ಚೆನ್ನೈ: ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಬಳಸುವ ಟಿಕ್ ಟಾಕ್ ಆ್ಯಪ್ಗೆ ಸಂಕಷ್ಟ ಎದುರಾಗಿದೆ. ಚೀನಾ ಮೂಲದ ಖ್ಯಾತ ಡಬ್ ಸ್ಮಾಶ್ ಆ್ಯಪ್ ಟಿಕ್ ಟಾಕ್ ಅನ್ನು ಡೌನ್ಲೋಡ್ ಮಾಡುವುದಕ್ಕೆ ನಿಷೇಧ ಹೇರುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅಸಭ್ಯ ಮತ್ತು ಅಶ್ಲೀಲ ಎನಿಸುವಂತಹ ವೀಡಿಯೋಗಳು ಈ ಟಿಕ್ ಟಾಕ್ ನಲ್ಲಿದೆ. ಇದು ವ್ಯಕ್ತಿಗಳ ಖಾಸಗಿತನವನ್ನು ಹರಣ ಮಾಡುತ್ತಿದೆ ಎಂದು ಕೋರ್ಟ್ ಅಭಿಪ್ರಾಯಿಸಿದೆ.
ಮಧುರೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತು ಕುಮಾರ್ ಎಂಬುವವರು ಟಿಕ್ ಟಾಕ್ ಆ್ಯಪ್ ವಿರುದ್ಧ ದೂರು ನೀಡಿದ್ದರು. ಈ ಆ್ಯಪ್ ಮೂಲಕ ಯುವಕರು ಮತ್ತು ಮಕ್ಕಳಲ್ಲಿ ಆಶ್ಲೀಲತೆಯನ್ನು ಪ್ರಚಾರ ಪಡಿಸಲಾಗುತ್ತಿದೆ. ಆ್ಯಪ್ನಿಂದಾಗಿ ಭಾರತೀಯ ಸಂಸ್ಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮಕ್ಕಳ ಮೇಲೆ ಶೋಷಣೆಯಾಗುತ್ತಿದೆ. ಇದು ಯುವಕರು ಮತ್ತು ಮಕ್ಕಳಲ್ಲಿ ಆತ್ಮಹತ್ಯಾ ಭಾವನೆಯನ್ನು ಬೆಳೆಸುತ್ತಿದೆ, ಹೀಗಾಗಿ ಈ ಆ್ಯಪ್ ಅನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಜಸ್ಟಿಸ್ ಎನ್ ಕಿರುಬಕಾರನ್ ಮತ್ತು ಎಸ್ ಎಸ್ ಸುಂದರ್ ಅವರು ಈ ದೂರಿನ ವಿಚಾರಣೆಯನ್ನು ನಡೆಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಸ್ಪಷ್ಟನೆಯನ್ನು ಕೇಳಿದ್ದಾರೆ. ಮತ್ತು ಎಪ್ರಿಲ್ 16ರೊಳಗೆ ಆ್ಯಪ್ನ ನಿಷೇಧ ಕುರಿತು ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ.
ಇತ್ತೀಚಿಗೆ ಟಿಕ್ ಟಾಕ್ ನಿಷೇಧಿಸಲು ತಮಿಳುನಾಡು ಮಾಹಿತಿ ತಂತ್ರಜ್ಞಾನ ಸಚಿವ ಎಂ. ಮನಿಕಂಡನ್ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಟಿಕ್ ಟಾಕ್ ಆ್ಯಪ್ನಲ್ಲಿ ತಮಿಳು ಸಂಸ್ಕೃತಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬ್ಯಾನ್ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.