ನವದೆಹಲಿ: ಭಾರತೀಯ ವಾಯುಸೇನೆಯು, 21 ರಷ್ಯನ್ ನಿರ್ಮಿತ ಮಿಗ್-29 ಗ್ರೌಂಡ್ ಅಟ್ಯಾಕ್ ಮತ್ತು ಏರ್ ಡಿಫೆನ್ಸ್ ಏರ್ಕ್ರಾಫ್ಟ್ಗಳನ್ನು ಖರೀದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ವಾಯುಸೇನೆಗೆ ಸುಮಾರು 42 ಸ್ಕ್ವಾಡ್ರನ್ಗಳ ಅವಶ್ಯಕತೆಯಿಂದೆ ಆದರೆ ಪ್ರಸ್ತುತ 30 ಸ್ಕ್ವಾಡ್ರನ್ಗಳನ್ನು ಅದು ಹೊಂದಿದೆ. ಮುಂಬರುವ ತಿಂಗಳಲ್ಲಿ ಕೆಲವು ಸ್ಕ್ವಾಡ್ರನ್ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 2019ರ ವೇಳೆಗೆ ಭಾರತ ಫ್ರೆಂಚ್ ನಿರ್ಮಿತ ರಫೆಲ್ ಫೈಟರ್ ಜೆಟ್ಗಳನ್ನು ಪಡೆಯಲಿದೆ.
ಭಾರತೀಯ ವಾಯುಸೇನೆ ಮಿಗ್-29ನ ಮೂರು ಸ್ಕ್ವಾಡ್ರನ್ಗಳನ್ನು ಹೊಂದಿದೆ, ಎಲ್ಲಾ ಮೂರನ್ನು ಪಶ್ಚಿಮ ಗಡಿಯಲ್ಲಿ ನಿಯೋಜಿಸಲಾಗಿದೆ, ನೌಕಾಪಡೆ ಕೂಡ ಮಿಗ್-29ನ ನಾವಲ್ ಮಾದರಿಯನ್ನು ಬಳಕೆ ಮಾಡುತ್ತದೆ, ಅವುಗಳನ್ನು ಐಎನ್ಎಸ್ ವಿಕ್ರಮಾದಿತ್ಯದಲ್ಲಿ ನಿಯೋಜನೆಗೊಳಿಸಲಾಗಿದೆ.
2019ರ ಫೆಬ್ರವರಿ ತಿಂಗಳಲ್ಲಿ, ವಾಯುಸೇನೆಯ ಅಧಿಕಾರಿಗಳು ರಷ್ಯಾಗೆ ತೆರಳಿ ಮಿಗ್-29 ವಿಮಾನಗಳ ಸಾಮರ್ಥ್ಯವನ್ನು ಪರಿಶೀಲಿಸಿದ್ದಾರೆ.
ಏರ್ಫ್ರೇಮ್ಸ್ಗಳು ಈಗಾಗಲೇ ಸಿದ್ಧವಾಗಿದ್ದು, 18 ತಿಂಗಳೊಳಗೆ ಭಾರತಕ್ಕೆ 21 ಫೈಟರ್ಗಳನ್ನು ಡೆಲಿವರಿ ಮಾಡಲು ಸಿದ್ಧ ಎಂದು ರಷ್ಯಾ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
21 ಮಿಗ್ -29 ಅನ್ನು ಹೆಚ್ಚು ಪರಿಣಾಮಕಾರಿ ರಾಡಾರ್ ಸಿಸ್ಟಮ್, ನಿಯಂತ್ರಣಗಳು, ಮತ್ತು ಏವಿಯೋನಿಕ್ಸ್ ಸಿಸ್ಟಮ್ಸ್, ಡೋರ್ಸಲ್ ಮತ್ತು ವಿಂಗ್ ಟ್ಯಾಂಕ್ಗಳು ಮತ್ತು ಏರ್-ಟು-ಏರ್ ಇಂಧನ ತುಂಬುವಿಕೆಯೊಂದಿಗೆ ಮಿಗ್ ವಿಮಾನವನ್ನು 4.5 ಪೀಳಿಗೆಯ ಫೈಟರ್ಗಳನ್ನಾಗಿ ನವೀಕರಿಸಲಾಗಿದೆ. 1990-2000ರ ನಡುವೆ ಈ ಯುದ್ಧ ವಿಮಾನಗಳು ಮೊದಲ ಬಾರಿಗೆ ಕಾಣಿಸಿಕೊಂಡಿದ್ದವು. ಪ್ರತಿ ವಿಮಾನಕ್ಕೆ 285-300 ಕೋಟಿ ರೂ ಬೆಲೆ ಇದೆ ಎಂದು ತಜ್ಞರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.