ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಜಾಯೆದ್ ಮೆಡಲ್ ಘೋಷಣೆಯಾಗಿದೆ. ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಂದು ಈ ಬಗ್ಗೆ ಘೋಷಣೆ ಮಾಡಿದ್ದಾರೆ.
‘ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಜಾಯೆದ್ ಮೆಡಲ್ನಿಂದ ಗೌರವಿಸಲ್ಪಡಲಿದ್ದಾರೆ ಎಂದು ನಹ್ಯಾನ್ ಘೋಷಿಸಿದ್ದಾರೆ. ಎಮಿರೇಟ್ಸ್ ಮತ್ತು ಭಾರತ ನಡುವಿನ ಸಂಬಂಧಗಳನ್ನು ಉತ್ತೇಜಿಸಿದ ಮೋದಿಯವರಿಗೆ ರಾಜಧಾನಿ ಅಧ್ಯಕ್ಷರಿಗೆ ಮತ್ತು ರಾಷ್ಟ್ರಗಳ ಮುಖ್ಯಸ್ಥರಿಗೆ ನೀಡುವ ಪದಕವನ್ನು ನೀಡಿ ಗೌರವಿಸಲಾಗುತ್ತಿದೆ. ಈ ಹಿಂದೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಧಾನಿ ಮೋದಿಯವರು ಪ್ರಿಯ ಸ್ನೇಹಿತ ಎಂದು ಉಲ್ಲೇಖಿಸಿ ಬಗ್ಗೆ ಟ್ವಿಟ್ ಮಾಡಿರುವ ನಹ್ಯಾನ್ ಅವರು, ‘ನಾವು ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರ ಬಾಂಧವ್ಯವನ್ನು ಹೊಂದಿದ್ದು, ನಮ್ಮ ಪ್ರಿಯ ಸ್ನೇಹಿತ ಬಾಂಧವ್ಯ ಬೆಳೆಯಲು ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಅವರ ಪ್ರಯತ್ನಗಳನ್ನು ಗೌರವಿಸುವ ಸಲುವಾಗಿ, ಯುಎಇ ಅಧ್ಯಕ್ಷರು ಜಾಯೆದ್ ಮೆಡಲ್ ಅನ್ನು ಅವರಿಗೆ ಪ್ರದಾನಿಸಲಿದ್ದಾರೆ’ ಎಂದಿದ್ದಾರೆ.
We have historical and comprehensive strategic ties with India, reinforced by the pivotal role of my dear friend, Prime Minister Narendra Modi, who gave these relations a big boost. In appreciation of his efforts, the UAE President grants him the Zayed Medal.
— محمد بن زايد (@MohamedBinZayed) April 4, 2019
ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ಗಲ್ಫ್ ದೇಶಕ್ಕೆ ಮೂರು ಬಾರಿ ಭೇಟಿಯನ್ನು ನೀಡಿದ್ದಾರೆ. 2017ರಲ್ಲಿ ಅನುಧಾಬಿಯ ರಾಜಕುಮಾರ ಭಾರತಕ್ಕೆ ಆಗಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.