ಲಕ್ನೋ : ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಮಹಿಳೆಯರ ಸುರಕ್ಷತೆಗೆಂದು ಆ್ಯಂಟಿ ರೋಮಿಯೋ ಸ್ಕ್ವಾಡ್ನ್ನು ಆರಂಭಿಸಿದ್ದರು. ಇದು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಆಗುತ್ತಿದ್ದ ದೌರ್ಜನ್ಯ ಮತ್ತು ಕಿರುಕುಳಗಳನ್ನು ತಡೆಯುತ್ತಿತ್ತು.
ಇದೀಗ ಆ್ಯಂಟಿ ರೋಮಿಯೋ ಸ್ಕ್ವಾಡ್ನ ಹೆಸರನ್ನು ನಾರೀ ಸುರಕ್ಷಾ ಬಲ್ ಎಂದು ಬದಲಾಯಿಸಲಾಗಿದೆ.
ಮಾರ್ಚ್ನಲ್ಲಿ ಸಿಎಂ ಯೋಗಿ ಈ ಪಡೆಯನ್ನು ಆರಂಭಿಸಿದ್ದರು. ರಾಜ್ಯದ 11 ಜಿಲ್ಲೆಗಳಲ್ಲಿ ಇದು ಪಾರ್ಕ್, ಮಾಲ್, ಕಾಲೇಜುಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ದಾಳಿ ನಡೆಸಿ ಬೀದಿ ಕಾಮಣ್ಣರುಗಳ ವಿರುದ್ಧ ಕ್ರಮವನ್ನು ಜರುಗಿಸಿತು.
ಅಲಹಾಬಾದ್ ಹೈಕೋರ್ಟ್ ಕೂಡಾ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸಿತ್ತು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಕಿವಿ ಮಾತು ಹೇಳಿತ್ತು.
ಈ ಪಡೆಗೆ ಕೆಲವರಿಂದ ವಿರೋಧಗಳು ವ್ಯಕ್ತವಾಗಿದ್ದರೂ, ನಾಗರಿಕರ ಖಾಸಗಿತನವನ್ನು ಇದು ಹತ್ತಿಕ್ಕುತ್ತಿದೆ ಎಂದು ಹಲವರು ವಾದಿಸಿದ್ದಾರೆ.
ಇದೀಗ ಈ ಪಡೆಗೆ ನಾರೀ ಸುರಕ್ಷಾ ಬಲ್ ಎಂದು ಮರುನಾಮಕರಣ ಮಾಡಿ ಹೊಸ ಆಕಾರವನ್ನು ಇದಕ್ಕೆ ನೀಡಲಾಗಿದೆ.
ಹೆಸರು ಬದಲಾವಣೆಗೆ ನಿರ್ದಿಷ್ಟ ಕಾರಣವನ್ನು ಸರ್ಕಾರ ನೀಡಿಲ್ಲ. ಆದರೆ ಆ್ಯಂಟಿ ರೋಮಿಯೋ ಸ್ಕ್ವಾಡ್ ಎಂಬ ಹೆಸರು ನಕಾರಾತ್ಮಕ ಪ್ರಚಾರವನ್ನು ಕೊಡುತ್ತಿರುವ ಹಿನ್ನಲೆಯಲ್ಲಿ ಹೆಸರು ಬದಲಾಯಿಸಿರಬಹುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.