ನವದೆಹಲಿ : ಭಾರತದ ಪ್ರಾಚೀನ ವಿದ್ಯೆ ಯೋಗದ ಬಗೆಗಿನ ಜನರ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಆಯುಷ್ ಸಚಿವಾಲಯವು ಯೋಗ ಮತ್ತು ನ್ಯಾಚುರೋಪತಿ ರಸಪ್ರಶ್ನೆ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಆಯೋಜನೆ ಮಾಡಿದೆ.
2017 ರ ಮೇ 16 ರಿಂದ ಜೂನ್ 21 ರವರೆಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. 10 ವರ್ಷದಿಂದ ಮೇಲ್ಪಟ್ಟ ಭಾರತೀಯ ನಾಗರಿಕರು ಇದರಲ್ಲಿ ಭಾಗಿಯಾಗಬಹುದು.
ವಯಸ್ಸಿನ ಗುರುತು, ಫೋನ್ ನಂಬರ್, ಪೋಸ್ಟಲ್ ಅಡ್ರೆಸ್, ಇ-ಮೇಲ್ ಐಡಿಗಳನ್ನು ಒದಗಿಸುವುದು ಕಡ್ಡಾಯ.
ವಿಜೇತರು ಅಪ್ರಾಪ್ತರಾಗಿದ್ದರೆ ಓರ್ವ ಕಾನೂನಾತ್ಮಕ ಪೋಷಕರನ್ನು ಹೊಂದುವುದು ಅಗತ್ಯ.
ಒಟ್ಟು 20 ಪ್ರಶ್ನೆಗಳಿದ್ದು, 5 ನಿಮಿಷಗಳ ಕಾಲಾವಧಿ ಇರುತ್ತದೆ. ರಸಪ್ರಶ್ನೆ ಪ್ರಥಮ ವಿಜೇತರಿಗೆ 20,000 ರೂ., ದ್ವಿತೀಯ ವಿಜೇತರಿಗೆ 15,000 ರೂ. ಮತ್ತು ತೃತೀಯ ವಿಜೇತರಿಗೆ 10,000 ರೂ. ಹಾಗೂ ಸಮಾಧಾನಕರ ಬಹುಮಾನವಾಗಿ ರೂ. 5,000 ಪುರಸ್ಕಾರವನ್ನು ನೀಡಲಾಗುತ್ತದೆ.
ಈ ಪುರಸ್ಕಾರ ಚೆಕ್ ಮೂಲಕ ವಿಜೇತರಿಗೆ ವರ್ಗಾವಣೆಯಾಗಲಿದೆ.
ರಸಪ್ರಶ್ನೆಯಲ್ಲಿ ಭಾಗವಹಿಸುವವರು ಈ ಲಿಂಕ್ನ್ನು ನೋಡಿ https://quiz.mygov.in/
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.