Date : Tuesday, 14-03-2017
ನವದೆಹಲಿ: ಮತಯಂತ್ರದ ವಿರುದ್ಧದ ಮಾಯಾವತಿ ಹೋರಾಟಕ್ಕೆ ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾಥ್ ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮತಯಂತ್ರವೇ ಕಾರಣ, ಬಿಜೆಪಿಗೆ ಅನುಕೂಲವಾಗುವಂತೆ ಮತಯಂತ್ರವನ್ನು ತಿದ್ದುಪಡಿ ಮಾಡಲಾಗಿತ್ತು ಎಂದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಆರೋಪಿಸಿದ್ದರು. ಇದೀಗ ಇವರ ಆರೋಪಕ್ಕೆ...
Date : Tuesday, 14-03-2017
ನವದೆಹಲಿ: ಪಾಕಿಸ್ಥಾನ ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡಿ ಶೆಲ್ ದಾಳಿಗಳನ್ನು ನಡೆಸುತ್ತಿದೆ. ಇದರಿಂದಾಗಿ ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪದ ವ್ಯಾಪಾರ ಸೌಲಭ್ಯ ಕೇಂದ್ರವೂ ಹಾನಿಗೊಳಗಾಗಿದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಭಾರತ ಪೂಂಚ್-ರಾವಲ್‌ಕೋಟ್ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ. ಭಾನುವಾರದಿಂದ ಪಾಕಿಸ್ಥಾನದ ಸೈನಿಕರು...
Date : Tuesday, 14-03-2017
ಮುಂಬಯಿ: ಸಾಂಪ್ರದಾಯಿಕ ಭೋಜನ ಸೇವನೆ ಇನ್ನು ಮುಂದೆ ಒಂದು ರೀತಿ ಸಂತೋಷದಾಯಕವಾಗಲಿದೆ. ಮುಂಬಯಿಯ ಬಾಂದ್ರಾ-ವರ್ಲಿ ಸಮುದ್ರದಲ್ಲಿ ತನ್ನ ಮೊದಲ ತೇಲುವ ಹೋಟೆಲ್-ಎಬಿ ಸೆಲೆಸ್ಟಿಯಲ್ ಹೊಂದಿದೆ. ಈ ಹೊಸ ಹೋಟೆಲ್ ಬಾಂದ್ರಾ-ವರ್ಲಿ ಸಮುದ್ರ ಲಿಂಕ್ ಅಡಿಯಲ್ಲಿ ಬಂದ್ರಾದಲ್ಲಿನ ಮಹಾರಾಷ್ಟ್ರ ಕಡಲು ಮಂಡಳಿ ಜೆಟ್ಟಿಯಲ್ಲಿ...
Date : Tuesday, 14-03-2017
ತಿರುವನಂತಪುರಂ: ಮಣಿಪುರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಮಾನವಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಮನಃಶಾಂತಿಗಾಗಿ ಕೇರಳದ ಆಶ್ರಮವೊಂದರಲ್ಲಿ ಕೆಲಕಾಲ ತಂಗಲು ನಿರ್ಧರಿಸಿದ್ದಾರೆ. ಇಂದು ತನ್ನ 45ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಇರೋಮ್ ಶರ್ಮಿಳಾ ಕೇರಳದ ಬುಡಕಟ್ಟು ಪ್ರಾಬಲ್ಯವುಳ್ಳ ಅಟ್ಟಪಾಡಿಯ ಶಾಂತಿ ಆಶ್ರಮದಲ್ಲಿ ಅವರು...
Date : Tuesday, 14-03-2017
ನವದೆಹಲಿ: ನೀವು ಎಂದಾದರೂ ತೆರೆದ ಭೂಪ್ರದೇಶದಲ್ಲಿ ರಾತ್ರಿ ಹೊತ್ತು ಸಿನೆಮಾ ವೀಕ್ಷಿಸಿದ್ದೀರಾ? ವಿರಾಮದ ವೇಳೆ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದ್ದೀರಾ? ಇಲ್ಲವಾದರೆ ಇಲ್ಲೊಂದು ಅವಕಾಶ ನಿಮಗೆ ದೊರೆಯಲಿದೆ. ಹೌದು, ಇದೊಂದು ಹೊಸ ರೀತಿಯ ಸಿನೆಮಾ ವೀಕ್ಷಣೆಯಾಗಿದೆ. ದೆಹಲಿಯಲ್ಲಿ ಇದೇ ಮೊದಲ ಬಾರಿಗೆ...
Date : Tuesday, 14-03-2017
ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡಗಳಲ್ಲಿ ಹೀನಾಯ ಸೋಲುಂಡ ಬಳಿಕ ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತನ್ನ ಪಕ್ಷದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ‘ನಾವು ವಿರೋಧಪಕ್ಷದಲ್ಲಿದ್ದೇವೆ, ನಮಗೆ ಏರಿಳಿತಗಳು ಇರುತ್ತವೆ. ಯುಪಿಯಲ್ಲಿ ಕೊಂಚ ಇಳಿತವಾಗಿದೆ. ಅದನ್ನು...
Date : Tuesday, 14-03-2017
ಜೈಪುರ: ದೆಹಲಿಯ ಗುರ್ಗಾಂವ್ ಮತ್ತು ಜೈಪುರ ನಡುವೆ ಸೂಪರ್ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಆರಂಭಗೊಳ್ಳಲಿದು, ಇದರಿಂದ ಗುರ್ಗಾಂವ್ ಮತ್ತು ಜೈಪುರ ನಡುವೆ ಪ್ರಯಾಣ ಸಮಯವನ್ನು 90 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೆಹಲಿ-ಜೈಪುರ ನಡುವಿನ ಅಂತರ...
Date : Tuesday, 14-03-2017
ನವದೆಹಲಿ: 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಿದ ಹಿನ್ನಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 29,561.93ರ ಮೂಲಕ 616 ಅಂಕಗಳ ದಾಖಲೆ ಪ್ರಮಾಣದ ಏರಿಕೆಯನ್ನು ಕಂಡಿದೆ. ನಿಫ್ಟಿ 9,122.75 ಅಂಕಗಳ ಹೊಸ ಉತ್ತುಂಗವನ್ನು...
Date : Tuesday, 14-03-2017
ಕೊಚಿ: ಕ್ಯಾನ್ಸರ್ ಮತ್ತು ಹೃದಯರೋಗ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಸಹಾಯಕ್ಕಾಗಿ ಆಸ್ಟರ್ ಡಿಎಂ ಫೌಂಡೇಶನ್ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೊತೆ ಸಹಭಾಗಿತ್ವ ವಹಿಸಿದೆ ಎಂದು ಆಸ್ಟರ್ ಡಿಎಂ ಫೌಂಡೇಶನ್ ಘೋಷಿಸಿದೆ. ಪ್ರತಿ ವರ್ಷ ಈ ಸಂಸ್ಥೆ 18 ವರ್ಷದೊಳಗಿನ 50 ನಕ್ಕಳ ಚಿಕಿತ್ಸೆಗೆ...
Date : Tuesday, 14-03-2017
ಪಣಜಿ: ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಅವರು ಪ್ರಮಾಣವಚನ ಸ್ವೀಕಾರ ಮಾಡುವುದಕ್ಕೆ ತಡೆ ತರಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಮಾ.16ರಂದು ಬಹುಮತ ಸಾಬೀತುಪಡಿಸುವಂತೆ ಬಿಜೆಪಿಗೆ ಸೂಚಿಸಿದೆ. ಪರಿಕ್ಕರ್ ಅವರ ಪ್ರಮಾಣವಚನಕ್ಕೆ ತಡೆ ತರಬೇಕು ಎಂದು ಕೋರಿ ಕಾಂಗ್ರೆಸ್ ಸುಪ್ರೀಂ ಮೆಟ್ಟಿಲೇರಿತ್ತು. ಕಾಂಗ್ರೆಸ್ ಅರ್ಜಿಯನ್ನು...