ಅಹ್ಮದಾಬಾದ್: ಒಂಟೆಯ ಹಾಲಿನ ಮಹತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮರುದಿನವೇ, ಅಮೂಲ್ ಡೈರಿ ಒಂಟೆ ಹಾಲಿನ ಮಾರಾಟಕ್ಕೆ ಯೋಜನೆಯನ್ನು ರೂಪಿಸಲಾರಂಭಿಸಿದೆ. ಇದೇ ದೀಪಾವಳಿ ವೇಳೆಗೆ ಅಹ್ಮದಾಬಾದ್ನಲ್ಲಿ ಡಿಯೋಡೊರೈಸ್ಡ್ ಕ್ಯಾಮೆಲ್ ಮಿಲ್ಕ್ನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡಲು ಅದು ಯೋಜಿಸಿದೆ.
500 ಮಿಲಿಲೀಟರ್ ಪೆಟ್ ಬಾಟಲ್ಗಳಲ್ಲಿ ಒಂಟೆಯ ಹಾಲನ್ನು ಮಾರಾಟ ಮಾಡಲು ಅಮೂಲ್ ನಿರ್ಧರಿಸಿದೆ, ಇದು ಯಶಸ್ವಿಯಾದರೆ ದೇಶವ್ಯಾಪಿಯಾಗಿ ಅಮೂಲ್ ಕ್ಯಾಮೆಲ್ ಮಿಲ್ಕ್ ಮಾರಾಟವಾಗಲಿದೆ.
ಒಂಟೆ ಹಾಲಿನ ವಾಸನೆಯನ್ನು ನಿರ್ಮೂಲನೆಗೊಳಿಸುವ ಮತ್ತು ಅದನ್ನು ಹೆಚ್ಚು ರುಚಿಕರಗೊಳಿಸುವ ಡಿಯೋಡೊರೈಸ್ಡ್ಗೊಳಿಸುವ ಪ್ರಕ್ರಿಯೆಯ ಬಗ್ಗೆ ಈಗಾಗಲೇ ಪ್ರಯೋಗಗಳನ್ನು ನಡೆಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಒಂಟೆ ಹಾಲನ್ನು ಮಾರುಕಟ್ಟೆಗೆ ತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಕಳೆದ ಭಾನುವಾರ ಅಮೂಲ್ ಡೈರಿಗೆ ಭೇಟಿ ನೀಡಿದ್ದ ಮೋದಿ, 7 ವರ್ಷಗಳ ಹಿಂದೆ ಒಂಟೆ ಹಾಲು ಉಪಯುಕ್ತ ಎಂದ ನನ್ನನ್ನು ಹೀಯಾಳಿಸಲಾಗಿತ್ತು. ಆದರೆ ಇಂದು ಅದನ್ನು ಚಾಕೋಲೇಟ್ ತಯಾರಿಕೆ, ಸೇರಿದಂತೆ ಹಲವಾರು ಕಾರಣಗಳಿಗಾಗಿ ಬಳಸಲಾಗುತ್ತಿದೆ. ಗೋವಿನ ಹಾಲಿಗಿಂತಲೂ ಅದು ಹೆಚ್ಚಿನ ಆದಾಯವನ್ನು ತಂದುಕೊಡುತ್ತದೆ ಎಂದಿದ್ದರು.
ಸದ್ಯ ಗುಜರಾತಿನಲ್ಲಿ ದನದ ಹಾಲು ಲೀಟರ್ಗೆ ರೂ.28-30ರವರೆಗೆ ಮಾರಾಟವಾಗುತ್ತಿದೆ. ಒಂಟೆ ಹಾಲನ್ನು ರೂ 50-55ರವರೆಗೆ ಮಾರಾಟ ಮಾಡಲಾಗುತ್ತದೆ.
source; indianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.