News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದ ರಾಜನಾಥ್

ಜಮ್ಮು: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಭಾರತ-ಪಾಕಿಸ್ಥಾನ ಗಡಿ ಪ್ರದೇಶದಲ್ಲಿ ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಗೆ ಚಾಲನೆಯನ್ನು ನೀಡಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂದು ಕೇವಲ ಗೃಹ ಸಚಿವಾಲಯ...

Read More

2020ರ ವೇಳೆಗೆ ಸಂಸ್ಕರಿಸದ ನೀರು ಗಂಗಾ ನದಿಗೆ ಹರಿಯುವುದು ಸಂಪೂರ್ಣ ಸ್ಥಗಿತ

ನವದೆಹಲಿ: ನಮಾಮಿ ಗಂಗಾ ಯೋಜನೆಯಡಿ ಗಂಗಾ ನದಿಯನ್ನು ಶುದ್ಧೀಕರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. 2020ರ ವೇಳೆ ಗಂಗೆ ಪರಿಶುದ್ಧವಾಗಲಿದ್ದಾಳೆ ಎಂಬ ನಿರೀಕ್ಷೆ ಇದೆ. 2020ರ ವೇಳೆಗೆ ಸಂಸ್ಕರಿಸದ ಯಾವ ಕೊಳಚೆ ನೀರುಗಳೂ ಗಂಗಾ ನದಿಯನ್ನು ಸೇರುವುದಿಲ್ಲ ಎಂದು ‘ನ್ಯಾಷನಲ್ ಮಿಶನ್ ಫಾರ್...

Read More

ಒರಿಸ್ಸಾದಲ್ಲಿ ಮೊದಲ ’ಟ್ರೈಬ್ಸ್ ಇಂಡಿಯಾ’ ಔಟ್‌ಲೆಟ್ ಆರಂಭ

ಭುವನೇಶ್ವರ: ಒರಿಸ್ಸಾದಲ್ಲಿ ಮೊತ್ತಮೊದಲ ‘ಟ್ರೈಬ್ಸ್ ಇಂಡಿಯಾ’ ಔಟ್‌ಲೆಟ್ ಆರಂಭಗೊಂಡಿದೆ. ಬುಡಕಟ್ಟು ಸಮುದಾಯದವರು ತಯಾರಿಸಿದ ನಾನಾ ಬಗೆಯ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿವೆ. ಬುಡಕಟ್ಟು ವ್ಯವಹಾರ ಸಚಿವಾಲಯದಡಿಯಲ್ಲಿನ ಟ್ರೈಬಲ್ ಕೊಅಪರೇಶನ್ ಮಾರ್ಕೆಟಿಂಗ್ ಡೆವಲಪ್‌ಮೆಂಟ್ ಫೆಡರೇಶನ್ ಆಫ್ ಇಂಡಿಯಾದ ‘ವನ್ ಧಾಮ್’ ಯೋಜನೆಯಡಿ ಈ ಔಟ್‌ಲೆಟ್...

Read More

ನಾಯಕತ್ವ ಬದಲಾದರೂ ಪಾಕಿಸ್ಥಾನ ಬದಲಾಗಿಲ್ಲ: ವಿಕೆ ಸಿಂಗ್

ನವದೆಹಲಿ: ಪಾಕಿಸ್ಥಾನ ಪಾಕಿಸ್ಥಾನವೇ, ನಾಯಕತ್ವ ಬದಲಾದರೂ ಅದು ಬದಲಾಗಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ, ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದಾರೆ. ಪಾಕಿಸ್ಥಾನದಲ್ಲಿ ನಾಯಕತ್ವ ಬದಲಾದರೂ ಅಕ್ರಮ ಒಳನುಸುಳುವಿಕೆ ಕಡಿಮೆಯಾಗುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ ಅವರು, ಸೇನೆಯಿಂದಲೇ ಗದ್ದುಗೆ...

Read More

ಉಧಮ್‌ಪುರ: ಕೇಂದ್ರದಿಂದ ವಿಶೇಷ ಮಕ್ಕಳಿಗೆ ವಿಶೇಷ ಶಿಬಿರ ಆಯೋಜನೆ

ಉಧಮ್‌ಪುರ: ಕೇಂದ್ರ ಸರ್ಕಾರದ ‘ಸಮಗ್ರ ಶಿಕ್ಷಾ ಅಭಿಯಾನ’ದಡಿಯಲ್ಲಿ ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ವಿಶೇಷ ಮಕ್ಕಳಿಗಾಗಿ ವೈದ್ಯಕೀಯ ಮತ್ತು ಮಾಪನ ಶಿಬಿರನ್ನು ಆಯೋಜನೆಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ, ಉಧಮ್‌ಪುರ, ಟಿಕ್ರಿ, ಜಿಬ್ ಪ್ರದೇಶಗಳ ಸುಮಾರು 200ಕ್ಕೂ ಅಧಿಕ 6-18 ವರ್ಷದ...

Read More

ಅಲಹಾಬಾದ್: ಹಸಿವು ನಿವಾರಿಸಲು ‘ಅನಾಜ್ ಬ್ಯಾಂಕ್’

ಅಲಹಾಬಾದ್: ಆಹಾರ ಮಾನವನ ಅಸ್ತಿತ್ವಕ್ಕೆ ಅನಿವಾರ್ಯದ ಮೂಲಭೂತ ಅಗತ್ಯ. ಆದರೆ ಭೂಮಿಯಲ್ಲಿನ ಅನೇಕರಿಗೆ ಎರಡು ಹೊತ್ತಿನ ಹೊಟ್ಟೆ ತುಂಬುವಷ್ಟು ಆಹಾರ ಇನ್ನೂ ಮರೀಚಿಕೆ. ಒಂದು ಹೊತ್ತು ತಿಂದರೆ, ಇನ್ನೊಂದು ಹೊತ್ತಿಗೆ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನಮ್ಮ ದೇಶದ ಅನೇಕ ಬಡವರಿದ್ದಾರೆ. ಹಸಿದ...

Read More

26 ವರ್ಷಗಳಿಂದ ಹಿಂದೂ ದೇಗುಲವನ್ನು ಸಂರಕ್ಷಿಸುತ್ತಿದ್ದಾರೆ ಮುಸ್ಲಿಂ ವ್ಯಕ್ತಿ

ಮುಜಾಫರ್‌ನಗರ: ಅನಿವಾರ್ಯ ಕಾರಣದಿಂದ ಹಿಂದೂ ಸಮುದಾಯ ತೊರೆದು ಹೋದ ದೇಗುಲವನ್ನು ಕಳೆದ 26ವರ್ಷಗಳಿಂದ ಜೋಪಾನವಾಗಿ ಕಾಪಾಡುತ್ತಾ ಬಂದಿದ್ದಾರೆ ಮುಸ್ಲಿಂ ವ್ಯಕ್ತಿ. ಈ ಮೂಲಕ ಭಾತೃತ್ವದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ. 1992ರಲ್ಲಿ, ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಭುಗಿಲೆದ್ದ ಕೋಮುಗಲಭೆಗೆ ಬೆದರಿ ಉತ್ತರಪ್ರದೇಶದ...

Read More

ವಿದೇಶದ 2 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಭಾನುವಾರ ಎರಡು ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. NovaSAR ಮತ್ತು  S1-4 ಸೆಟ್‌ಲೈಟ್‌ಗಳನ್ನು ಆಂಧ್ರದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ 10.08ರ ಸುಮಾರಿಗೆ ಪಿಎಸ್‌ಎಲ್‌ವಿ-ಸಿ42 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು....

Read More

ಭಾರತಕ್ಕೆ ಇಸ್ರೇಲ್ ರಾಯಭಾರಿಯನ್ನು ಸ್ವತಃ ಆಯ್ಕೆ ಮಾಡಿದ ನೆತನ್ಯಾಹು

ನವದೆಹಲಿ: ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಲು ಬಯಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಾವೇ ಸ್ವತಃ ಭಾರತಕ್ಕೆ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ. ಲಾ ಆಂಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹಿರಿಯ ಪ್ರಾಧ್ಯಾಪಕನಾಗಿರುವ, ಶೈಕ್ಷಣಿಕ ತಜ್ಞನಾಗಿರುವ ರೋನ್ ಮಾಲ್ಕ ಅವರನ್ನು ಭಾರತದ...

Read More

RSSನ 3 ದಿನಗಳ ಉಪನ್ಯಾಸ ಕಾರ್ಯಕ್ರಮಕ್ಕೆ ಇಂದು ಚಾಲನೆ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದಿನಿಂದ ನವದೆಹಲಿಯಲ್ಲಿ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದೆ. ಅಯೋಧ್ಯೆ ವಿವಾದ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ಚರ್ಚೆಯಾಗಲಿದೆ. 3 ದಿನಗಳ ಉಪನ್ಯಾಸಗಳಲ್ಲಿ ದೇಶ ಕೃಷಿ, ಗ್ರಾಮೀಣ ಆರೋಗ್ಯ, ಆರ್ಥಿಕತೆಗೆ ಸಂಬಂಧಿಸಿದ ಚರ್ಚೆಗಳಿಗೂ ಸಮಾನ...

Read More

Recent News

Back To Top