News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೈಕ್ಲೋನ್ ಗಜ ಪೀಡಿತ ತಮಿಳುನಾಡಿಗೆ ಮತ್ತೆ ರೂ.1,146 ಕೋಟಿ ನೆರವು ನೀಡಿದ ಕೇಂದ್ರ

ನವದೆಹಲಿ: ಸೈಕ್ಲೋನ್ ಗಜದಿಂದ ಪೀಡಿತಗೊಂಡಿರುವ ತಮಿಳುನಾಡಿಗೆ ಕೇಂದ್ರ ಸರ್ಕಾರ ಸೋಮವಾರ ರೂ.1,146ಕೋಟಿಯ ನೆರವನ್ನು ಬಿಡುಗಡೆಗೊಳಿಸಿದೆ. ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಹಣಕಾಸು ನೆರವು ನೀಡುವುದಕ್ಕೆ ಅನುಮೋದನೆಯನ್ನು ನೀಡಲಾಯಿತು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರೂ.1,146.12...

Read More

ಉದ್ಯಮಿಗಳ ನಿರಂತರ ಹತ್ಯೆ: ವಿಶೇಷ ಭದ್ರತಾ ಪಡೆ ರಚನೆಗೆ ಮುಂದಾದ ಬಿಹಾರ

ಪಾಟ್ನಾ: ಬಿಹಾರದಲ್ಲಿ ಹಲವಾರು ಉದ್ಯಮಿಗಳ ಹತ್ಯೆಯಾದ ಹಿನ್ನಲೆಯಲ್ಲಿ ‘ಬಿಹಾರ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಬಿಐಎಸ್‌ಎಫ್)ನ್ನು ರಚನೆ ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮಾದರಿಯಲ್ಲೇ ಬಿಹಾರ ಕೈಗಾರಿಕಾ ಭದ್ರತಾ ಪಡೆ ರಚನೆಯಾಗಲಿದೆ, ಕೈಗಾರಿಕೋದ್ಯಮಿಗಳಿಗೆ ಮತ್ತು ಉದ್ಯಮಿಗಳಿಗೆ...

Read More

ಮತ್ತಷ್ಟು ಕಡಿಮೆಯಾಯಿತು ಅಡುಗೆ ಅನಿಲದ ದರ

ನವದೆಹಲಿ: ಅಡುಗೆ ಅನಿಲದ ದರದಲ್ಲಿ ಭಾರೀ ಕುಸಿತವಾಗಿದೆ. ಸಬ್ಸಿಡಿ ಸಹಿತ ಸಿಲಿಂಡರ್ ದರ ರೂ.5.91 ಪೈಸೆ ಇಳಿಕೆಯಾದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ.120.50ರಷ್ಟು ಇಳಿಕೆಕೊಂಡಿದೆ. ಡಿ.31ರಂದು ದರ ಇಳಿಕೆಯಾಗಿದ್ದು, ಒಂದು ತಿಂಗಳಲ್ಲಿ ಎರಡನೇ ದರ ಕಡಿತ ಇದಾಗಿದೆ. ಇತ್ತೀಚಿಗಷ್ಟೇ ಸಬ್ಸಿಡಿ...

Read More

ಇಂದಿನಿಂದ ಹೊಸ ಆಹಾರ ಗುಣಮಟ್ಟ ಜಾರಿಗೊಳಿಸಲಿದೆ FSSAI

ನವದೆಹಲಿ: ಇಂದಿನಿಂದ ದೇಶದಾದ್ಯಂತ ಹೊಸ ಆಹಾರ ಗುಣಮಟ್ಟ ಜಾರಿಯಾಗಲಿದೆ. ಎಲ್ಲಾ ವಿಧದ ದವಸ ಧಾನ್ಯ, ಸಾವಯವ ಆಹಾರ, ಜೇನುತುಪ್ಪಗಳಿಗೂ ಈ ಗುಣಮಟ್ಟ ಅನ್ವಯವಾಗಲಿದೆ. ಹೊಸ ಗುಣಮಟ್ಟ ನಿಯಮ ಜಾರಿಯಾಗುವ ಸಂದರ್ಭ ಆಹಾರ ಉದ್ಯಮಗಳಿಗೆ ಬದಲಾವಣೆಯ ಅವಧಿಯಾಗಿ 6 ತಿಂಗಳುಗಳ ಅವಕಾಶವನ್ನು ನೀಡಲಾಗುತ್ತದೆ ಎದು...

Read More

3 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾದಡಿ ರಕ್ಷಣಾ ವಲಯದ 111 ಯೋಜನೆಗಳಿಗೆ ಅನುಮೋದನೆ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ, ರಕ್ಷಣಾ ವಲಯದ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಮಿಲಿಟರಿ ಹಾರ್ಡ್‌ವೇರ್‌ಗಳನ್ನು ಉತ್ಪಾದಿಸುವ ಸಲುವಾಗಿ ರೂ.1.78 ಲಕ್ಷ ಕೋಟಿಯ 111 ಮಿಲಿಟರಿ ಪ್ರಾಜೆಕ್ಟ್‌ಗಳಿಗೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್ ಭಮ್ರೆ...

Read More

ಹೀಗೊಬ್ಬ ಶಿರಸಿಯ ಸಮಾಜ ಸೇವಕ

ಶಿರಸಿಯ ಮಧ್ಯ ಭಾಗದ ಹೊಸಪೇಟೆ ರಸ್ತೆಯಲ್ಲಿ ಪ್ರಯಾಣಿಸಿದರೆ ಚಿಕ್ಕದಾದ ’ರವಿ ಪಾನ್ ಅಂಗಡಿ’ಯೊಂದು ಕಾಣಸಿಗುತ್ತದೆ. ಆ ಅಂಗಡಿಯ ಮಾಲೀಕನೆ ರವಿ. ಈ ಸಣ್ಣ ವ್ಯಾಪಾರಿಯ ಸಮಾಜಸೇವೆ ಮಾತ್ರ ದೊಡ್ಡದಾಗಿದೆ. ಬೀದಿ ಪ್ರಾಣಿಗಳ ಆರೈಕೆ, ರಕ್ತ ದಾನವನ್ನು ಇವರು ತಮ್ಮ ಜೀವನದ ಅವಿಭಾಜ್ಯ...

Read More

ಹಾಜರಾತಿ ವೇಳೆ ಜೈ ಹಿಂದ್, ಜೈ ಭಾರತ್ ಎನ್ನಲಿದ್ದಾರೆ ಗುಜರಾತ್ ಮಕ್ಕಳು

ಅಹ್ಮದಾಬಾದ್: ಇನ್ನು ಮುಂದೆ ಗುಜರಾತ್‌ನ ಶಾಲಾ ಮಕ್ಕಳು ಹಾಜರಾತಿ ಕರೆಯುವ ವೇಳೆ ಎಸ್ ಸರ್ ಅಥವಾ ಎಸ್ ಮೇಡಂ ಎನ್ನುವ ಬದಲು, ಜೈ ಹಿಂದ್ ಅಥವಾ ಜೈ ಭಾರತ್ ಎನ್ನಲಿದ್ದಾರೆ. 2019ರ ಕ್ಯಾಲೆಂಡರ್ ವರ್ಷದಿಂದಲೇ ಈ ನಿಯಮ ಅಲ್ಲಿನ ಶಾಲೆಗಳಲ್ಲಿ ಅನುಷ್ಠಾನಕ್ಕೆ...

Read More

ಮುಸ್ಲಿಂ ರಾಷ್ಟ್ರಗಳೇ ನಿಷೇಧಿಸಿದ ತ್ರಿವಳಿ ತಲಾಖ್‌ಗೆ ಭಾರತದಲ್ಲೇಕೆ ವಿರೋಧ?

ಕೇವಲ ಮೂರು ಉಚ್ಛಾರಣೆಗಳಿಂದ ವಿವಾಹದ ಪವಿತ್ರ ಬಂಧನವನ್ನೇ ಇಬ್ಭಾಗಗೊಳಿಸುವ, ಮಹಿಳೆಯರನ್ನು ಬೀದಿಗೆ ತಳ್ಳುವ ಅನಿಷ್ಠ ಪದ್ಧತಿ ತ್ರಿವಳಿ ತಲಾಖ್. ಗಂಡನಾದವನು ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದರೆ ಎಲ್ಲವೂ ಮುಗಿದು ಹೋಯಿತು. ಮರು ಮಾತನಾಡದೆ ಪತ್ನಿಯಾದವಳು ಹೊರ ನಡೆಯಬೇಕು. ಬದಲಾದ...

Read More

ಅಂಡಮಾನ್‌ಗೆ ಹಸಿರು ಉಡುಗೊರೆ: 24X7 ವಿದ್ಯುತ್ ಘೋಷಿಸಿದ ಮೋದಿ

ನವದೆಹಲಿ: ಅಂಡಮಾನ್ ನಿಕೋಬಾರ್‌ಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿನ ವಾತಾವರಣ, ವಾಯು ಗುಣಮಟ್ಟ ಮತ್ತು ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಹಸಿರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ದ್ವೀಪ ಪ್ರದೇಶಕ್ಕೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆಯನ್ನು...

Read More

ಡ್ರೈವರ್ ಲೆಸ್, ಸೋಲಾರ್ ಆಧಾರಿತ ಬಸ್ ನಿರ್ಮಿಸಿದ ವಿದ್ಯಾರ್ಥಿಗಳು, ಮೋದಿ ಸ್ವಾಗತಕ್ಕೆ ಬಳಸಲು ನಿರ್ಧಾರ

ನವದೆಹಲಿ: ಜಲಂಧರ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ(ಎಲ್‌ಪಿಯು)ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಡ್ರೈವರ್ ರಹಿತ, ಸೋಲಾರ್ ಆಧಾರಿತ ಬಸ್‌ನ್ನು ನಿರ್ಮಾಣ ಮಾಡಿದ್ದಾರೆ. ಭಾರತೀಯ ಸ್ಥಿತಿಗತಿಯನ್ನು ಗಮನದಲ್ಲಿಟ್ಟು ಇದನ್ನು ಅಭಿವೃದ್ಧಿಪಡಿಸಲಾಗಿದ್ದು, 6 ಲಕ್ಷ ರೂಪಾಯಿ ವೆಚ್ಚವಾಗಿದೆ. ಎಲ್‌ಪಿಯು ಕ್ಯಾಂಪಸ್‌ನಲ್ಲಿ ಜನವರಿ 3ರಂದು ಆಯೋಜನೆಗೊಳ್ಳುತ್ತಿರುವ ‘ಇಂಡಿಯನ್ ಸೈನ್ಸ್...

Read More

Recent News

Back To Top