ನವದೆಹಲಿ: ಮೋದಿ ಸರ್ಕಾರದಡಿ ದೇಶ ಉದ್ಯೋಗ ರಹಿತ ಬೆಳವಣಿಗೆಯನ್ನು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ ಕಾನ್ಪಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಮೀಕ್ಷೆಯನ್ನು ನಡೆಸಿ ಇದಕ್ಕೆ ಇದಕ್ಕೆ ತದ್ವಿರುದ್ಧವಾದ ವರದಿಯನ್ನು ನೀಡಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣವು ಶೇ.13.9ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಇದು ಈ ವಲಯದ ಅತೀದೊಡ್ಡ ಸಮೀಕ್ಷೆಯಾಗಿದ್ದು, ವಿವಿಧ ಗಾತ್ರ ಮತ್ತು ಪ್ರದೇಶಗಳ ಸುಮಾರು 1 ಲಕ್ಷ ಸಂಸ್ಥೆಗಳನ್ನು ಸಮೀಕ್ಷೆಗೊಳಪಡಿಸಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕಳೆದ ನಾಲ್ಕು ವರ್ಷಗಳಿಂದ ಪ್ರತಿ ವರ್ಷ ತಲಾ 1.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತಾ ಬಂದಿದೆ ಎಂಬುದನ್ನು ಈ ಸಮೀಕ್ಷೆ ತಿಳಿಸಿದೆ.
ಸಿಐಐ ಭಾರತದ ಪ್ರಮುಖ ವ್ಯವಹಾರ ಸಂಘಟನೆಯಾಗಿದ್ದು, ಸರ್ಕಾರೇತರ, ಲಾಭೇತರ, ಕೈಗಾರಿಕ ನೇತೃತ್ವ ಮತ್ತು ಕೈಗಾರಿಕಾ ನಿರ್ವಹಿಯ ಸಂಸ್ಥೆಯಾಗಿದೆ. ಇದು ಸುಮಾರು 9 ಸಾವಿರ ಸದಸ್ಯರನ್ನು ಹೊಂದಿದೆ ಮತ್ತು 265 ರಾಷ್ಟ್ರೀಯ ಮತ್ತು ಪ್ರಾದೇಶಿಕ ಕೈಗಾರಿಕ ಮಂಡಳಿಗಳ ಮೂಲಕ 3,00,00 ಪರೋಕ್ಷ ಸದಸ್ಯರನ್ನು ಹೊಂದಿದೆ.
’ವಾರ್ಷಿಕವಾಗಿ ಶೇ.3.3ರಷ್ಟು ಪ್ರಗತಿಯನ್ನು ಕಂಡಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆ. ಲೇಬರ್ ಬ್ಯೂರೋದಿಂದ ಸೂಕ್ಷ್ಮ ಮಟ್ಟದ ದತ್ತಾಂಶವನ್ನು ಸಂಗ್ರಹಿಸಿದಾಗ, ಅಂದಾಜು 13.5ರಿಂದ 14.9 ಮಿಲಿಯನ್ ಹೆಚ್ಚುವರಿ ಉದ್ಯೋಗಗಳು ವಾರ್ಷಿಕವಾಗಿ ಸೃಷ್ಟಿಯಾಗಿರುವುದು ತಿಳಿದು ಬರುತ್ತದೆ’ ಎಂದು ಸಿಐಐನ ರಾಕೇಶ್ ಭಾರ್ತಿ ಮಿತ್ತಲ್ ತಿಳಿಸಿದ್ದಾರೆ. ಲೇಬರ್ ಬ್ಯೂರೋದ ದತ್ತಾಂಶಗಳ ಪ್ರಕಾರ, 2017-18ರ ಅವಧಿಯಲ್ಲಿ ಕಾರ್ಮಿಕ ವರ್ಗದ ಒಟ್ಟು ಸಾಮರ್ಥ್ಯ 45 ಕೋಟಿ ಆಗಿದೆ.
ಸಮೀಕ್ಷೆಯ ಪ್ರಕಾರ, ಉಪಚಾರ ಮತ್ತು ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯಲ್ಲಿ ಉನ್ನತ ಸ್ಥಾನದಲ್ಲಿವೆ. ಬಳಿಕ ಟೆಕ್ಸ್ಟೈಲ್ ಮತ್ತು ಅಪ್ಪರೆಲ್, ಮೆಟಲ್ ಉತ್ಪಾದನೆ, ಮಿಶಿನ್ ಭಾಗಗಳು ಮತ್ತು ಸಾರಿಗೆ ಮತ್ತು ಲಾಜಿಸ್ಟಿಕ್ ವಲಯಗಳು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸೂಕ್ಷ್ಮ ಉದ್ಯಮಗಳು ಅತೀಹೆಚ್ಚು ಉದ್ಯೋಗ ಸೃಷ್ಟಿಕರ್ತರು ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ, ಮುಂದಿನ ಮೂರು ವರ್ಷದವರೆಗೂ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ಸಿಐಐ ಪ್ರಧಾನ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.