ನವದೆಹಲಿ: ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ಭಾರತ ಯಶಸ್ವಿಯಾದರೆ, ಅದು ಇಡೀ ಜಗತ್ತಿನ ಚಿತ್ರಣವನ್ನೇ ಬದಲಿಸಲಿದೆ ಎಂಬುದಾಗಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಅಧ್ಯಕ್ಷೆ ಮರಿಯಾ ಫೆರ್ನೆಂಡಾ ಎಸ್ಪಿನೋಸ ಅಭಿಪ್ರಾಯಿಸಿದ್ದಾರೆ.
ಬಹುಪಕ್ಷೀಯ ವ್ಯವಸ್ಥೆಯಲ್ಲಿ ಭಾರತ ಅತೀ ಮುಖ್ಯ ಪಾತ್ರಧಾರಿಯಾಗಲಿದೆ ಎಂದು ವಿಶ್ಲೇಷಿಸಿರುವ ಅವರು, 193 ಸದಸ್ಯರುಳ್ಳ ಯುಎನ್ ಜನರಲ್ ಅಸೆಂಬ್ಲಿಯ ಅಧ್ಯಕ್ಷೀಯತೆಯಲ್ಲಿ ಭಾರತದೊಂದಿಗೆ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
‘ಭಾರತ ಬಹುಪಕ್ಷೀಯ ವ್ಯವಸ್ಥೆ ಅತೀ ಪ್ರಮುಖ ಪಾಲುದಾರ. ವಿಶ್ವಸಂಸ್ಥೆಗೆ ಅತ್ಯಂತ ಸ್ನೇಹಿತ ರಾಷ್ಟ್ರ. 2030ರ ಅಜೆಂಡಾವನ್ನು ತಲುಪಲು ಭಾರತ ಯಶಸ್ವಿಯಾದರೆ, ಇದು ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಲಿದೆ’ ಎಂದಿದ್ದಾರೆ.
source; Economictimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.