ಶಿವಪುರಿ: ಮಧ್ಯಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಸಿದ್ಧಪಡಿಸುತ್ತಿರುವ ರೀತಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಶಿವಪುರಿ ಜಿಲ್ಲೆಯ ಅಂಗನವಾಡಿ ಕೇಂದ್ರವೊಂದರಲ್ಲಿ ಶೌಚಾಲಯವನ್ನು ಮಕ್ಕಳಿಗೆ ಅಡುಗೆ ಮಾಡಲು ಬಳಸಲಾಗುತ್ತಿದೆ.
ಮಾಹಿತಿಯ ಪ್ರಕಾರ, ಅಂಗನವಾಡಿ ಕೇಂದ್ರದಲ್ಲಿನ ಶೌಚಾಲಯವನ್ನು ಪೂರ್ಣ ಪ್ರಮಾಣದ ಅಡುಗೆಮನೆಯನ್ನಾಗಿ ಪರಿವರ್ತಿಸಲಾಗಿದ್ದು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸಲು ಎಲ್ಪಿಜಿ ಸಿಲಿಂಡರ್ ಮತ್ತು ಮಣ್ಣಿನ ಒಲೆ ಎರಡನ್ನೂ ಇಲ್ಲಿಗೆ ಒದಗಿಸಲಾಗಿದೆ.
ಕೆಲವು ಅಡುಗೆ ಪಾತ್ರೆಗಳನ್ನು ಟಾಯ್ಲೆಟ್ ಸೀಟಿನ ಮೇಲೆ ಜೋಡಿಸಲಾಗಿದೆ ಎಂಬುದು ಪತ್ರಿಕೆಗಳು ಪ್ರಕಟಿಸಿರುವ ಚಿತ್ರಗಳಿಂದ ಕಂಡು ಬರುತ್ತದೆ.
ವರದಿಗಳ ಪ್ರಕಾರ, ನಿತ್ಯ ಶಾಲಾ ಮಕ್ಕಳಿಗೆ ಇಲ್ಲಿಯೇ ಆಹಾರವನ್ನು ತಯಾರು ಮಾಡಲಾಗುತ್ತಿದೆ ಮತ್ತು ಬಡಿಸಲಾಗುತ್ತಿದೆ.
ವಿಪರ್ಯಾಸವೆಂದರೆ, ಟಾಯ್ಲೆಟಿನಲ್ಲಿ ಅಡುಗೆ ಮಾಡಿ ಬಡಿಸಿದರೆ ಯಾವುದೇ ತಪ್ಪಿಲ್ಲ ಎಂದು ಆ ಕ್ಷೇತ್ರದ ಸಂಸದೆ ಇಮರ್ತಿ ದೇವಿ ಹೇಳಿಕೊಂಡಿದ್ದಾರೆ.
“ಶೌಚಾಲಯದ ಸೀಟ್ ಮತ್ತು ಒಲೆ ನಡುವೆ ವಿಭಜನೆ ಇದ್ದರೆ ಶೌಚಾಲಯದೊಳಗೆ ಆಹಾರವನ್ನು ಬೇಯಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಮನೆಗಳಲ್ಲೂ ಅಟ್ಯಾಚ್ ಆದ ಶೌಚಾಲಯಗಳಿರುತ್ತವೆ, ಹಾಗಂತ ಬಂದ ನೆಂಟರು ನಮ್ಮ ಮನೆಯಲ್ಲಿ ಊಟ ಮಾಡಲು ನಿರಾಕರಿಸುತ್ತಾರೆಯೇ?, ಪಾತ್ರೆಗಳನ್ನು ಟಾಯ್ಲೆಟ್ ಸೀಟ್ ಮೇಲೆ ಇಟ್ಟರೆ ಏನೂ ತೊಂದರೆ ಇಲ್ಲ: ಎಂಬುದಾಗಿ ಇವರು ಹೇಳಿದ್ದಾರೆ. ಇದು ಜನರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸಬೇಕು ಎಂಬ ಉದ್ದೇಶಗಳಿಂದ ಬಿಸಿಯೂಟ ಯೋಜನೆಯನ್ನು ಆರಂಭಿಸಲಾಗಿದೆ. ಆದರೆ ಬಿಸಿಯೂಟವನ್ನು ತಯಾರಿಸುವ ವೇಳೆ ನೈರ್ಮಲ್ಯವನ್ನು ಕಾಪಾಡದೆ, ಅಡುಗೆ ಕೋಣೆಯನ್ನು ಒದಗಿಸದೆ ಎಲ್ಲೆಂದರಲ್ಲಿ ಅಡುಗೆ ಮಾಡಿ ಬಡಿಸುವ ಮೂಲಕ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.