ನವದೆಹಲಿ: ಬಿಹಾರದ ಬಕ್ಸರ್, ಉತ್ತರಪ್ರದೇಶದ ಖುರ್ಜಾ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಮತ್ತು ಸಿಕ್ಕಿಂನ ಸಿರ್ವಾನಿಯಲ್ಲಿ ಬರೋಬ್ಬರಿ ರೂ.31,000 ಕೋಟಿ ವೆಚ್ಚದಲ್ಲಿ ನಾಲ್ಕು ಹೊಸ ವಿದ್ಯುತ್ ಯೋಜನೆಗಳನ್ನು ಆರಂಭ ಮಾಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಶುಕ್ರವಾರ ಅನುಮೋದನೆಯನ್ನು ನೀಡಿದೆ.
ಬಕ್ಸರ್ ಥರ್ಮಲ್ ಪವರ್ ಪ್ರಾಜೆಕ್ಟ್ (ಬಕ್ಸರ್ ಟಿಪಿಪಿ) 2×660 ಮೆಗಾ ವ್ಯಾಟ್ ಸಾಮರ್ಥ್ಯವನ್ನು ಹೊಂದಿರಲಿದೆ ಮತ್ತು ಇದು ಸುಮಾರು ರೂ 10,439.09 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಖುರ್ಜಾ ಥರ್ಮಲ್ ಪವರ್ ಪ್ಲಾಂಟ್ (ಎಸ್ಟಿಪಿಪಿ) 2×660 ಮೆಗಾ ವ್ಯಾಟ್ ಉತ್ಪಾದನೆ ಮಾಡಲಿದೆ ಮತ್ತು ಇದಕ್ಕೆ ಅಂದಾಜು ರೂ 11,089.42 ಕೋಟಿ ವೆಚ್ಚವಾಗಲಿದೆ. ಖುರ್ಜಾ ಪ್ಲಾಂಟ್ಗೆ ಕಲ್ಲಿದ್ದಲು ಸರಬರಾಜು ಮಾಡಲು ರೂ.1587.16 ಕೋಟಿ ವೆಚ್ಚದಲ್ಲಿ ಮಧ್ಯಪ್ರದೇಶದ ಅಮೇಲಿಯಾದಲ್ಲಿ ಕಲ್ಲಿದ್ದಲು ಗಣಿ ಅಭಿವೃದ್ಧಿ ಮಾಡಲು ಸಂಪುಟ ಅನುಮೋದನೆ ನೀಡಿದೆ.
“ಖುರ್ಜಾ ಎಸ್ಟಿಪಿಪಿಯು ಸೂಪರ್ಕ್ರಿಟಿಕಲ್ ಟೆಕ್ನಾಲಜಿಯನ್ನು ಆಧರಿಸಿದೆ. 660 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು, ಪರಿಸರವನ್ನು ರಕ್ಷಿಸಲು ಅತ್ಯಾಧುನಿಕ ಎಮಿಷನ್ ನಿಯಂತ್ರಣ ತಂತ್ರಜ್ಞಾನವನ್ನು ಇದು ಹೊಂದಿದೆ ಮತ್ತು ಹೆಚ್ಚಿನ ಸಾಮರ್ಥ್ಯ ಮತ್ತು ವಿದ್ಯುತ್ ಉತ್ಪಾದಿಸಲು ಕಡಿಮೆ ಇಂಧನವನ್ನು ಇದು ಬಳಸುತ್ತದೆ” ಎಂದು ಸರ್ಕಾರದ ಪ್ರಕಟನೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿ ತಟದಲ್ಲಿ ರೂ. 4,287.59 ಕೋಟಿ ವೆಚ್ಚದಲ್ಲಿ ಹೊಸ ಜಲವಿದ್ಯುತ್ ಯೋಜನೆ (ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್) ನಿರ್ಮಾಣವಾಗಲಿದೆ. ಇದು 135 ಮೀಟರ್ ಎತ್ತರದ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟಿನ ನಿರ್ಮಾಣವನ್ನು ಒಳಗೊಳ್ಳಲಿದ್ದು, ಇದರ ಸ್ಥಾಪಿತ ಸಾಮರ್ಥ್ಯ 624 ಮೆಗಾವ್ಯಾಟ್ ಆಗಿರಲಿದೆ.
ಸಿಕ್ಕಿಂನ ಟೀಸ್ತಾ ಸ್ಟೇಜ್-VI ಎಚ್ಇ ಪ್ರಾಜೆಕ್ಟ್ 500 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದು 5,748.04ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.