ನವದೆಹಲಿ: ಆ್ಯಕ್ಷನ್ ಕ್ಯಾಮರಾ ಮತ್ತು ಹೆವಿ ಡ್ಯೂಟಿ ಕ್ಯಾಮ್ ಕಾಡರ್ಸ್ಗಳನ್ನು ಹೊಂದಿದ ಸ್ಪೆಷಲ್ ಪೆಟ್ರೋಲಿಂಗ್ ಸ್ಕ್ವ್ಯಾಡ್, ದೇಶದ ಮೊದಲ ಸೆಮಿ ಸ್ಪೀಡ್ ರೈಲು-ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ನಿಗಾ ಇಡಲಿದೆ. ರೈಲ್ವೆ ರಕ್ಷಣಾ ಪಡೆ (ಆರ್ ಪಿ ಎಫ್), ರೈಲುಗಳ ಮೇಲೆ ಕಲ್ಲಿನ ತೂರಾಟದಂತಹ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡುವ ಸಲುವಾಗಿ ಪ್ರಾರಂಭಿಸಿದ ಕಾರ್ಯಕ್ರಮದ ಭಾಗವಾಗಿ ಈ ಸ್ಕ್ವ್ಯಾಡ್ ಅನ್ನು ನಿಯೋಜನೆಗೊಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳ ಹೆಸರುಗಳಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ.
“ಆರಂಭದಲ್ಲಿ, ನಿಯಮಿತ ಗಸ್ತು ತಿರುಗುವ ತಂಡ ಇರುತಿತ್ತು. ಆದರೆ ಈಗ ಹೊಸದಾಗಿ ಪರಿಚಯಿಸಲಾದ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವಂತಹ ಅಕ್ರಮ ಕಾರ್ಯದಲ್ಲಿ ತೊಡಗಿದ್ದವರ ಫೋಟೋಗಳನ್ನು ಸೆರೆಹಿಡಿಯುವಂತಹ ಆ್ಯಕ್ಷನ್ ಕ್ಯಾಮರಾ ಮತ್ತು ಕ್ಯಾಮ್ ಕಾರ್ಡ್ರ್ಸ್ಗಳೊಂದಿಗೆ ಶಸ್ತ್ರಸಜ್ಜಿತವಾದ ಒಂದು ತಂಡವನ್ನು ನಾವು ನಿಯೋಜಿಸಿದ್ದೇವೆ, ಆದ್ದರಿಂದ ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಬಹುದು ಮತ್ತು ಶಿಕ್ಷೆಗೊಳಪಡಿಸಬಹುದು “ಎಂದು ಅಲಹಾಬಾದ್ ಆರ್ ಪಿ ಎಫ್ ಹಿರಿಯ ವಿಭಾಗೀಯ ಭದ್ರತಾ ಕಮಿಷನರ್ ಅಮ್ರೆಶ್ ಕುಮಾರ್ ಹೇಳಿದ್ದಾರೆ.
ಇಲ್ಲಿಯವರೆಗೆ, ವಂದೇ ಭಾರತ್ ರೈಲು ಸುಮಾರು 6 ಬಾರಿ ಕಲ್ಲು ತೂರಾಟಕ್ಕೆ ಒಳಗಾಗಿದೆ ಎಂಬುದನ್ನು ರೈಲ್ವೆಯ ದಾಖಲೆ ತಿಳಿಸುತ್ತದೆ. ಡಿಸೆಂಬರ್ 20, 2018 ರಂದು, ಪ್ರಾಯೋಗಿಕ ಪರೀಕ್ಷೆಯ ಸಮಯದಲ್ಲಿ, ರೈಲು ಮೊದಲ ಬಾರಿಗೆ ಕಲ್ಲಿನ ಹೊಡೆತಕ್ಕೆ ಗುರಿಯಾಯಿತು. ಇದರ ನಂತರ ಫೆಬ್ರವರಿಯಲ್ಲಿ ವೆಸ್ಟ್ ಯುಪಿಯಲ್ಲಿ ನಡೆದ ಪ್ರಯೋಗದ ಸಮಯದಲ್ಲಿ ಮತ್ತೆ ಕಲ್ಲು ತೂರಾಟಕ್ಕೆ ಒಳಗಾಯಿತು. ಅದೇ ರೀತಿ ಮಾರ್ಚ್ ತಿಂಗಳಲ್ಲಿ ಕಾನ್ಪುರ್-ಪ್ರಯಾಗ್ ರಾಜ್ ಮಾರ್ಗದಲ್ಲಿ ಕೆಲವರು ರೈಲಿನ ಮೇಲೆ ಕಲ್ಲು ಹೊಡೆದರು. ಇದರ ನಂತರ ಕೂಡ ರೈಲು ಕಲ್ಲು ತೂರಾಟಕ್ಕೆ ಒಳಗಾಗಿತ್ತು.
ಈ ಘಟನೆಗಳ ಬಳಿಕ ವಂದೇ ಎಕ್ಸ್ ಪ್ರೆಸ್ ರೈಲನ್ನು ರಕ್ಷಣೆ ಮಾಡಲು ವಿಶೇಷ ಪ್ಯಾಟ್ರೋಲಿಂಗ್ ಸ್ಕ್ವ್ಯಾಡ್ ನಿಯೋಜಿಸಲು ನಿರ್ಧರಿಸಲಾಯಿತು. ರೈಲಿನ ಎರಡೂ ಕಡೆಗಳಲ್ಲಿ ಕ್ಯಾಮರಾವನ್ನು ವೀಡಿಯೊ ರೆಕಾರ್ಡಿಂಗ್ ಮೋಡ್ನಲ್ಲಿ ಸೆಟ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.