ನವದೆಹಲಿ: ಶ್ರದ್ಧಾಂಜಲಿ ಸಲ್ಲಿಸುವ ಅಥವಾ ಇನ್ನಿತರ ಗೌರವ ಸಲ್ಲಿಸುವ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಹುತಾತ್ಮ ಯೋಧರ ಪದಕಗಳನ್ನು ಅವರ ಕುಟುಂಬ ಸದಸ್ಯರಿಗೆ ಎದೆಯ ಮೇಲೆ ಧರಿಸುವ ಅವಕಾಶವನ್ನು ನೀಡಲು ಭಾರತೀಯ ಸೇನೆ ನಿರ್ಧರಿಸಿದೆ. ಯೋಧರ ಮುಂದಿನ ಪೀಳಿಗೆಯಲ್ಲಿ ಸೇನೆಯ ಬಗ್ಗೆ ಗೌರವ ಮೂಡಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕೆಲವು ಮಾಜಿ ಸೈನಿಕರ ಸಂಬಂಧಿಕರು, ನಿರ್ದಿಷ್ಟ ಸಂದರ್ಭಗಳಲ್ಲಿ ಅಗಲಿದ ಯೋಧರ ಪದಕಗಳನ್ನು ಅವರ ಗೌರವಾರ್ಥ ಧರಿಸುವ ಅಗತ್ಯವಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸೇನೆಯ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಅಗಲಿದ ಯೋಧರ ಪದಕವನ್ನು ಧರಿಸಲು ಅವರ ಸಂಬಂಧಿಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗಿದೆ. ಅಲ್ಲದೇ ಈ ರೀತಿ ಮಾಡುವುದರಿಂದ ಯೋಧರ ಸಂಬಂಧಿಕರು ಮತ್ತು ಎರಡನೇಯ ಅಥವಾ ಮೂರನೇ ತಲೆಮಾರಿನ ವಂಶಸ್ಥರಲ್ಲೂ ಗೌರವವದ ಭಾವನೆಯನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಯಾವುದೇ ನಿರ್ದೇಶನಗಳನ್ನು ಹೊರಡಿಸಲಾಗಿಲ್ಲ, ಕೆಲವು ದೇಶಗಳಲ್ಲಿ ಈ ಪದ್ಧತಿಯನ್ನು ರೂಢಿಸಿಕೊಂಡು ಬರಲಾಗುತ್ತಿದೆ ಎಂದು ಸೇನೆ ಹೇಳಿದೆ.
1978 (ಪರಿಷ್ಕೃತ ಆವೃತ್ತಿ) ಸೇನಯ ನಿಯಮಗಳಲ್ಲಿ ತಿಳಿಸಿರುವಂತೆ, ಪದಕ ಪಡೆದವರು ಮಾತ್ರ ಅಂದರೆ ಸೇವೆ ಸಲ್ಲಿಸುತ್ತಿರುವ ಅಥವಾ ಮಾಜಿ ಸೈನಿಕರು ಮಾತ್ರ ಪದಕಗಳನ್ನು ಧರಿಸಬಹುದು.
ಆದರೆ ಅಗಲಿದ ಯೋಧರ ಪದಕಗಳನ್ನು ನಿರ್ದಿಷ್ಟ ಸಮಾರಂಭಗಳಲ್ಲಿ ಅವರ ಸಂಬಂಧಿಕರಿಗೆ ಧರಿಸಲು ಅವಕಾಶ ನೀಡುವುದು ಈ ಕಾಲದ ಅಗತ್ಯವಾಗಿದೆ ಎಂದು ಸೇನೆ ಹೇಳಿದೆ.
ಯುದ್ಧ ಸ್ಮಾರಕ, ಶವಾಗಾರ ಅಥವಾ ಅಂತ್ಯಸಂಸ್ಕಾರ ನಡೆಯುವ ಕಾರ್ಯಕ್ರಮಗಳಲ್ಲಿ ಅಗಲಿದ ಯೋಧರ ಪತ್ನಿ, ಹೆತ್ತವರು, ಅಜ್ಜ-ಅಜ್ಜಿ ಅಥವಾ ಮಕ್ಕಳಿಗೆ ಬಲ ಬದಿಯ ಎದೆ ಮೇಲೆ ಪದಕಗಳನ್ನು ಧರಿಸುವ ಅವಕಾಶವನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಅವರುಗಳು ಔಪಚಾರಿಕ ನಾಗರಿಕ ಧರಿಸುಗಳನ್ನು ಧರಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.