ನವದೆಹಲಿ: ಆ್ಯಪಲ್ನ ಪ್ರಮುಖ ಸರಬರಾಜುದಾರ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್, ಚೆನ್ನೈನ ಹೊರ ಭಾಗ ಶ್ರೀಪೆರುಂಬುದುರ್ನಲ್ಲಿರುವ ತನ್ನ ಪ್ಲಾಂಟ್ನಲ್ಲಿ ಅತ್ಯಾಧುನಿಕ ಐಫೋನ್ಗಳ ಪ್ರಾಯೋಗಿಕ ಉತ್ಪಾದನೆಯನ್ನು ಇನ್ನು ಕೆಲವೇ ವಾರಗಳಲ್ಲಿ ಪ್ರಾರಂಭಿಸಲಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಫಾಕ್ಸ್ಕಾನ್ ಪ್ಲಾಂಟ್ನಲ್ಲಿ ಪೂರ್ಣ-ಪ್ರಮಾಣದ ನಿಯೋಜನೆ ಪ್ರಾರಂಭವಾಗುವ ಮೊದಲೇ, ಐಫೋನ್ನಲ್ಲಿ ಎಕ್ಸ್ ಶ್ರೇಣಿಯ ತಯಾರಿಕೆಗೆ ಸಂಬಂಧಿಸಿದ ಪ್ರಯೋಗವು ಆರಂಭಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ, ಕ್ಯಾಲಿಫೋರ್ನಿಯಾ ಮೂಲದ ಟೆಕ್ನಾಲಜಿ ದೈತ್ಯ ಆ್ಯಪಲ್, ಶೇ.20ರಷ್ಟು ಆಮದು ಸುಂಕ ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ಭಾರತದಲ್ಲಿ ತನ್ನ ಉತ್ಪಾದನಾ ಸೌಲಭ್ಯಗಳನ್ನು ನಿಧಾನವಾಗಿ ಆರಂಭಿಸಲು ನಿರ್ಧರಿಸಿತ್ತು. ಅಲ್ಲದೇ ತನ್ನ ಉತ್ಪಾದನೆಗೆ ಬೇಕಾದ ಶೇ.30ರಷ್ಟು ವಸ್ತುಗಳನ್ನು ದೇಶೀಯ ಮೂಲದಿಂದ ಪಡೆಯಲು ಅದು ನಿರ್ಧರಿಸಿದೆ ಎಂದು ಹೇಳಲಾಗಿದೆ. ಇದಕ್ಕೆ ವಿದೇಶೀ ಕಂಪನಿಗಳು ದೇಶದಲ್ಲಿ ಸಿಂಗಲ್ ಬ್ರ್ಯಾಂಡ್ ರಿಟೇಲ್ ಸ್ಟೋರ್ಗಳನ್ನು ತೆರೆಯುವುದು ಕಾನೂನಿನ ಪ್ರಕಾರ ಅವಶ್ಯಕ.
ಆ್ಯಪಲ್ ಇಂಕ್ ಕಂಪನಿಯು, ತನ್ನ ವಿತರಕ ವಿನ್ಸ್ಟಾರ್ನ್ ಬೆಂಗಳೂರಿನಲ್ಲಿ ಹೊಂದಿರುವ ಫೆಸಿಲಿಟಿಯಲ್ಲಿ ಐಫೋನ್ 7 ಅನ್ನು ಜೋಡಿಸಲು ಆರಂಭಿಸಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ವಿನ್ಸ್ಟಾರ್ನ್ ಕಂಪನಿಯು ಲೋ ಎಂಡ್ ಐಫೋನ್ SE ಮತ್ತು ಐಫೋನ್ 6S ನಂತಹ ಹಳೆಯ ಮಾದರಿಗಳನ್ನು ಈಗಾಗಲೇ ಜೋಡಿಸಿದೆ.
ಆ್ಯಪಲ್ ತಮಿಳುನಾಡಿನ ತನ್ನ ಪೂರೈಕೆದಾರ ಸಂಸ್ಥೆಯ ಪ್ಲಾಂಟ್ನಲ್ಲಿ ಅತ್ಯಾಧುನಿಕ ಐಫೋನ್ಗಳನ್ನು ಉತ್ಪಾದನೆ ಮಾಡಲು ಮುಂದಾಗಿರುವುದರಿಂದ ಮೇಕ್ ಇನ್ ಇಂಡಿಯಾ ಯೋಜನೆಗೆ ಸಾಕಷ್ಟು ಉತ್ತೇಜನ ದೊರೆತಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.