ಭಾರತದ 50 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಒಬ್ಬ ಯೋಗಿ, ಅತೀಂದ್ರಿಯ ಮತ್ತು ದೂರದೃಷ್ಟಿತ್ವವುಳ್ಳವರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮ ಮಾರಾಟ ಕಾಣುವ ಪುಸ್ತಕಗಳ ಲೇಖಕರೂ ಹೌದು. ಅವರ ವಿಶಿಷ್ಟ ಮತ್ತು ಅಸಾಧಾರಣ ಸೇವೆಯನ್ನು ಪರಿಗಣಿಸಿ ಅವರಿಗೆ 2017ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ. 3 ದಶಕಗಳ ಹಿಂದೆ, ಸದ್ಗುರು ಅವರು ಇಶಾ ಫೌಂಡೇಶನ್ ಅನ್ನು ಸ್ಥಾಪನೆ ಮಾಡಿದ್ದರು. ಮಾನವ ಸೇವೆಯಲ್ಲಿ ನಿರತವಾದ ಲಾಭಯೇತರ ಸಂಸ್ಥೆ ಇದಾಗಿದೆ. ಮಾನವನ ಕಲ್ಯಾಣವೇ ಇದರ ಪ್ರಮುಖ ಆದ್ಯತೆ. ಗ್ರಾಮೀಣ ಭಾರತದ ಹಿಂದುಳಿದ ಜನರನ್ನು ಮೇಲೆತ್ತಲು ವಿವಿಧ ಯೋಜನೆಗಳನ್ನು ಸದ್ಗುರು ಆರಂಭಿಸಿದ್ದಾರೆ ಮತ್ತು ಜನರಲ್ಲಿ ಪರಿವರ್ತನೆಯನ್ನು ತರಲು ಯೋಗಿ ಅವರು ಕಾರ್ಯಕ್ರಮಗಳನ್ನೂ ಆಯೋಜನೆಗೊಳಿಸುತ್ತಾರೆ.
ಸದ್ಗುರು ಅವರು ಭಾರತದ ನದಿಗಳನ್ನು ಉಳಿಸುವ ತನ್ನ ಯೋಜನೆಗಳ ಬಗ್ಗೆ ಬರೆದ ಬ್ಲಾಗ್ನ ವಿವರಗಳು ಇಲ್ಲಿವೆ.
ನದಿಗಳಿಗಾಗಿನ ನಮ್ಮ ಅಭಿಯಾನ ‘ರ್ಯಾಲಿ ಫಾರ್ ರಿವರ್’ ಸ್ಪಷ್ಟವಾಗಿ ಅರಿವು ಮೂಡಿಸುವ ಅಭಿಯಾನ. ನಾವು ನಮ್ಮ ನದಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಅಭಿಯಾನ. ನದಿಗಳ ಬಗೆಗಿನ ನಮ್ಮ ನೀತಿಗಳನ್ನು ಬದಲಾಯಿಸಲು ಜನ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಆರಂಭಿಸಲಾದ ಅಭಿಯಾನ. 30 ದಿನಗಳಲ್ಲಿ ನಾನು ವೈಯಕ್ತಿಕವಾಗಿ 9,300 ಕಿಲೋಮೀಟರ್ ಕ್ರಮಿಸಿದ್ದೇನೆ. ಈ ವೇಳೆಯಲ್ಲಿ, 142 ಕಾರ್ಯಗಳನ್ನು ಉದ್ದೇಶಿಸಿ ಮಾತನಾಡಿದ್ದೇವೆ ಮತ್ತು 180 ಸಂದರ್ಶನಗಳನ್ನು ನೀಡಿದ್ದೇನೆ.
ರಾಷ್ಟ್ರ ಚಳುವಳಿಯಾಗಿ ಇದನ್ನು ರೂಪಿಸುವುದೇ ನಮ್ಮ ಅಭಿಯಾನದ ಒಟ್ಟು ಯೋಚನೆ. 162 ದಶಲಕ್ಷ ಜನರು ಈ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ. ಕೇವಲ 30 ದಿನಗಳಲ್ಲಿ ಇಷ್ಟು ಪ್ರಮಾಣದ ಜನರ ಬೆಂಬಲವನ್ನು ಪಡೆಯುತ್ತಿರುವ ಮೊದಲ ಅಭಿಯಾನ ಇದಾಗಿದೆ.
ಜನರ ಧ್ವನಿ
ಒಂದು ಬಾರಿ ಭಾರೀ ಪ್ರಮಾಣದ ಜನ ಬೆಂಬಲ ಸಿಕ್ಕರೆ, ಸರ್ಕಾರಕ್ಕೆ ಅದನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಾಗುವುದಿಲ್ಲ. ‘ರ್ಯಾಲಿ ಫಾರ್ ರಿವರ್ಸ್’ನ 760 ಪುಟಗಳ ಶಿಫಾರಸ್ಸುಗಳನ್ನು ನಾವು ಕೇಂದ್ರ ಸರ್ಕಾರಕ್ಕೆ ಪ್ರಸ್ತುತಪಡಿಸಿದ್ದೇವೆ. ನಾವು ನೀಡಿದ ಸರಿಸುಮಾರು 16 ಗಂಟೆಗಳ ನಂತರ ಪ್ರಧಾನ ಮಂತ್ರಿಯವರು ಈ ಶಿಫಾರಸ್ಸುಗಳ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ಸ್ಥಾಪನೆ ಮಾಡಿದರು.
ಬಳಿಕ ಅದು ಭಾರತದ ಯೋಜನ ಮಂಡಳಿಯಾದ ನೀತಿ ಆಯೋಗದ ಬಳಿಗೆ ಹೋಯಿತು. ವೈಜ್ಞಾನಿಕ ಪರೀಕ್ಷೆಗ ಅದನ್ನು ಒಳಪಡಿಸಲಾಯಿತು. ಅವರ ಎಲ್ಲಾ ಪರೀಕ್ಷೆಗಳನ್ನು ನಮ್ಮ ಶಿಫಾರಸ್ಸು ತೇರ್ಗಡೆಯಾದ ಬಳಿಕ ಅವರು ಅದನ್ನು ಅಧಿಕೃತ ಶಿಫಾರಸ್ಸಾನ್ನಾಗಿ ಮಾಡಿದರು ಮತ್ತು ಎಲ್ಲಾ 29 ರಾಜ್ಯಗಳಿಗೆ ಕಳುಹಿಸಿಕೊಟ್ಟರು.
ತನ್ನ ನೀತಿಯ ಮೇಲೆ ಸರ್ಕಾರವೊಂದು ಖಾಸಗಿ ಸಂಸ್ಥೆಯ ಹೆಸರನ್ನು ಹಾಕಿದ ಸನ್ನಿವೇಶ ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಆದರೆ ನದಿಯ ಪುನರುಜ್ಜೀವನ ಶಿಫಾರಸ್ಸಿನ ಮೇಲೆ ಪ್ರಸ್ತುತ ಸರ್ಕಾರ ಅದನ್ನು ಮಾಡಿತು. ಯಾಕೆಂದರೆ ನಾವೇನು ಮಾಡಿದ್ದೇವೋ ಅದರಲ್ಲಿ ನೈಜತೆ ಇರುವುದನ್ನು ಅವರು ಕಂಡುಕೊಂಡರು.
ರ್ಯಾಲಿಯ ಸಂದರ್ಭದಲ್ಲಿ, ನಾವು 16 ರಾಜ್ಯಗಳಿಗೆ ಪ್ರಯಾಣಿಸಿದಾಗ, ಈ ಎಲ್ಲಾ ರಾಜ್ಯಗಳಲ್ಲಿ ಬೇರೆ ಬೇರೆ 6 ರಾಜಕೀಯ ಪಕ್ಷಗಳೂ ಆಡಳಿತ ನಡೆಸುತ್ತಿದ್ದವು. ಕಳೆದ 30-40 ವರ್ಷಗಳಲ್ಲೇ ಮೊದಲ ಬಾರಿಗೆ ಈ 6 ಪಕ್ಷಗಳ ವಿಭಿನ್ನ ರಾಜಕೀಯ ನಿಲುವಿನ ಜನರು ಒಂದಾಗಿ ನಿಂತು ನಮಗೆ ಬೆಂಬಲ ನೀಡಿದರು.
ರ್ಯಾಲಿ ಫಾರ್ ರಿವರ್ಸ್ನಿಂದ ಕಾವೇರಿ ಕಾಲಿಂಗ್
‘ಕಾವೇರಿ ಕಾಲಿಂಗ್’ ರ್ಯಾಲಿ ಫಾರ್ ರಿವರ್ಸ್ಗಿಂತ ಬಹಳ ಭಿನ್ನವಾಗಿದೆ. ರ್ಯಾಲಿ ಫಾರ್ ರಿವರ್ಸ್ ಕಾನೂನುಗಳನ್ನು ಬದಲಾಯಿಸುವ ಜಾಗೃತಿ ಅಭಿಯಾನವಾಗಿತ್ತು. ಈಗ, ನಾವು ನೆಲದ ಮೇಲಿನ ಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೇವೆ.
ಮಹಾರಾಷ್ಟ್ರದ ಯವತ್ಮಾಲ್ ಪ್ರದೇಶದಲ್ಲಿ ಮತ್ತೊಂದು ಯೋಜನೆಯನ್ನು ನಾವು ಹೊಂದಿದ್ದೇವೆ. ಗೋದಾವರಿಯ ಉಪನದಿಯಾದ ವಘಾರಿ ಎಂಬ 54 ಕಿಲೋಮೀಟರ್ ಉದ್ದ ನದಿಯಲ್ಲಿ ಈ ಯೋಜನೆ ನಡೆಯುತ್ತಿದೆ. ನಾವು ಸರ್ಕಾರದೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಸ್ವಯಂಸೇವಕರು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ರ್ಯಾಲಿ ಫಾರ್ ರಿವರ್ಸ್ ಕಾನೂನನ್ನು ಬದಲಿಸುವ ಜಾಗೃತಿ ಯೋಜನೆಯಾಗಿತ್ತು, ವಾಘಾರಿ ಒಂದು ಕೈಗೆಟುಕುವ ಯೋಜನೆಯಾಗಿದೆ. ಕಾವೇರಿ ಕಾಲಿಂಗ್ ಇದರ ನಡುವೆ ಇದೆ. ವ್ಯಾಪ್ತಿಯಲ್ಲಿ, ಕಾವೇರಿ ಕಾಲಿಂಗ್ ವಾಘರಿಗಿಂತ ದೊಡ್ಡದಾಗಿದೆ ಏಕೆಂದರೆ ಕಾವೇರಿ ಕಾಲಿಂಗ್ ಅನ್ನು ನಾವು ಸರ್ಕಾರ, ರೈತರು ಮತ್ತು ನಮ್ಮ ನಡುವೆ ಕಾರ್ಯಗತಗೊಳಿಸುತ್ತಿದ್ದೇವೆ.
ನಾವು ಕಾವೇರಿ ಕಾಲಿಂಗ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಬಹುದು ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಮಾಜಿ ಇಸ್ರೋ ಅಧ್ಯಕ್ಷರು, ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ – ಇಂಡಿಯಾದ ಸಿಇಒ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಬಯೋಕಾನ್ ಲಿಮಿಟೆಡ್ನ ಅಧ್ಯಕ್ಷರು, ದೇಶದ ಉನ್ನತ ಜಲ ತಜ್ಞರು ಮತ್ತು ಫಾರ್ಮರ್ ಪ್ರೊಡ್ಯುಸರ್ ಆರ್ಗನೈಝೇಶನ್ ಮೂವ್ಮೆಂಟ್ ಆರಂಭಿಸಿದ ವ್ಯಕ್ತಿಗಳನ್ನು ಹೊಂದಿದ ಮಂಡಳಿಯನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ದೇಶದ ಅತ್ಯಂತ ಶ್ರೇಷ್ಠ ಮಂಡಳಿ ಇದೆ ಎಂಬುದು ಹೆಮ್ಮೆಯ ವಿಷಯ. ನಮ್ಮಲ್ಲಿ ನೂರು ಸಮರ್ಪಿತ ಸ್ವಯಂಸೇವಕರು ಇದ್ದಾರೆ, ಅವರು ಈ ಸಂದರ್ಭದಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಕಾವೇರಿ ಕಾಲಿಂಗ್ ಅನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಂಪೂರ್ಣ ಸುಸಜ್ಜಿತರಾಗಿದ್ದೇವೆ.
ಆದರೆ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡದಿದ್ದರೆ ಯಾವ ಕೆಲಸವೂ ನಿಷ್ಪ್ರಯೋಜಕವಾಗುತ್ತದೆ. ಅದೃಷ್ಟವಶಾತ್, ಕರ್ನಾಟಕ ಮತ್ತು ತಮಿಳುನಾಡು ಎರಡೂ ಸರ್ಕಾರಗಳು ಇದನ್ನು ಅನುಕೂಲಕರವಾಗಿ ನೋಡುತ್ತಿವೆ, ಏಕೆಂದರೆ ಇದಕ್ಕೆ ಅಗತ್ಯವಿರುವ ಹಣಕಾಸಿನ ಪ್ರಮಾಣವು ತುಂಬಾ ಕಡಿಮೆ. ಹಣವನ್ನು ಈಗಾಗಲೇ ವಿವಿಧ ಯೋಜನೆಗಳಿಗೆ ನಿಗದಿಪಡಿಸಲಾಗಿದೆ. ಅದನ್ನು ಮರುಹಂಚಿಕೆ ಮಾಡಬೇಕಾಗಿದೆ.
ಕಾವೇರಿ ಕಾಲಿಂಗ್ ಮೂಲಭೂತವಾಗಿ ರೈತರಿಗೆ ಆರ್ಥಿಕ ಯೋಜನೆ ಮತ್ತು ದೇಶಕ್ಕೆ ಪರಿಸರ ಯೋಜನೆಯಾಗಿದೆ. ಕಾವೇರಿ ಮೊದಲ ಹೆಜ್ಜೆ ಮಾತ್ರ. ಕಾವೇರಿ ಜಲಾನಯನ ಪ್ರದೇಶದಲ್ಲಿ ಹನ್ನೆರಡು ವರ್ಷಗಳ ಅವಧಿಯಲ್ಲಿ ನಾವು ಇದನ್ನು ಯಶಸ್ವಿಯಾಗಿ ನಡೆಸಿದರೆ, ಇದು ರಾಷ್ಟ್ರಕ್ಕೆ ಮತ್ತು ಉಷ್ಣವಲಯದ ಜಗತ್ತಿಗೆ ಬದಲಾವಣೆಯನ್ನು ತರಲಿದೆ.
ಸ್ವಾತಂತ್ರ್ಯ ಚಳವಳಿ
ನದಿಗಳ ವಿಷಯಕ್ಕೆ ಬಂದರೆ, ನಾವು ದಬ್ಬಾಳಿಕೆ ಮಾಡುವವರು. ನಾವೆಲ್ಲರೂ ವಿನಾಶದ ಪಕ್ಷದಲ್ಲಿರುವವರು. ಸ್ವಾತಂತ್ರ್ಯ ಚಳುವಳಿಗಿಂತಲೂ ದೊಡ್ಡ ಚಳುವಳಿಯ ಅಗತ್ಯ ಇದಕ್ಕಿದೆ. ಏಕೆಂದರೆ ಶತ್ರುಗಳು ಒಳಗೇ ಇದ್ದಾರೆ. ಹೆಚ್ಚು ಶಕ್ತಿ, ಪ್ರಾಮಾಣಿಕತೆ ಮತ್ತು ದೃಢ ಕ್ರಮದ ಅಗತ್ಯವು ಇದಕ್ಕಿದೆ. ಯಾಕೆಂದರೆ ಒಳಗಿನ ಶತ್ರು ಅಷ್ಟು ಸುಲಭವಾಗಿ ನಿರ್ಗಮಿಸುವುದಿಲ್ಲ. 50 ವರ್ಷಗಳ ಹಿಂದೆ ನಾನು ಅದ್ಭುತವಾದ ಶುದ್ಧ ಕಾವೇರಿಯನ್ನು ನೋಡಿದ್ದೆ, ಇನ್ನು ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಅದೇ ಕಾವೇರಿಯನ್ನು ನಮ್ಮ ಮಕ್ಕಳಿಗೆ ತೋರಿಸಲು ನಾನು ಬಯಸುತ್ತೇನೆ.
ದೇಶದ ಜೀವಸೆಲೆಗಳಾದ ನದಿಗಳನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎಂಬುದಕ್ಕೆ ಮಾನದಂಡವನ್ನು ನಿಗದಿಪಡಿಸುತ್ತಿರುವ ಮೊದಲ ಅಭಿಯಾನ ಕಾವೇರಿ ಕಾಲಿಂಗ್. ಇದು ನದಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡಲು ರೈತರಿಗೆ ಬೆಂಬಲ ನೀಡುವ ಮೂಲಕ ಕಾವೇರಿ ನದಿಯ ಪುನರುಜ್ಜೀವನಕ್ಕೆ ಉತ್ತೇಜನ ನೀಡಲಿದೆ. ಇದು ಜಲಾನಯನ ಪ್ರದೇಶದಲ್ಲಿ ನೀರಿನ ಧಾರಣವನ್ನು ಹೆಚ್ಚಿಸಲಿದೆ, 5-7 ವರ್ಷಗಳಲ್ಲಿ ರೈತರ ಆದಾಯವನ್ನು 3-8 ಪಟ್ಟು ಹೆಚ್ಚಿಸಲಿದೆ ಮತ್ತು 84 ದಶಲಕ್ಷ ಜನರ ಜೀವನವನ್ನು ಪರಿವರ್ತನೆಗೊಳಿಸಲಿದೆ.
ಭೇಟಿ ನೀಡಿ: CauveryCalling.org ಅಥವಾ 80009 80009 ಗೆ ಕರೆ ಮಾಡಿ. #CauveryCalling
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.