ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ತನ್ನ ಎರಡನೇ ಅವಧಿಯ ಅಧಿಕಾರದಲ್ಲಿಯೂ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂಬ ಮಹತ್ತರವಾದ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬದ್ಧತೆಯ ಅಭಿವ್ಯಕ್ತಿಯಾಗಿ ಮೋದಿ ಸರ್ಕಾರ 2019-20ರ ಹಣಕಾಸು ವರ್ಷದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಬಜೆಟ್ ಹಂಚಿಕೆಯಲ್ಲಿ 4,700 ಕೋಟಿ ರೂಪಾಯಿಗಳನ್ನು ಏರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಆಯ್ಕೆಯಾದ ಸಂದರ್ಭದಲ್ಲಿ, ಅಂದರೆ 2013-14ರ ಸಾಲಿನಲ್ಲಿ ಅಲ್ಪಸಂಖ್ಯಾತ ಸಚಿವಾಲಯಕ್ಕೆ ದೊರೆತಿದ್ದ ಬಜೆಟ್ ಹಂಚಿಕೆಗೆ ಹೋಲಿಸಿದರೆ ಮೋದಿ ಸರ್ಕಾರ ನೀಡಿದ ಬಜೆಟ್ ಹಂಚಿಕೆ ಗಣನೀಯ ಹೆಚ್ಚಳವಾಗಿದೆ.
ಬಜೆಟ್ ಹಂಚಿಕೆಯಲ್ಲಿ ಹೆಚ್ಚಳದ ಹೊರತಾಗಿಯೂ, ಮೋದಿ ಸರ್ಕಾರವು ಈವರೆಗೆ ಅಲ್ಪಸಂಖ್ಯಾತ ಸಮುದಾಯದ 3.18 ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದೆ. ಸುಮಾರು ಶೇ. 50 ರಷ್ಟು ವಿದ್ಯಾರ್ಥಿ ವೇತನವನ್ನು ಅಲ್ಪಸಂಖ್ಯಾತ ಸಮುದಾಯದ ಬಡ ಮಹಿಳಾ ವಿದ್ಯಾರ್ಥಿಗಳಿಗೆ ನೀಡಲಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ನೇರ ಲಾಭ ವರ್ಗಾವಣೆಯ ಮೂಲಕ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಹೀಗಾಗಿ ಹೆಚ್ಚು ಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರ ಮುಕ್ತವಾಗಿ ವಿದ್ಯಾರ್ಥಿವೇತನ ವಿದ್ಯಾರ್ಥಿಗಳ ಕೈ ಸೇರಿದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ)ದ ಭಾಗವಾಗಿ, ಅಲ್ಪಸಂಖ್ಯಾತ ಪ್ರಾಬಲ್ಯವಿರುವ 1300 ಸ್ಥಳಗಳನ್ನು ಸರ್ಕಾರ ಗುರುತಿಸಿದೆ. ಇದೇ ಕಾರ್ಯಕ್ರಮದಡಿ 25 ಪದವಿ ಕಾಲೇಜುಗಳನ್ನು, 1152 ಶಾಲಾ ಕಟ್ಟಡಗಳನ್ನು, 20,228 ಹೆಚ್ಚುವರಿ ತರಗತಿ ಕೊಠಡಿಗಳನ್ನು, 506 ಹಾಸ್ಟೆಲ್ಗಳನ್ನು, 71 ಐಟಿಐಗಳನ್ನು, ಐದು ಪಾಲಿಟೆಕ್ನಿಕ್ಗಳನ್ನು, 92 ವಸತಿ ಶಾಲೆಗಳನ್ನು, 530 ಮಾರುಕಟ್ಟೆ ಶೆಡ್ಗಳನ್ನು, 5090 ಅಂಗನವಾಡಿ, 821 ಆರೋಗ್ಯ ಕಾರ್ಯಕ್ರಮಗಳನ್ನು, 2285 ಜಲಸಂಪನ್ಮೂಲ ಯೋಜನೆಗಳನ್ನು ಮತ್ತು 11,676 ಮನೆಗಳನ್ನು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಖಾತ್ರಿಪಡಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಕನಿಷ್ಠ 3,93,711 ಯುವಕರಿಗೆ ಉದ್ಯೋಗಕ್ಕಾಗಿ ಅವರ ಕೌಶಲ್ಯವನ್ನು ಹೆಚ್ಚಿಸಲು ತರಬೇತಿಯನ್ನು ನೀಡಲಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಸುಮಾರು 60,000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯಗಳ 5.67 ಲಕ್ಷಕ್ಕೂ ಹೆಚ್ಚು ಸದಸ್ಯರಿಗೆ ಸಾಲ ನೀಡಲಾಗಿದೆ.
ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗಾಗಿ ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರವು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಮೋದಿ ಸರ್ಕಾರ ಇಲ್ಲಿಯವರೆಗೆ ಪ್ರಾರಂಭಿಸಿರುವ ವಿವಿಧ ಕಾರ್ಯಕ್ರಮಗಳು ಇಂತಿವೆ:
1. ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆ
2. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ
3. ಅರ್ಹತೆ ಮತ್ತು ಸಂಪನ್ಮೂಲ ಆಧಾರಿತ ವಿದ್ಯಾರ್ಥಿವೇತನ ಯೋಜನೆ
4. ಮೌಲಾನಾ ಆಜಾದ್ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ
5. ನಯಾ ಸವೇರಾ – ಉಚಿತ ಕೋಚಿಂಗ್ ಕಾರ್ಯಕ್ರಮ
6. ಪಾಡೋ ಪರ್ದೇಸ್ – ವಿದೇಶದಲ್ಲಿ ಶಿಕ್ಷಣ ಪಡೆಯಲು ಕಾರ್ಯಕ್ರಮ
7. ನಾಯ್ ಉದಾನ್ – ಯುಪಿಎಸ್ಸಿ ಮತ್ತು ಪಿಎಸ್ಸಿ ತೇರ್ಗಡೆಯಾಗಬಯಸುವ ಆಕಾಂಕ್ಷಿಗಳಿಗಾಗಿರುವ ಯೋಜನೆ
8. ಹಮರಿ ಧರೋಹರ್ – ಪರಂಪರೆಯನ್ನು ರಕ್ಷಿಸಲು ಇರುವ ಕಾರ್ಯಕ್ರಮ
9. ಜಿಯೋ ಪಾರ್ಸಿ
10. ನಯಾ ರೋಶ್ನಿ
11. ಸೀಕೋ ಔರ್ ಕಮಾವೋ
12. ನಯ ಮಂಝಿಲ್
13. ಉಸ್ತಾದ್
14. ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ
15. ಮೌಲಾನಾ ಆಜಾದ್ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮ
16. ಪ್ರತಿಭಾವಂತ ಬಾಲಕಿಯರ ಯೋಜನೆ
17. ಗರಿಬ್ ನವಾಜ್ ರೋಜ್ಗಾರ್ ಪ್ರಶಿಕ್ಷನ್
ಈ ಕಾರ್ಯಕ್ರಮಗಳ ಮೂಲಕ ಮೋದಿ ಸರ್ಕಾರವು ಅಲ್ಪಸಂಖ್ಯಾತರ ಸರ್ವೊತೋಮುಖವಾದ ಪ್ರಗತಿಗೆ ಶ್ರಮಿಸುತ್ತಿದೆ. ಈ ಮೂಲಕ ತನ್ನ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಧ್ಯೇಯಮಂತ್ರವನ್ನು ಬದ್ಧತೆಯೊಂದಿಗೆ ಅನುಷ್ಠಾನಕ್ಕೆ ತರುತ್ತಿದೆ. ಮೋದಿ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮಾತಿನ ಮೂಲಕವಲ್ಲ, ಕಾರ್ಯದ ಮೂಲಕ ಉತ್ತರವನ್ನು ನೀಡುತ್ತಿರುವುದು ಮೆಚ್ಚಲೇ ಬೇಕಾದಂತಹ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.