Date : Saturday, 29-06-2019
ಮುಂಬಯಿ: ಹಾಲಿನ ಖಾಲಿ ಪ್ಲಾಸ್ಟಿಕ್ ಪ್ಯಾಕ್ಗಳನ್ನು ರಿಸೈಕ್ಲಿಂಗ್ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ಲಾಸ್ಟಿಕ್ ಪ್ಯಾಕ್ ಅನ್ನು ವಾಪಾಸ್ ಮಾಡುವವರಿಗೆ 50 ಪೈಸೆ ರಿಫಂಡ್ ನೀಡಲು ನಿರ್ಧರಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಆದರೆ ಹಾಲು...
Date : Saturday, 29-06-2019
ಲಕ್ನೋ: ಉತ್ತರ ಪ್ರದೇಶದ ಲಕ್ನೋ ಶೀಘ್ರದಲ್ಲೇ ಭಿಕ್ಷುಕ ಮುಕ್ತ ನಗರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಲಕ್ನೋ ಮುನ್ಸಿಪಲ್ ಕಾರ್ಪೋರೇಶನ್(ಎಲ್ ಎಂಸಿ) ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ದೈಹಿಕವಾಗಿ ಸದೃಢರಾಗಿರುವ ಭಿಕ್ಷುಕರನ್ನು ದಿನಗೂಲಿ ಕಾರ್ಮಿಕರನ್ನಾಗಿಸಲು ಮುಂದಾಗಿದೆ. ಆರೋಗ್ಯವಾಗಿದ್ದರೂ ಕೆಲಸ ಮಾಡದೆ ಭಿಕ್ಷಾಟನೆಗೆ ಮುಂದಾಗುವ ಜನರಿಗೆ...
Date : Saturday, 29-06-2019
ನವದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಸೌದಿ ಅರೇಬಿಯಾವು ಭಾರತದ ಹಜ್ ಕೋಟಾವನ್ನು 170,000 ದಿಂದ 200,000 ಕ್ಕೆ ಏರಿಕೆ ಮಾಡಿದೆ. ಹೀಗಾಗಿ ಇನ್ನು ಮುಂದೆ 30,000 ಹೆಚ್ಚುವರಿ ಭಾರತೀಯ ಮುಸ್ಲಿಮರಿಗೆ ವಾರ್ಷಿಕವಾಗಿ ಮೆಕ್ಕಾ ಯಾತ್ರೆಗೆ ಹೋಗುವ ಅವಕಾಶ ಸಿಕ್ಕಂತಾಗಿದೆ. ಸೌದಿ ಅರೇಬಿಯಾದ ಉತ್ತರಾಧಿಕಾರಿ ಮೊಹಮ್ಮದ್ ಬಿನ್ ಸಲ್ಮಾನ್...
Date : Saturday, 29-06-2019
ನವದೆಹಲಿ: ಲಿಂಗ ತಾರತಮ್ಯವನ್ನು ಮೆಟ್ಟಿ ನಿಂತು ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಇನ್ನಷ್ಟು ಪುಷ್ಠಿ ನೀಡುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ಮಹಿಳಾ ನೀತಿ ಕರಡು ಅನ್ನು ಸಿದ್ಧಪಡಿಸುತ್ತಿದೆ....
Date : Saturday, 29-06-2019
ನವದೆಹಲಿ: ಹಕ್ಕಿಗಳ ಹೊಡೆತದಿಂದಾಗಿ ಎರಡು ಎಂಜಿನ್ಗಳ ಪೈಕಿ ಒಂದು ಎಂಜಿನ್ ಸ್ಥಗಿತಗೊಂಡ ಭಾರತೀಯ ವಾಯುಸೇನೆಗೆ ಸೇರಿದ ಜಾಗ್ವಾರ್ ಫೈಟರ್ ಜೆಟ್ ಅನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಅಂಬಾಲ ವಾಯುನೆಲೆಯ ಸಮೀಪ ವಾಸಿಸುತ್ತಿರುವ ಹಲವಾರು...
Date : Saturday, 29-06-2019
ರಾಮೇಶ್ವರಂ: ಉತ್ತಮ ಸೇವೆಗಾಗಿ ಭಾರತೀಯ ರೈಲ್ವೆಯು ತಾಂತ್ರಿಕ ಸುಧಾರಣೆಗಳೊಂದಿಗೆ ಪ್ರಗತಿಯತ್ತ ದಾಫುಗಾಲಿಡುತ್ತಿದೆ. ಆದರೂ, ಪರಂಪರೆಗೆ ಅದು ಸದಾ ಬದ್ಧತೆಯನ್ನು ಪ್ರದರ್ಶಿಸಿದೆ. ಪರಂಪರೆಯ ಸಂರಕ್ಷಣೆಯೊಂದಿಗೆ ಮತ್ತೊಂದು ಅದ್ಭುತ ಪ್ರಗತಿಯನ್ನು ಸಾಧಿಸಿರುವ ರೈಲ್ವೆ ಪ್ರಾಧಿಕಾರವು ಶುಕ್ರವಾರ 105 ವರ್ಷಗಳ ಹಳೆಯ ಪಂಬನ್ ರೈಲು ಸೇತುವೆಯಲ್ಲಿನ ಶೆರ್ಜರ್ಸ್...
Date : Saturday, 29-06-2019
ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ, ಇದರಿಂದಾಗಿ ಜನರು ಎಲ್ಲಾ ಕೆಲಸಗಳಿಗೂ ಕಡಿಮೆ ನೀರು ಬಳಕೆಯ ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಇಲ್ಲಿನ ಹೆಚ್ಚಿನ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಪ್ಲೇಟ್ಗಳ ಬದಲು ಹಳೆಯ...
Date : Saturday, 29-06-2019
ನವದೆಹಲಿ: ಆರೋಗ್ಯಯುತ ಆಹಾರ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ತನ್ನ ಸಭೆಗಳಲ್ಲಿ ಬಿಸ್ಕೇಟ್ ಅಥವಾ ಕುಕ್ಕೀಸ್ಗಳನ್ನು ನೀಡುವ ಬದಲಾಗಿ ಬಾದಾಮಿ, ಗೋಡಂಬಿ, ಕರ್ಜೂರ, ವಾಲ್ನಟ್ಸ್, ಹುರಿದ ಕಡಲೆಕಾಳು ಇತ್ಯಾದಿಗಳನ್ನು ನೀಡಲು ನಿರ್ಧರಿಸಿದೆ. ಜೂನ್ 19...
Date : Saturday, 29-06-2019
ಬೆಂಗಳೂರು: ವಿಧಾನಸಭೆಯ ಮಳೆಗಾಲದ ಅಧಿವೇಶನ ಜುಲೈ 12 ರಿಂದ 26 ರ ವರೆಗೆ ನಡೆಯಲಿದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ...
Date : Saturday, 29-06-2019
ಒಸಕಾ: ಜಪಾನಿನಲ್ಲಿ ಒಸಕಾ ನಗರದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಇದನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ಸೆಲ್ಫಿಗೆ ಅವರು ಹಿಂದಿಯಲ್ಲಿ ‘ಕಿತ್ನಾ ಅಚ್ಛೇ ಹೈ ಮೋದಿ’ ಎಂಬ ಶೀರ್ಷಿಕೆಯನ್ನು...