ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ವಸತಿರಹಿತರಿಗೆ ವಸತಿಯನ್ನು ಕಲ್ಪಿಸುತ್ತಿರುವುದು ಮಾತ್ರವಲ್ಲ, ಉದ್ಯೋಗ ಅವಕಾಶವನ್ನೂ ಸೃಷ್ಟಿಸುತ್ತಿದೆ. 2015 ರಿಂದ 2019 ರ ವರೆಗೆ ಆವಾಸ್ ಯೋಜನೆಯು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಸರ್ವರಿಗೂ ವಸತಿ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಜೂನ್ 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು, ಇದರಿಂದ ಸುಮಾರು 61.49 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಬಹುತೇಕ ಜನರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಪಡೆದುಕೊಂಡಿದ್ದಾರೆ. ಗೃಹ ಸಚಿವಾಲಯ ಮತ್ತು ಸಾರ್ವಜನಿಕ ಹಣಕಾಸು ಮತ್ತು ನೀತಿಗಳ ರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನದಿಂದ ಆವಾಸ್ ಯೋಜನೆಯಿಂದಾಗಿ 18.92 ಲಕ್ಷ ನೇರ ಉದ್ಯೋಗಗಳು ಮತ್ತು 42.57 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ನಿರ್ಮಾಣವಾದ ಮನೆಗಳು ಟಾಯ್ಲೆಟ್, ಎಲ್ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ, ಎಲ್ಇಡಿ ಬಲ್ಬ್ಗಳು, ಫ್ಯಾನ್ ಮತ್ತು ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿವೆ. ಸ್ವಚ್ ಭಾರತ್ ಅಭಿಯಾನ, ಉಜ್ವಲ ಯೋಜನೆಯಡಿ ಎಲ್ಪಿಜಿ ಅನಿಲ ಸಂಪರ್ಕ ಮತ್ತು ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಸೇರಿದಂತೆ ಇತರ ಕಲ್ಯಾಣ ಯೋಜನೆಗಳಡಿಯಲ್ಲಿ ಬಿಪಿಎಲ್ ಮನೆಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬಡ ಕುಟುಂಬಗಳು ಘನತೆಯುತವಾದ ಜೀವನವನ್ನು ನಡೆಸಲು ಸಂಪೂರ್ಣ ಸುಸಜ್ಜಿತವಾದ ಮನೆಯನ್ನು ಹೊಂದಬೇಕು ಎಂಬ ಆಶಯದೊಂದಿಗೆ ಎಲ್ಲಾ ಯೋಜನೆಗಳನ್ನು ವಿಲೀನಗೊಳಿಸಿ ಅದರಡಿಯಲ್ಲಿ ಬರುವ ಸೌಕರ್ಯಗಳನ್ನು ಈ ವಸತಿಗಳಿಗೆ ಒದಗಿಸಲಾಗಿದೆ. ಮಧ್ಯಪ್ರದೇಶವೊಂದರಲ್ಲೇ ಟಾಯ್ಲೆಟ್, ಎಲ್ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ, ಎಲ್ಇಡಿ ಬಲ್ಬ್ಗಳು ಮತ್ತು ಫ್ಯಾನ್ ಮತ್ತು ಶುದ್ಧ ಕುಡಿಯುವ ನೀರನ್ನು ಹೊಂದಿದ 10 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಎಲ್ಲಾ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ.
ಅಗ್ಗದ ಬ್ಯಾಂಕ್ ಸಾಲಗಳನ್ನು ಪಡೆಯಲು ಡೆವಲಪರ್ಸ್ಗಳಿಗೆ ಸಹಾಯಕವಾಗಲಿ ಎಂಬ ಕಾರಣಕ್ಕೆ ಕೈಗೆಟುಕುವ ವಸತಿಗಳಿಗೆ ಸರ್ಕಾರವು ಮೂಲಭೂತ ಸೌಕರ್ಯ ಸ್ಥಾನಮಾನವನ್ನು ಒದಗಿಸಿದೆ. ನಾಲ್ಕು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 70 ದಶಲಕ್ಷ ಮನೆಗಳನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಅನುಮೋದಿಸಲಾಗಿದೆ. 2022 ರೊಳಗೆ ಈ ಯೋಜನೆಯಡಿ 1 ಕೋಟಿ ಮನೆಗಳನ್ನು ಕಟ್ಟುವ ಗುರಿಯನ್ನು ಸರ್ಕಾರ ಹೊಂದಿದೆ.
ಗ್ರಾಮೀಣ ಮತ್ತು ನಗರಾಭಿವೃದ್ಧಿ ಪ್ರದೇಶಗಳಲ್ಲಿನ ಎಲ್ಲಾ ಬಡವರು ಮತ್ತು ಮಧ್ಯಮ ವರ್ಗದವರು ಈಗ ಸರ್ಕಾರದ ಸಹಾಯದಿಂದ ತಮ್ಮದೇ ಸ್ವಂತ ಮನೆಗಳನ್ನು ಹೊಂದುವ ಕನಸನ್ನು ಕಾಣುತ್ತಿದ್ದಾರೆ. ಆರಂಭಿಕ ಹಿನ್ನಡೆಯ ನಂತರ ರಿಯಲ್ ಎಸ್ಟೇಟ್ ವಲಯದಲ್ಲಿನ ಬೇಡಿಕೆಯೀಗ ಉತ್ತಮ ಸ್ಥಿತಿಯಲ್ಲಿ ಬೆಳವಣಿಯಾಗುತ್ತಿದೆ. ಕೈಗೆಟುಕುವ ವಸತಿಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಮೋದಿ ಸರಕಾರವು ಕೈಗೆಟುಕುವ ಮನೆಗಳು ಮತ್ತು ನಿರ್ಮಾಣ ಹಂತದ ಮನೆಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿಮೆ ಮಾಡಿದೆ. ನಿರ್ಮಾಣ ಹಂತದ ಮನೆಗಳು ಶೇ.12 ರಷ್ಟು ತೆರಿಗೆ ವ್ಯಾಪ್ತಿಯಿಂದ ಶೇ.5 ರಷ್ಟು ತೆರಿಗೆ ವ್ಯಾಪ್ತಿಗೆ ಇಳಿದಿವೆ. ಕೈಗೆಟುಕುವ ವಸತಿ ಯೋಜನೆಗಳ ಮೇಲಿನ ಜಿಎಸ್ಟಿ ಕೂಡ ಶೇ.8 ರಿಂದ ಶೇ.1ಕ್ಕೆ ಇಳಿಕೆಯಾಗಿದೆ. ಮೆಟ್ರೋ ಮತ್ತು ಮೆಟ್ರೋಗಳಲ್ಲದ ನಗರಗಳಲ್ಲಿ 45 ಲಕ್ಷ ರೂಪಾಯಿಗಳವರೆಗಿನ ನಿರ್ಮಾಣ ಹಂತದ ಆಸ್ತಿಗಳು ಈ ಪ್ರಯೋಜನವನ್ನು ಪಡೆದುಕೊಳ್ಳಲಿವೆ.
ಸರಕಾರದ ತೆರಿಗೆ ಕಡಿತವು ಕೈಗೆಟುಕುವ ವಸತಿ ವಲಯದ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಈ ವಲಯದಲ್ಲಿನ ಸವಾಲುಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಈ ವಲಯದಲ್ಲಿನ ಕಡಿಮೆ ಬೆಲೆಗಳು ಮಧ್ಯಮ ವರ್ಗದವರಿಗೆ ಮತ್ತು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಫ್ಲಾಟ್ಗಳನ್ನು ಖರೀದಿಸಲು ಸಹಾಯ ಮಾಡುತ್ತದೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂದು ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಹೇಳುತ್ತಿವೆ ಆದರೆ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿ ಮಾಹಿತಿಯ ಅಂಕಿಅಂಶಗಳ ಪ್ರಕಾರ, ಕಳೆದ 16 ತಿಂಗಳುಗಳಿಂದ ದೇಶದಲ್ಲಿ 2 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಸೆಪ್ಟೆಂಬರ್ 2017 ರಿಂದ ಡಿಸೆಂಬರ್ 2018 ವರೆಗೆ 1.96 ಕೋಟಿ ಹೊಸ ಫಲಾನುಭವಿಗಳು ಇಪಿಎಫ್ಒಗೆ ಸೇರ್ಪಡೆಯಾಗಿದ್ದಾರೆ. ತಿಂಗಳಿಗೆ 15,000 ರೂಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟ ವೇತನ ಹೊಂದಿರುವ 20 ಮತ್ತು ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳನ್ನೂ ಇಪಿಎಫ್ಒ ಒಳಗೊಂಡಿರುತ್ತದೆ.
ದೇಶದಲ್ಲಿನ ಪ್ರಮುಖ ಸಮಸ್ಯೆಯೆಂದರೆ ವೈಟ್ ಕಾಲರ್ ಜಾಬ್ಗಳ ಅಭಾವ, ಬೇರೆ ಯಾವುದೇ ಉದ್ಯೋಗ ಅವಕಾಶಗಳ ಕೊರತೆಯಲ್ಲ. ಈ ದೃಷ್ಟಿಕೋನದಿಂದ ಹೇಳುವುದಾದರೆ, ಒಂದು ಮನೆಯಲ್ಲಿ ಕಾರ್ಯ ಮಾಡುವ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಕಾರ್ ಕ್ಲೀನರ್, ಡೆಲಿವರಿಬಾಯ್ ಮುಂತಾದವರು ಸಾಮಾನ್ಯವಾಗಿ ಸರಾಸರಿ ಎಂಜಿನಿಯರಿಂಗ್ ಪದವಿಗಿಂತ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ದೆಹಲಿಯಲ್ಲಿನ ಬ್ಯಾಟರಿ ರಿಕ್ಷಾ ಓಡಿಸುವವರು ಎಂಜಿನಿಯರಿಂಗ್ ಪದವಿಗಿಂತ ಹೆಚ್ಚು ಗಳಿಸುತ್ತಾರೆ. ಹೀಗಾಗಿ, ಈ ಸಮಯದ ಹೆಚ್ಚಿನ ಅಗತ್ಯವೆಂದರೆ ಹೆಚ್ಚಿನ ಪ್ರಮಾಣದಲ್ಲಿ ’ಔಪಚಾರಿಕ ಬಿಳಿ-ಕಾಲರ್ ಉದ್ಯೋಗಗಳನ್ನು’ ರಚಿಸುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.