ನವದೆಹಲಿ: ಸಿಖ್ ಧರ್ಮ ಜಗತ್ತಿನ ಪ್ರಮುಖ ಧರ್ಮಗಳ ಪೈಕಿ ಅತ್ಯಂತ ಕಿರಿಯ ಧರ್ಮವಾಗಿದೆ ಮತ್ತು ವಿಶ್ವದ ಐದನೇ ಅತೀದೊಡ್ಡ ಸಂಘಟಿತ ಧರ್ಮವಾಗಿದೆ. ಮಾತ್ರವಲ್ಲದೇ, ವಿಶ್ವದ 9ನೇ ಅತೀದೊಡ್ಡ ಧರ್ಮವಾಗಿದೆ.
ಈ ವರ್ಷ ದೇಶ ಮತ್ತು ವಿದೇಶಗಳ ಸಿಖ್ ಧರ್ಮಿಯರು ತಮ್ಮ ಪರಮೋಚ್ಛ ಗುರು ಗುರು ನಾನಕ್ ದೇವ್ ಅವರ 550ನೇ ಜನ್ಮ ವರ್ಷವನ್ನು ಆಚರಿಸುತ್ತಿದ್ದಾರೆ. ನಾನಕ್ ಅವರ ಬೋಧನೆಗಳನ್ನು, ತತ್ವಗಳನ್ನು ಪ್ರಚಾರಪಡಿಸುವ ಸಲುವಾಗಿ ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅವರ ಕೃತಿಗಳನ್ನು, ಗ್ರಂಥಗಳನ್ನು ವಿಶ್ವದ ನಾನಾ ಭಾಷೆಗಳಿಗೆ ಭಾಷಾಂತರಗೊಳಿಸಲು ನಿರ್ಧರಿಸಿದೆ.
ಸಂಸ್ಕೃತಿ ಸಚಿವಾಲಯದ ಟ್ವೀಟ್ ಪ್ರಕಾರ, “ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ, ಯುನೆಸ್ಕೋ ಅವರ ಬರಹಗಳ ಸಂಕಲನವನ್ನು ವಿಶ್ವ ಭಾಷೆಗಳಿಗೆ ಅನುವಾದಿಸಲು ಮತ್ತು ಪ್ರಕಟಿಸಲು ನಿರ್ಧರಿಸಿದೆ”.
ನಾನಕ್ ಅವರ 550ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ ಮತ್ತು ಹಲವಾರು ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ದೇವಾ ಬಾಬಾ ನಾನಕ್ನಿಂದ ಅಂತಾರಾಷ್ಟ್ರೀಯ ಗಡಿಯವರೆಗೆ ಕರ್ತಾರ್ಪುರ ಕಾರಿಡಾರ್ ನಿರ್ಮಾಣ, ಐತಿಹಾಸಿಕ ಪಟ್ಟಣವಾದ ಸುಲ್ತಾನಪುರ ಲೋಧಿಯನ್ನು ಪಾರಂಪರಿಕ ಗ್ರಾಮವಾಗಿ ಅಭಿವೃದ್ಧಿಪಡಿಸುವುದು, ಸುಲ್ತಾನಪುರ ಲೋಧಿ ರೈಲ್ವೆ ನಿಲ್ದಾಣದ ಉನ್ನತೀಕರಣ ಮತ್ತು ನಾನಕ್ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆ ಚೀಟಿಗಳ ಬಿಡುಗಡೆ ಇತ್ಯಾದಿ ಕಾರ್ಯಗಳನ್ನು ಸರ್ಕಾರ ನಡೆಸಲಿದೆ.
To Commemorate 550th Birth Anniversary of #GuruNanak Dev Ji , UNESCO has decided to Translate and Publish Anthology of his writings into World Languages.#GuruNanak550 #ShriGuruNanakDevJi550 pic.twitter.com/CG6iyRMPm7
— Ministry of Culture (@MinOfCultureGoI) September 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.