ಪ್ರತಿಯೊಬ್ಬ ವ್ಯಕ್ತಿಯು ಈ ರಾಜಕೀಯ ಯುದ್ಧದಲ್ಲಿ ತನ್ನ ಒಂದು ಮತ ಅತ್ಯಂತ ನಿರ್ಣಾಯಕ ಎಂದು ಭಾವಿಸಿ ಮತ ಚಲಾಯಿಸಬೇಕು, ಒಂದು ಮತವನ್ನು ವ್ಯರ್ಥಗೊಳಿಸಬಾರದು, ದುರ್ಬಳಕೆ ಅಥವಾ ನಿರ್ಲಕ್ಷ್ಯ ಮಾಡಬಾರದು.
2019 ರ ರಾಷ್ಟ್ರೀಯ ಚುನಾವಣೆಯು ಆಧುನಿಕ ಭಾರತದಲ್ಲಿ ಅತ್ಯಂತ ಮಹತ್ವದ್ದಾಗಿದೆ, ಇದು ಮುಂಬರುವ ಕೆಲವು ವರ್ಷಗಳ ದೇಶದ ಭವಿಷ್ಯವನ್ನು ನಿರ್ಧರಿಸುವ ಒಂದು ಹೊಸ ಕುರುಕ್ಷೇತ್ರ. ಧರ್ಮ ಮತ್ತು ಅಧರ್ಮವು ನಿರ್ಣಾಯಕ ರೀತಿಯಲ್ಲಿ ರಚನೆಯಾಗಿದ್ದು, ಅದಕ್ಕೆ ಹಿಂದಿನ ಪರಂಪರೆ ಮತ್ತು ಭವಿಷ್ಯದ ಸಂಭವನೀಯತೆಗೆ ಸಂಬಂಧಿಸಿ ಭಾರತವು ರಾಷ್ಟ್ರವಾಗಿ ನಿಲ್ಲುವ ಆಳವಾದ ಪರೀಕ್ಷೆ ಸೇರಿದಂತೆ ಮತದಾರರ ನಿರ್ಣಾಯಕ ಆಯ್ಕೆಯ ಅಗತ್ಯವಿರುತ್ತದೆ. ಭಾರತವನ್ನು ಗುರುತಿಸುವುದು ಈ ಕಹಿ ಚುನಾವಣಾ ಯುದ್ಧದ ಭಾಗವಾಗಿದೆ.
ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಂತಗಳಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಮತ್ತು ಆ ಸಾಮರ್ಥ್ಯವು ಅದಕ್ಕಿದೆ, ತನ್ನ ಮಹಾನ್ ನಾಗರಿಕ ಶಕ್ತಿಗಳನ್ನು ಮತ್ತೊಮ್ಮೆ ಅದು ವಿಸ್ತರಿಸುವುದೆ? ಅಥವಾ ಊಳಿಗಮಾನ್ಯ ಸಾಮ್ರಾಜ್ಯಕ್ಕೆ ಹಿಂದಿರುಗಿಸುವಂತಹ ವಂಶಾಡಳಿತಕ್ಕೆ ಹಿಂದಿರುಗುವುದೇ? ಅಲ್ಲಿ ಅರ್ಹತೆಗೆ ಮತ್ತು ಹೊಣೆಗಾರಿಕೆಯನ್ನು ಕಡೆಗಣಿಸಲಾಗುತ್ತದೆ. ಅಥವಾ ಹಲವು ಪಕ್ಷಗಳನ್ನು ಒಳಗೊಂಡ ಅಪರೂಪದ ಪ್ಯಾಚ್ ವರ್ಕ್ಗೆ ದೇಶವನ್ನು ಅನಿಶ್ಚಿತವಾಗಿ ಮುನ್ನಡೆಸಲು ಅವಕಾಶ ನೀಡುವುದೇ?
ಹೊಸ ಭಾರತವು ತನ್ನ ವಿಶಾಲವಾದ ಭಾರತೀಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳೊಂದಿಗೆ ಜೋಡಣೆಯಾಗಬಹುದೇ ಅಥವಾ ನೆಹರು ತತ್ವ ಮತ್ತು ಹಳೆಯ ಮಾರ್ಕ್ ವಾದಿಗಳ ನೆರಳನ್ನು ಅನುಸರಿಸಿ ಮತ್ತೆ ದೇಶವನ್ನು ವಿಭಜಿಸಬಹುದೆ?
ಸ್ಪರ್ಧಾತ್ಮಕ ಶಕ್ತಿಗಳು
ಪ್ರಸ್ತುತ ಸರ್ಕಾರಕ್ಕೆ ಸ್ಪಷ್ಟವಾದ ನಾಯಕ ಮೋದಿಯಿದ್ದಾರೆ, ಬಿಜೆಪಿ ರಾಷ್ಟ್ರೀಯ ಪಕ್ಷ, ಮಹಾರಾಷ್ಟ್ರ, ಬಿಹಾರ, ತಮಿಳುನಾಡಿನಲ್ಲಿ ಸ್ಪಷ್ಟ ಮೈತ್ರಿಕೂಟಗಳನ್ನು ಹೊಂದಿದೆ, ತನ್ನ ತತ್ವ ಮತ್ತು ನಿಲುವುಗಳ ಬಗ್ಗೆ ಅದಕ್ಕೆ ಸ್ಪಷ್ಟತೆ ಇದೆ, ಮಾತನಾಡಲು ಐದು ವರ್ಷಗಳ ಸಾಧನೆ ಇದೆ. ಆರ್ಥಿಕತೆ, ಮೂಲಸೌಕರ್ಯದಲ್ಲಿ, ವಿದೇಶಿ ನೀತಿಯಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಯುಪಿಎ ಸರ್ಕಾರದ ಅಧಿಯಲ್ಲಿದ್ದ ಭ್ರಷ್ಟಾಚಾರ ಈಗ ಮಹತ್ತರವಾದ ಪ್ರಮಾಣದಲ್ಲಿ ಇಳಿಮುಖವಾಗಿದೆ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಗೆ ದಿಟ್ಟ ಮಿಟಲಿರಿ ಸ್ಪಂದನೆಯನ್ನು ನೀಡಲಾಗಿದೆ, ಮೊದಲ ಬಾರಿಗೆ ಮಿಲಿಟರಿ ಕ್ರಮಕ್ಕಾಗಿ ಭಾರತ ವಿಶ್ವದ ಬೆಂಬಲವನ್ನೂ ಪಡೆದುಕೊಂಡಿದೆ. ಶ್ರೇಷ್ಠ ಭಾರತಕ್ಕೆ ಹೆಮ್ಮೆಯ ಸಂಗತಿ ಎಂದರೆ, ಅದರ ಸಂಸ್ಕೃತಿ ಮತ್ತು ಪರಂಪರೆಗಳು ಜಾಗೃತಗೊಳ್ಳುತ್ತಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಭಾರತ ಎಲ್ಲಾ ವಲಯದಲ್ಲೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ.
ಪ್ರತಿಯಾಗಿ, ಇದಕ್ಕೆ ವಿರುದ್ಧವಾಗಿ, ಹಲವಾರು ವರ್ಷಗಳಿಂದ ಪರಸ್ಪರ ಸ್ಪರ್ಧೆ ನಡೆಸುತ್ತಿದ್ದ ಪ್ರಾದೇಶಿಕ ಪಕ್ಷಗಳು, ಎಡಪಂಥೀಯ ಮತ್ತು ಹಳೆಯ ಸಮಾಜವಾದಿ ಪಕ್ಷಗಳು ಒಂದು ಬದಲಿ ಮೈತ್ರಿವನ್ನು ಈಗ ಮಾಡಿಕೊಂಡಿದೆ. ಈ ಮೈತ್ರಿ ಅತ್ಯಂತ ಸಂಕೀರ್ಣ ಮತ್ತು ವಿರೋಧಾತ್ಮಕವಾಗಿದೆ, ಇದು ಯಾವುದನ್ನು ಪ್ರತಿನಿಧಿಸುತ್ತದೆ ಅಥವಾ ಅದನ್ನು ಯಾರು ಚಾಲನೆ ಮಾಡುತ್ತಿದ್ದಾರೆ ಎಂಬುದನ್ನು ಗ್ರಹಿಸಲು ಕಷ್ಟ. ಅರ್ಥಶಾಸ್ತ್ರ, ಅಭಿವೃದ್ಧಿ, ವಿದೇಶಿ ನೀತಿ ಅಥವಾ ಬೇರೆ ಯಾವುದರಲ್ಲಾದರೂ ಇದರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ. ಇದು ಹಂಚಿಕೊಂಡ ಅಜೆಂಡಾ, ಸಿದ್ಧಾಂತ ಅಥವಾ ಆಶಯವನ್ನು ಹೊಂದಿಲ್ಲ. ತಮ್ಮ ಸಾಮಾನ್ಯ ಶತ್ರು ಮೋದಿಯನ್ನು ಎದುರಿಸುವುದಕ್ಕಾಗಿ ಅವಕಾಶವಾದಿ ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡು ಇವುಗಳು ಒಂದಾಗಿವೆ.
ಈ ಪ್ರತಿಪಕ್ಷಗಳು ಶಬರಿಮಲೆ ಸೇರಿದಂತೆ ಹಿಂದೂ ದೇವಾಲಯಗಳ ಮೇಲೆ ಆಕ್ರಮಣವನ್ನು ಮುಂದುವರೆಸುತ್ತಿವೆ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಅಡ್ಡಿಯುಂಟುಮಾಡುತ್ತಿವೆ, ಹಿಂದೂ ಉತ್ಸವಗಳಲ್ಲಿ ತಪ್ಪು ಕಂಡುಕೊಳ್ಳುತ್ತಿವೆ ಮತ್ತು ಮಿಷನರಿ ಮತ್ತು ಜಿಹಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಗುಂಪುಗಳಿಗೆ ಬೆಂಬಲ ನೀಡುತ್ತಿವೆ, ಇಂತಹ ಗುಂಪುಗಳನ್ನು ಬೆಂಬಲಿಸುವುದರಿಂದ ಆಗುವ ಅಪಾಯಗಳನ್ನೂ ಹಿಂದೂಗಳು ಗ್ರಹಿಸಬೇಕು.
ಈ ಅಸ್ವಾಭಾವಿಕ ಮೈತ್ರಿ ಬೆಂಬಲಿಸಿರುವ ಕಾಂಗ್ರೆಸ್ ಪಕ್ಷವು 2014 ರ ಚುನಾವಣೆಯಲ್ಲಿ ಸೋತ ಬಳಿಕ ತನ್ನ ಹಿಂದಿನ ವೈಭವವನ್ನು ಮತ್ತೊಮ್ಮೆ ಮರಳಿ ಪಡೆಯುವ ಹತಾಶ ಪ್ರಯತ್ನವನ್ನು ಮಾಡುತ್ತಲೇ ಇದೆ. ಈ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ಸುಸಂಬದ್ಧತೆಯನ್ನು ಹೊಂದಿಲ್ಲ. ರಾಹುಲ್ ಗಾಂಧಿಯವರು ಪ್ರಥಮ ಬಾರಿಗೆ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಅವರಿಗೆ ಕುಟುಂಬದ ಹೆಸರಿನಿಂದ ಹೊರತುಪಡಿಸಿ ಒಂದು ಅಭಿಯಾನವನ್ನು ನಡೆಸಲು ಕೂಡ ಯಾವುದೇ ಅರ್ಹತೆಗಳು ಅಥವಾ ಕುಶಾಗ್ರಮತಿಗಳು ಇಲ್ಲ. ಇನ್ನು ಅವರ ಸಹೋದರಿ, ಅವರ ತಾಯಿ ಮತ್ತು ಹಿನ್ನಲೆ ಸಲಹೆಗಾರರು ಅವರಿಗೆ ಉತ್ತೇಜಿಸುತ್ತಲೇ ಇರಬೇಕು.
ಮೋದಿಯವರನ್ನು ದ್ವೇಷಿಸುವ ಮತ್ತು ಅವರನ್ನು ಅಧಿಕಾರದಿಂದ ಕಿತ್ತು ಹಾಕುವ ನಕಾರಾತ್ಮಕ ಅಂಶಗಳನ್ನು ಇಟ್ಟುಕೊಂಡು ಮೈತ್ರಿ ರಚನೆಯಾಗಿದೆ. 2014ರಲ್ಲಿ ತಮ್ಮ ಅಕ್ರಮ ಮತ್ತು ಭ್ರಷ್ಟಾಚಾರದಿಂದಾಗಿ ಅಧಿಕಾರದಿಂದ ಉಳಿದವರು ಈಗ ಒಟ್ಟುಗೂಡಿದ್ದಾರೆ. ಸಂಕ್ಷಿಪ್ತವಾಗಿ, ವಿಫಲವಾದ ಹಿಂದಿನ ಸರ್ಕಾರಗಳ ಜಡತ್ವವನ್ನು ಈ ಮೈತ್ರಿ ಪ್ರತಿನಿಧಿಸುತ್ತದೆ.
ಎರಡನೆಯ ಅವಧಿಯ ಅಗತ್ಯತೆ
ನರೇಂದ್ರ ಮೋದಿಯವರು ಭಾರತವನ್ನು ಮಹತ್ವದ ಆಯಾಮದಲ್ಲಿ ಪ್ರಗತಿಯತ್ತ ಕೊಂಡೊಯ್ದಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭದ್ರ ಅಡಿಪಾಯವನ್ನು ಅವರು ಹಾಕಿಕೊಟ್ಟಿದ್ದಾರೆ. ಕಾಂಗ್ರೆಸ್ ಜೊತೆಗೆ ಬೆಸೆದಿದ್ದ ಅಧಿಕಾರಶಾಹಿ, ಪರಿಸರ ವ್ಯವಸ್ಥೆ, ಮೀಡಿಯಾ ಎಲ್ಲದರೊಂದಿಗೂ ಸಮರ್ಥವಾಗಿ ವ್ಯವಹರಿಸಿದ್ದಾರೆ. ಅಡೆತಡೆಗಳನ್ನು ತೊಡೆದು ಭಾರತವನ್ನು ಮೋದಿ ಮುನ್ನಡೆಸಿದ್ದಾರೆ. ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಎಲ್ಲಾ ಬದಲಾವಣೆಗಳನ್ನೂ ಅವರು ಸಮರ್ಥವಾಗಿ ಮಾಡಿದ್ದಾರೆ.
ನೆಹರೂ ಭಾರತ ಮತ್ತು ಭಾರತೀಯರ ಭಾರತ
ನೆಹರೂ ಭಾರತ ಬ್ರಿಟಿಷ್ ಸಿದ್ಧಾಂತಗಳ ಮೇಲೆ ನಂಬಿಕೆ ಇರಿಸಿದೆ, ಸಿದ್ಧಾಂತಕ್ಕೆ ತುಸು ಗಾಂಧಿಯವರ ಅಹಿಂಸಾ ತತ್ವವನ್ನು ಸೇರಿಸಿ ಅರೆ ಭಾರತೀಯವನ್ನಾಗಿಸಿದೆ. ಭಾರತದ ಪರಂಪರೆ, ಸಂಸ್ಕೃತಿ ಕೆಳಮಟ್ಟದ್ದು, ಪಶ್ಚಿಮದ್ದು ಮೇಲ್ಪಟ್ಟದ್ದು ಎಂಬುದು ಇವರ ನಂಬಿಕೆ. ಬೆಳೆಬೆಳೆಯುತ್ತಾ ಇದು, ಹಿಂದೂ ವಿರೋಧಿ ಮತ್ತು ಎಡಪಂಥೀಯ ಧೋರಣೆಯನ್ನು ಮೈಗೂಡಿಸಿಕೊಳ್ಳುತ್ತಾ ಬಂತು. ನೆಹರೂ ಬೆಂಬಲಿಗರು ಭಾರತದ ಪಠ್ಯಪುಸ್ತಕಗಳಿಂದ ಇತರರನ್ನು ಹೊರಗಿಟ್ಟರು, ಭಾರತದ ಶ್ರೇಷ್ಠ ಪರಂಪರೆಯನ್ನೂ ಹೊರಗಿಟ್ಟರು. ಇತಿಹಾಸ ತಿರುಚಿದರು.
ಇದಕ್ಕೆ ವಿರುದ್ಧ ಎಂಬಂತಿದೆ ಮೋದಿಯವರ ಭಾರತ. ತತ್ವಜ್ಞಾನವನ್ನು ಅದು ದೆಹಲಿಗಲ್ಲ ವಾರಣಾಸಿಗೆ ಕೇಂದ್ರೀಕರಿಸಿದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನಲ್ಲ, ಭಾರತದ ಯೋಗವನ್ನು ಮೈಗೂಡಿಸಿಕೊಂಡಿದೆ. ಭಾರತದ ಪ್ರಾಚೀನ ಗುರುಗಳನ್ನು ಗೌರವಿಸುತ್ತದೆ, ಭಾರತದ ನಾಗರಿಕ ಆಶೋತ್ತರಗಳನ್ನು ಪಾರಂಪರಿಕ ಸೆಲೆಯೊಂದಿಗೆ ಆಧುನಿಕವಾಗಿ ಈಡೇರಿಸುತ್ತಿದೆ.
ವಂಶಾಡಳಿತ ಮತ್ತು ಪ್ರಜಾಪ್ರಭುತ್ವ: ನೆಹರೂ ಸಿದ್ಧಾಂತವನ್ನು ತಲೆಯೊಳಗೆ ತುಂಬಿದ್ದವರೇ ಸರ್ಕಾರದಲ್ಲಿ ತುಂಬಿ ಹೋಗಿದ್ದರು. ಇಡೀ ಪರಿಸರ ವ್ಯವಸ್ಥೆ ತನಗೆ ಬೆಂಬಲ ನಿಡುವಂತೆ ಗಾಂಧಿ-ನೆಹರೂ ಕುಟುಂಬ ನೋಡಿಕೊಂಡಿತು. ಇಡೀ ದೇಶದ ವ್ಯವಸ್ಥೆ ತನ್ನ ಮುಷ್ಠಿಯಲ್ಲಿ ಇರುವಂತೆ ನೋಡಿಕೊಂಡಿತು. ನೆಹರೂ ಬೆಂಬಲಿಗರು ವಂಶಾಡಳಿತಕ್ಕೆ ಕಟ್ಟು ಬಿದ್ದರು. ಇನ್ನೊಂದೆಡೆ, ಮಧ್ಯಮ ವರ್ಗದಿಂದ ಬಂದ ಮೋದಿಯವರು ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತಾರೆ.
ಹಿಂದೂ ಮತ
2014ರಲ್ಲಿ ಹಿಂದೂ ಮತಗಳು ಮೋದಿಯವರನ್ನು ಬೆಂಬಲಿಸಿದ ಕಾರಣಕ್ಕೆ ಕಾಂಗ್ರೆಸ್ ಸೋತಿತು. ಈ ಕಾರಣದಿಂದಾಗಿ ಕಾಂಗ್ರೆಸ್ ಈಗ ಹೊಸ ಹಿಂದೂ ಮುಖವನ್ನು ಹೊಂದಲು ಹಂಬಲಿಸುತ್ತಿದೆ. ಈ ರೀತಿ ಮಾಡುವ ಮೂಲಕ ತಮ್ಮ ಹಳೆಯ ಹಿಂದೂ ವಿರೋಧಿ ಸುಡೋ ಸೆಕ್ಯೂಲರ್ ಧೋರಣೆಯನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ತಾವು ಹಿಂದೂ ಎಂದು ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಬ್ರಾಹ್ಮಣ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ದೇಗುಲ ಭೇಟಿ, ಹಿಂದೂ ಧರ್ಮಕ್ಕೆ ಬೆಂಬಲ ಇತ್ಯಾದಿಗಳ ಬಗ್ಗೆ ಮತದಾರ ಜಾಗೃತೆಯಿಂದ ಇರಬೇಕು. ಧರ್ಮಕ್ಕೆ ಯಾವುದು ಉತ್ತಮ ಎಂಬುದನ್ನು ಅರಿತು ಮತ ಹಾಕಬೇಕು, ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಂಬಲಿಸುವವರನ್ನು ಬೆಂಬಲಿಸಬೇಕು.
ಪಾಕಿಸ್ಥಾನ ಮತ್ತು ಭಯೋತ್ಪಾದನೆ
ಮೋದಿ ವಿರೋಧಿಗಳು ಈಗ ಸೇನಾ ವಿರೋಧಿ, ರಾಷ್ಟ್ರ ವಿರೋಧಿಗಳಾಗುತ್ತಿದ್ದಾರೆ. ಮಾತ್ರವಲ್ಲ ಬಾಲಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ವಿಷಯದಲ್ಲಿ ಪಾಕಿಸ್ಥಾನ ಪರವಾಗಿಯೂ ನಿಂತಿದ್ದಾರೆ. ಭಾರತ ಮೋದಿ ನೇತೃತ್ವದಲ್ಲಿ ಶತ್ರುಗಳನ್ನು ಮಣಿಸಲು ಯಶಸ್ವಿಯಾಗಿದ್ದನ್ನು ಇವುಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈ ಚುನಾವಣೆಯಲ್ಲಿ ಈ ಯಶಸ್ಸಿನ ಬಗ್ಗೆ ಮಾತನಾಡದೆ ಇರುವಂತೆ ನಿರ್ಬಂಧಿಸಿದ್ದು ವಿಷಾದನೀಯ.
ಪ್ರತಿಫಲ
ಈ ಚುನಾವಣೆಯ ಫಲಿತಾಂಶ ಏನಾಗಿರಬಹುದು? ಬಿಜೆಪಿ ಪ್ರತಿಪಕ್ಷಗಳನ್ನು ಕಡೆಗಣಿಸಬಾರದು, ಅದು ಮತದಾರರ ತಲೆಯಲ್ಲಿ ವಿಷಯವನ್ನು ತುಂಬಿಸಬಹುದು. ಆದರೆ ಪ್ರತಿಪಕ್ಷಗಳು ಕೂಡ, ಅತ್ಯಂತ ಶ್ರದ್ಧೆ, ಸಮರ್ಪಣಾ ಭಾವದ ಜನರೊಂದಿಗೆ ಪ್ರಚಾರ ನಡೆಸುತ್ತಿರುವ ಬಿಜೆಪಿಯನ್ನು ಕಡೆಗಣಿಸಲೇ ಬಾರದು.
ನರೇಂದ್ರ ಮೋದಿ ಅತ್ಯಂತ ಜನಪ್ರಿಯ ಮತ್ತು ಕ್ರಿಯಾಶೀಲ ಪ್ರಚಾರಕನಾಗಿದ್ದಾರೆ. ಆದರೂ ಯಾವುದೇ ಅಜಾಗರೂಕತೆಯನ್ನು ತೋರಿಸುವಂತಿಲ್ಲ. ತನ್ನ ಒಂದು ಮತ ಅತ್ಯಂತ ನಿರ್ಣಾಯಕ ಎಂದು ಭಾವಿಸಿಯೇ ಮತದಾನ ಮಾಡಬೇಕು. ಒಂದು ಮತ ಕೂಡ ವ್ಯರ್ಥವಾಗಬಾರದು, ಮತದಾನವನ್ನು ನಿರ್ಲಕ್ಷ್ಯ ಮಾಡಲೇ ಬಾರದು. ಯಾವುದೇ ಅಪಾಯವನ್ನು ಎದುರಿಸಲು ದೇಶಕ್ಕೆ ಕಷ್ಟವಾಗಬಹುದು.
ದೂರದೃಷ್ಟಿಯ ಮೂಲಕ ಆ ಗಳಿಗೆಯಲ್ಲಿ ಸಿಕ್ಕ ಸಂಭಾವ್ಯ ಆಯ್ಕೆಯಲ್ಲಿ ಅತ್ಯುತ್ತಮವಾದುದನ್ನು ಆರಿಸುವುದೇ ಧರ್ಮ. ನರೇಂದ್ರ ಮೋದಿಯವರಿಗೆ ಮತ್ತೊಂದು ಅವಧಿಯನ್ನು ನೀಡುವತ್ತ ದೇಶ ಮುಂದಾಗಬೇಕು, ಮತ್ತೆ ಹಿಂದಿನ ಕರಿ ನೆರಳಿನತ್ತ ನಾವು ಸಾಗಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.