ನವದೆಹಲಿ : ಬಾಹ್ಯಾಕಾಶ ಯೋಜನೆಗಳ ಪ್ರವರ್ತಕ ಎನಿಸಿರುವ ನಾಸಾ ಮತ್ತು ಬಾಹ್ಯಾಕಾಶದಲ್ಲಿ ಮಹತ್ವದ ಸಾಧನೆ ಮಾಡಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅರ್ಥ್ ಇಮೇಜಿಂಗ್ ಸೆಟಲೈಟ್ ನಿರ್ಮಾಣಕ್ಕಾಗಿ ಪರಸ್ಪರ ಕೈಜೋಡಿಸಲಿದೆ.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭೂಮಿಯನ್ನು ಪರಿಶೀಲಿಸಲು ವಿಜ್ಞಾನಿಗಳಿಗೆ ಈ ಸೆಟಲೈಟ್ ಸಹಾಯವನ್ನು ಮಾಡಲಿದೆ.
ಈ ಸೆಟಲೈಟ್ಗೆ NISAR ಎಂದರೆ ನಾಸಾ – ಇಸ್ರೋ ಸಿಂಥೆಟಿಕ್ ಅಪೆರ್ಚರ್ ರ್ಯಾಡಾರ್ಸೆಟಲೈಟ್ (NASA-ISRO Synthetic Aperture Radar satellite) ಎಂಬ ಹೆಸರನ್ನಿಡಲಾಗುತ್ತಿದೆ.
ಭಾರತ ಮತ್ತು ಅಮೇರಿಕಾ ಎರಡು ದೇಶಗಳು ಸೇರಿ 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಇದನ್ನು ನಿರ್ಮಿಸಲಿದೆ.
ವಿಶ್ವದ ಅತಿ ದುಬಾರಿ ಸೆಟಲೈಟ್ ಎಂಬ ಹೆಸರನ್ನು ಇದು ಪಡೆಯಲಿದೆ.
ಈ ಸೆಟಲೈಟ್ ಯೋಜನೆಯನ್ನು ಸಾಕಾರಗೊಳಿಸಲು ಅಮೇರಿಕಾ ಮತ್ತು ಭಾರತದ ವಿಜ್ಞಾನಿಗಳು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.
NISAR ಉಭಯ ದೇಶಗಳ ಅತಿ ದೊಡ್ಡ ಸಂಯೋಜಿತ ಯೋಜನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.