To Top