News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಷ್ಮಾ ನಿಧನಕ್ಕೆ ಕಂಬನಿ ಮಿಡಿದ ಜಪಾನ್, ಚೀನಾ

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಗಲುವಿಕೆಗೆ ದೇಶ ವಿದೇಶಗಳ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಜಪಾನ್ ಮತ್ತು ಚೀನಾದ ರಾಯಭಾರಿಗಳೂ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ಜಪಾನ್ ರಾಯಭಾರಿ...

Read More

ಇಂದು ಪ್ರಣವ್ ಮುಖರ್ಜಿ, ನಾನಾಜೀ ದೇಶಮುಖ್, ಭುಪೇನ್ ಹಜಾರಿಕಾರಿಗೆ ‘ಭಾರತ ರತ್ನ’ ಪ್ರದಾನ

ನವದೆಹಲಿ: ದೇಶದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಅವರಿಗೆ ಇಂದು ಭಾರತ ರತ್ನ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದೆ. ಅವರೊಂದಿಗೆ, ಖ್ಯಾತ ಗಾಯಕ ಭುಪೇನ್ ಹಜಾರಿಕಾ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ನಾನಾಜೀ ದೇಶಮುಖ್ ಅವರುಗಳಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮರಣೋತ್ತರವಾಗಿ...

Read More

ಭಯೋತ್ಪಾದಕ ದಾಳಿ ಬೆದರಿಕೆ: 7 ರಾಜ್ಯಗಳಲ್ಲಿ ಹೈಅಲರ್ಟ್ ಘೋಷಣೆ

ನವದೆಹಲಿ: ಸಂವಿಧಾನದ 370ನೇ ವಿಧಯನ್ನು ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಹಲವು ರಾಜ್ಯಗಳಲ್ಲಿ ಉಗ್ರರ ದಾಳಿಯ ಆತಂಕ ಎದುರಾಗಿದೆ. ಪಾಕಿಸ್ಥಾನ ಆಕ್ರಮಿತ ಜೈಶೇ ಇ ಮೊಹಮ್ಮದ್ ಸೇರಿದಂತೆ ಇತರ ಸಂಘಟನೆಗಳು ಭಾರತದ ಮೇಲೆ ದಾಳಿಗೆ ಹೊಂಚು ಹಾಕಿ ಕುಳಿತಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು...

Read More

ನೆರೆ ಪರಿಹಾರ ಕಾರ್ಯ : ಅಂದು ಮೋದಿ, ಇಂದು ಬಿಎಸ್­ವೈ

ಕರ್ನಾಟಕದ ಹಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು ಪ್ರವಾಹ ಸನ್ನಿವೇಶವನ್ನು ಎದುರಿಸುತ್ತಿವೆ. ಬೆಳಗಾವಿ, ಗೋಕಾಕ್, ಮಡಿಕೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದೆ. ಮಹಾಮಳೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ತಿನ್ನಲು...

Read More

ಜಮ್ಮು ಕಾಶ್ಮೀರದ ಸ್ಥಳೀಯರೊಂದಿಗೆ ಊಟ ಮಾಡಿದ ಅಜಿತ್ ದೋವಲ್

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡ ಬೆಳವಣಿಗೆಯ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಣಿವೆ ರಾಜ್ಯದಲ್ಲಿ ಸ್ಥಳಿಯರೊಂದಿಗೆ ಮಾತುಕತೆಯನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಬುಧವಾರ ಅವರು ಬೀದಿಯಲ್ಲಿ ನಿಂತು ಸಾಂಪ್ರದಾಯಿಕ ಕಾಶ್ಮೀರಿ ವಾಝ್ವನ್ ಊಟವನ್ನು ಸವಿಯುತ್ತಿರುವ ವೀಡಿಯೋಗಳು...

Read More

ರಾಯಭಾರಿಯನ್ನು ಉಚ್ಛಾಟಿಸಿ, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಕಡಿದುಕೊಂಡ ಪಾಕಿಸ್ಥಾನ

ಇಸ್ಲಾಮಾಬಾದ್: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿರುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಭಾರತದ ಕ್ರಮವನ್ನು ಪಾಕಿಸ್ಥಾನ ತೀವ್ರವಾಗಿ ವಿರೋಧಿಸಿದ್ದು, ಇಸ್ಲಾಮಾಬಾದಿನಲ್ಲಿ ಭಾರತೀಯ ಹೈಕಮಿಷನರ್ ಅನ್ನು ಉಚ್ಛಾಟನೆಗೊಳಿಸಿದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಕಡಿತಗೊಳಿಸಿದೆ. “ನಾವು ದೆಹಲಿಯಿಂದ ನಮ್ಮ ರಾಯಭಾರಿಯನ್ನೂ ವಾಪಸ್...

Read More

370ನೇ ವಿಧಿ ರದ್ಧತಿಗೆ ಸಂಬಂಧಿಸಿದಂತೆ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದಕ್ಕೆ ಮತ್ತು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದಕ್ಕೆ  ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ...

Read More

ಜನ ಮೆಚ್ಚಿದ ನಾಯಕಿಗೆ ಅಂತಿಮ ವಿದಾಯ ಕೋರಿದ ಗಣ್ಯರು

  ನವದೆಹಲಿ: ಅಗಲಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯವನ್ನು ಕೋರಲಾಗಿದೆ. ಲೋಧಿ ರೋಡ್ ವಿದ್ಯುತ್ ಚಿಗಾರದಲ್ಲಿ  ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ. ಪುತ್ರಿ ಬನ್ಸುರಿ ಸ್ವರಾಜ್ ಮತ್ತು ಪತಿ  ಸ್ವರಾಜ್ ಕೌಶಲ್ ಅಂತಿಮ ವಿಧಿವಿಧಾನಗಳನ್ನು ನರೆವೇರಿಸಿದರು. ಅಂತ್ಯಸಂಸ್ಕಾರಕ್ಕೂ...

Read More

ನಾವೂ ಭಾರತದ ಭಾಗ, ಗಿಲ್ಗಿಟ್-ಬಲ್ತಿಸ್ಥಾನಕ್ಕೂ ಸಂಸತ್ತಿನಲ್ಲಿ ಪ್ರತಿನಿಧಿತ್ವ ಸಿಗಲಿ: POK ಹೋರಾಟಗಾರ

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿ ಮತ್ತು ಕಲಂ 35ಎ ಅನ್ನು ತೆಗೆದು ಹಾಕಿದ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ(ಪಿಓಕೆ) ಹೋರಾಟಗಾರ ಸೆಂಗೆ ಎಷ್ ಸೆರಿಂಗ್ ಸ್ವಾಗತಿಸಿದ್ದಾರೆ. ಅಲ್ಲದೇ, ಗಿಲ್ಗಿಟ್-ಬಲ್ತಿಸ್ಥಾನಗಳಿಗೂ ಸಂಸತ್ತಿನಲ್ಲಿ ಪ್ರತಿನಿಧಿತ್ವ...

Read More

ಕರ್ನಾಟಕದ ಹಲವು ಭಾಗಗಳಲ್ಲಿ ಜಲದಿಗ್ಬಂಧನ: ಜನಜೀವನ ತತ್ತರ

ಬೆಳಗಾವಿ: ಮಹಾಮಳೆಗೆ ಕರ್ನಾಟಕದ ಅರ್ಧ ಭಾಗ ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು, ಕೊಡಗು, ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿಯವರೆಗೆ ಮಹಾಮಳೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕೊಡುಗೆ ಜಿಲ್ಲೆಯಲ್ಲಿ ನಿನ್ನೆಗಿಂತಲೂ ಇಂದು ಮಳೆಯ...

Read More

Recent News

Back To Top