ನವದೆಹಲಿ: ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನವನ್ನು ಕುಗ್ಗಿಸುವ ನಿಟ್ಟಿನಲ್ಲಿ ಭಾರತ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೇಯು ಪ್ರಮುಖ ಹಸಿರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಈ ಹಿನ್ನಲೆಯಲ್ಲಿ ರೈಲ್ವೇ ಸಚಿವಾಲಯ ಮತ್ತು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ನಡುವೆ ಒಪ್ಪಂದ ಏರ್ಪಟ್ಟಿದ್ದು, ಇವುಗಳು ಜಂಟಿಯಾಗಿ ಹಲವಾರು ಹಸಿರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಸಿ. ಅಂಗಡಿಯವರು, “ಸ್ವಚ್ಛತೆ ಈಗ ಚಳುವಳಿಯಾಗಿ ರೂಪುಗೊಂಡಿದೆ. ಪ್ರಧಾನಿಯವರಿಂದ ಪ್ರೇರಣೆಯನ್ನು ಪಡೆದುಕೊಂಡು, ದೇಶದಾದ್ಯಂತ ಜನರು ಸ್ವಚ್ಛತೆಯನ್ನು ಆಂದೋಲನವಾಗಿ ಪರಿವರ್ತಿಸಿದ್ದಾರೆ. ರೈಲ್ವೇ ಕೂಡ ಸ್ವಚ್ಛತೆಗೆ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ರೈಲ್ವೇಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ನೈರ್ಮಲ್ಯಗಳನ್ನು ಕಾಪಾಡಿಕೊಳ್ಳಲಾಗುತ್ತಿದೆ” ಎಂದಿದ್ದಾರೆ.
ಸ್ವಚ್ಛತೆಯ ನಿಟ್ಟಿನಲ್ಲಿ ರೈಲ್ವೇ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಶ್ರಮ ಶ್ಲಾಘನೀಯವಾಗಿದೆ. ವರ್ಕ್ಶಾಪ್ ಮತ್ತು ಪ್ರೊಡಕ್ಷನ್ ಯುನಿಟ್ ಸೇರಿದಂತೆ 50 ರೈಲ್ವೇ ಘಟಕಗಳು, 12 ರೈಲ್ವೇ ನಿಲ್ದಾಣಗಳು, 16 ಕಟ್ಟಡಗಳು ಮತ್ತು ಇತರ ಸೌಲಭ್ಯಗಳು ಹಸಿರು ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿವೆ. ಇನ್ನಷ್ಟು ರೈಲ್ವೇ ಪ್ರೊಡಕ್ಷನ್ ಯುನಿಟ್ ಮತ್ತು ವರ್ಕ್ಶಾಪ್ಗಳು ಹಸಿರು ಸರ್ಟಿಫಿಕೇಟ್ ಪಡೆಯಲಿವೆ ಎಂದಿದ್ದಾರೆ.
ರೈಲ್ವೇ ಸಚಿವಾಲಯ ಮತ್ತು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ನಡುವೆ ನಡೆದ ಒಪ್ಪಂದದ ಪ್ರಮುಖ ಉದ್ದೇಶಗಳೆಂದರೆ, ಪ್ರೊಡಕ್ಷನ್ ಯುನಿಟ್ ಮತ್ತು ರೈಲ್ವೆ ವರ್ಕ್ಶಾಪ್ಗಳಲ್ಲಿ ಇಂಧನ ಶಕ್ತಿಯ ದಕ್ಷತೆಯನ್ನು ಪಡೆಯುವುದು, ರೈಲ್ವೇಯನ್ನು ಹಸಿರೀಕರಣಗೊಳಿಸುವುದು, ಸಾಮರ್ಥ್ಯ ಮತ್ತು ಕೌಶಲ್ಯ ಅಭಿವೃದ್ಧಿ ಮಾಡುವುದು, ತ್ಯಾಜ್ಯ ನಿರ್ವಹಣಾ ನೀತಿಯನ್ನು, ಘನತ್ಯಾಜ್ಯ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.