ಭಾರತದಲ್ಲಿ ಜಗತ್ತಿನ ಯಾವುದೇ ಧರ್ಮದ ಹೆಸರು ಹೇಳಿಕೊಂಡು ಬದುಕಬಹುದು ಆದರೆ ಹಿಂದು ಅಂತ ಹೇಳಿ ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣ ಮಾಡಹೋರಟಿದ್ದಾರೆ. ನಮ್ಮ ಸೋಕಾಲ್ಡ್ ಸೆಕ್ಯುಲರ್ವಾದಿಗಳು!!. ಅಣು ರೇಣು ತೃಣಕಾಷ್ಟಗಳಲ್ಲಿ ದೇವರಿದ್ದಾನೆ ಎನ್ನುವುದು ಅಕ್ಷರಶಃ ಸತ್ಯ ಮತ್ತು ಅದನ್ನೆ ನಂಬಿಕೊಂಡು ಶ್ರದ್ಧೆಯಿಂದ ಪಾಲಿಸಿಕೊಂಡು ಬಂದ ಧರ್ಮ ನಮ್ಮದು. ಹಾಗಂತ ಇದನ್ನು ಸುಮ್ಮನೇ ಹೇಳಿ ನಮ್ಮನ್ನು ನಮ್ಮ ಹಿರಿಯರು ನಂಬಿಸಿದ್ದಲ್ಲ. ಅದನ್ನು ಅನುಭವದಿಂದ ಅನುಭಾವಗೊಳಿಸಿದ್ದಾರೆ.
ದೇಶಕ್ಕೆ ಕೃತಘ್ನರಾಗಿರುವ ಕೆಲವು ವ್ಯಕ್ತಿಗಳು ದೇವರಿಗೆ ಹಾಲೆರೆಯುವ ಬದಲು ಅದನ್ನೆ ಬಡವರಿಗೆ ಕೊಡಬಹುದು. ದೇವರಿಗೆ ಅಭಿಷೇಕ. ಹೋಮಗಳನ್ನು ಮಾಡಲಿಕ್ಕೆ ಬಳಸುವ ತುಪ್ಪವನ್ನು ಬಡವರಿಗೆ ಹಂಚಿ ಎನ್ನುತ್ತೀರಲ್ಲಾ, ನಿಮ್ಮ ಆದಾಯದಲ್ಲಿ ಎಷ್ಟು ಬಡವರಿಗೆ ಹಂಚಿದ್ದೀರಿ? ನಿಮ್ಮ ರಾಜಕೀಯದಿಂದ ಬಂದ ಹಣದಲ್ಲಿ ಎಷ್ಟು ಬಡವರ ಹೊಟ್ಟೆ ತುಂಬಿಸಿದ್ದೀರಿ ? ನಿಮ್ಮ ಬುದ್ಧಿಗೆ ಮಂಕು ಕವಿದಿದೆಯೇ?
ಏನೇ ಘಟನೆ ನಡೆದರೂ ಆಧುನಿಕ ಯುಗ ವೈಜ್ಞಾನಿಕ ಯುಗ ಅಂತೀರಲ್ಲಾ ಈಗ ನಿಮ್ಮ ವೈಜ್ಞಾನಿಕ ಚಂತನೆಗೆ ಗರ ಬಡದಿದೆಯೇ? 1984 ರಲ್ಲಿ ಭೂಪಾಲ ಅನಿಲ ದುರಂತದಲ್ಲಿ ನೂರಾರು ಮನೆಗಳು ಅದರ ವಿಷಾನಿಲಕ್ಕೆ ಬಲಿಯಾದರೂ. ಅಲ್ಲಿ ಉಳಿದ ನಾಲ್ಕಾರು ಮನೆಗಳಿಗೆ ಮಾತ್ರ ಏನೂ ಆಗಲಿಲ್ಲ ನೆನಪಿದೆಯೇ? ಜರ್ಮನಿಯ ವಿಜ್ಞಾನಿಗಳು ಆ ಮನೆಗಳಲ್ಲಿ ಸಂಶೋಧನೆ ಮಾಡಿ ಈ ಮನೆಗಳಲ್ಲಿ ಯಾರಿಗೂ ಏನೂ ಆಗದೇ ಉಳಿದಧ್ದಕ್ಕೆ ಆ ಮನೆಗಳಲ್ಲಿ ಮಾಡುತ್ತಿದ್ದ ಹೋಮವೇ ಕಾರಣ ಎಂದು ಹೇಳಿದ್ದು ನೆನಪಿಲ್ಲವೇ? ಇದು ಕೇವಲ ಒಂದು ಉದಾಹರಣೆ ಅಷ್ಟೆ.
ವೈಜ್ಞಾನಿಕ ಹಿನ್ನೆಲೆಯುಳ್ಳ ಆಚರಣೆ ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದ ಅತ್ಯಂತ ಪುರಾತನ ಧರ್ಮ ನಮ್ಮದು. ಇವರ ಪ್ರಕಾರ ಅರಳೀಮರ ಪೂಜಿಸುವುದು ಮೂಡನಂಬಿಕೆ, ಅದನ್ನು ಪೂಜಿಸುವುದರ ಹಿಂದಿನ ವೈಜ್ಞಾನಿಕ ಸತ್ಯ ಇವರಿಗೇನು ಗೊತ್ತು. ಅರಳೀಮರ ಅತೀ ಹೆಚ್ಚು ಆಕ್ಸಿಜನ್ ಬಿಡುಗಡೆಗೊಳಿಸುವ ಮರ ಅದಕ್ಕಾಗಿ ಅದನ್ನು ಪೂಜ್ಯಭಾವನೆಯಿಂದ ಕಾಣುವುದು. ಪ್ರಕೃತಿಯೊಂದಿಗೆ ಬೆರೆತು ಬಾಳುವ ಗುಣವನ್ನು ಹಿಂದು ಸಂಸ್ಕೃತಿಯಲ್ಲಿ ಮಗು ತಾಯಿ ಗರ್ಭದಿಂದ ಹೊರಬಂದು ಜಗತ್ತನ್ನು ನೋಡುವುದರೊಂದಿಗೆ ಪ್ರಾರಂಭವಾಗುತ್ತೆ.
ಇವರ ಡೋಂಗಿ ಸೆಕ್ಯುಲರವಾದದಿಂದ ಮುಂದೊಂದು ದಿನ ದೇವರ ಪೂಜೆ, ತಂದೆ ತಾಯಿಗೆ ಮಾಡುವ ನಮಸ್ಕಾರ, ಭಕ್ತಿಯಿಂದ ಸಲ್ಲಿಸುವ ಕಾಣಿಕೆ, ದೇವಸ್ಥಾನದ ಪ್ರದಕ್ಷಿಣೆ, ಮನೆಯಂಗಳದಲ್ಲಿ ಹಾಕುವ ರಂಗೋಲಿ(ಭೂ ಅಲಂಕಾರ),ಎಲ್ಲವೂ ಮೂಡನಂಬಿಕೆಯಂದು ಬಾಯಿಬಡಿದುಕೊಂಡರೆ ಆಶ್ಚರ್ಯವಿಲ್ಲ. ಇವರಿಗೆ ಸೈತಾನನಿಗೆ ಕಲ್ಲು ಹೊಡೆದು ಬರುವ ಆಚರಣೆ ಮೂಢನಂಬಿಕೆಯಾಗುವುದಿಲ್ಲ.
ಹೆಣ್ಣುಮಕ್ಕಳನ್ನು ಮಸೀದಿಯೊಳಗೆ ಸೇರಿಸಿಕೊಳ್ಳದ ಆಚರಣೆ ಮೂಢನಂಬಿಕೆ ಎನಿಸುವುದಿಲ್ಲ, ಯಾವುದೋ ಒಂದು ದೇವಸ್ಥಾನದಲ್ಲಿ ಸ್ತ್ರೀಯರಿಗೆ ಪ್ರವೇಶವಿಲ್ಲ ಎಂದ ತಕ್ಷಣ ಹಿಂದು ಆಚರಣೆಗಳ ಬಗ್ಗೇನೆ ಅನುಮಾನಿಸುವ, ಮಹಿಳಾ ಹಕ್ಕುಗಳ ಪರ ಮಾತನಾಡುವ ಇವರ ಕಣ್ಣಿಗೆ ಪರದಾ ಪದ್ಧತಿಯಂತಹ ಆಚರಣೆಗಳು ಬೀಳುವುದಿಲ್ಲ.
ಆಮಿಷವೊಡ್ಡಿ ಮತಾಂತರಣಗೊಳಿಸುವ ಅಸಹ್ಯಕರವಾದ ಘಟನೆಗಳೂ ಕಾಣುವುದಿಲ್ಲ. ನಿಜವಾದ ಸೆಕ್ಯುಲರ್ ಭಾರತ ಅನ್ನೋದಾದರೆ ಎಲ್ಲರನ್ನು ಸಮಾನವಾಗಿ ನೋಡಬೇಕು ಅದನ್ನು ಬಿಟ್ಟು ಯಾವುದೋ ಯುಕ್ತಿಕ ಲಾಭಕ್ಕಾಗಿ ಕೇವಲ ಹಿಂದುಧರ್ಮವನ್ನು ಮಾತ್ರ ದೂಷಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಅಸಹಿಷ್ಣು ಚಾಳಿ ನಿಲ್ಲಲಿ. ಭಾರತ ಮಾತೆಯನ್ನೇ ಅವಮಾನಿಸುವ ಅಸಹಿಷ್ಣು ವಿಚಾರವಾದಿಗಳು ಭಾರತ ಹಾಗೂ ಹಿಂದುಧರ್ಮದ ವಿರುದ್ಧದ ತಮ್ಮ ಉಷ್ಣತೆಯನ್ನು ಕಡಿಮೆಮಾಡಿಕೊಂಡಾಗ ಮಾತ್ರ ನೀವೇ ಹೇಳಿದಹಾಗೆ. ನಿಜವಾದ ಜ್ಯಾತ್ಯಾತೀತ ಭಾರತವಾಗಿ ಮತ್ತೊಮ್ಮೆ ನಿರ್ಮಾಣವಾಗುತ್ತೆ…
ಲೇಖನ :ಶಿವು ನರೂಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.