
1971 ರಲ್ಲಿ, ಪಾಕಿಸ್ತಾನದ ಸೈನ್ಯವು ಬಂಗಾಳಿ ಪ್ರತಿರೋಧವನ್ನು ಹತ್ತಿಕ್ಕಲು ಆಪರೇಷನ್ ಸರ್ಚ್ಲೈಟ್ ಅನ್ನು ಪ್ರಾರಂಭಿಸಿ ಅಂದಾಜು ಮೂರು ಮಿಲಿಯನ್ ಬಂಗಾಳಿ ಜೀವಗಳನ್ನು ಬಲಿ ತೆಗೆದುಕೊಂಡಿತು. ಈ ಮಿಲಿಟರಿ ದಮನವು ಸಾಮೂಹಿಕ ಹತ್ಯೆಗಳು, ಸ್ಥಳಾಂತರ ಮತ್ತು ಲೈಂಗಿಕ ಹಿಂಸಾಚಾರದ ಅಭಿಯಾನವನ್ನೇ ಆರಂಭಿಸಿದವು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ರಾಜಕೀಯ ಕಾರ್ಯಕರ್ತರ ಜೊತೆಗೆ, ಬಂಗಾಳಿ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಯಿತು. ಲೈಂಗಿಕ ಹಿಂಸೆಯನ್ನು ಕ್ರೌರ್ಯವಾಗಿ ಅಲ್ಲ, ಯುದ್ಧದ ಆಯುಧವಾಗಿ ಬಳಸಲಾಯಿತು.
ಆ ಮಹಿಳೆಯರಲ್ಲಿ ಜೋಗ್ಮಯಾ ಮಾಲೋ ಕೂಡ ಒಬ್ಬರು. ದಕ್ಷಿಣ ಬಾಂಗ್ಲಾದೇಶದ ಈಗ ಶರಿಯತ್ಪುರ ಜಿಲ್ಲೆಯಲ್ಲಿರುವ ಹಿಂದೂ ಮೀನುಗಾರ ಸಮುದಾಯದ ಹದಿಹರೆಯದ ಹುಡುಗಿಯಾಗಿದ್ದವರು ಈಕೆ.
ಜೋಗ್ಮಯಾ ಮಾಲೋ 1971 ರಲ್ಲಿ ಸುಮಾರು ಹದಿನೈದು ವಯಸ್ಸಿನವಳಾಗಿದ್ದಾಗ ಶರಿಯತ್ಪುರ ಜಿಲ್ಲೆಯಲ್ಲಿ ಸಣ್ಣ ಹಿಂದೂ ಮಾಲೋ ಮೀನುಗಾರ ಸಮುದಾಯದಲ್ಲಿ ವಾಸಿಸುತ್ತಿದ್ದಳು. ಯುದ್ಧದ ಮೊದಲು ಅವಳ ಜೀವನ ಶಾಂತ ಮತ್ತು ಸಾಮಾನ್ಯವಾಗಿತ್ತುಇ. ಅವಳ ಹಳ್ಳಿಯೇ ಅವಳ ಜೀವಾಳವಾಗಿತ್ತು. ಯುದ್ಧದ ಬಗ್ಗೆ ಆಕೆ ಇತರರಿಂದ ಕೇಳಿದ್ದಲೇ ಹೊರತು ಎಂದೂ ನೋಡಿದವಳಲ್ಲ. ಅದರ ಕಲ್ಪನೆಯೂ ಆಕೆಗೆ ಇರಲಿಲ್ಲ. ಅವಳಿಗೆ ಯಾವುದೇ ರಾಜಕೀಯ ಸಿದ್ಧಾಂತ ಇರಲಿಲ್ಲ, ಆಕೆಯ ಬಳಿ ಶಸ್ತ್ರಾಸ್ತ್ರಗಳಿರಲಿಲ್ಲ, ಯಾವುದೇ ಚಳುವಳಿಯೊಂದಿಗೆ ಸಂಬಂಧವೂ ಆಕೆಗೆ ಇರಲಿಲ್ಲ. ಅವಳು ಕೇವಲ ಗ್ರಾಮೀಣ ಹಳ್ಳಿಯಲ್ಲಿ ಬೆಳೆಯುತ್ತಿದ್ದ ಸಾಮಾನ್ಯ ಹುಡುಗಿ.
ಮೇ 22, 1971 ರಂದು, ಪಾಕಿಸ್ತಾನಿ ಪಡೆಗಳು ಮತ್ತು ಸ್ಥಳೀಯ ಸಹಚರರು ಶರಿಯತ್ಪುರದ ಮಧ್ಯಪಾರ ಗ್ರಾಮಕ್ಕೆ ನುಗ್ಗಿ, ಹಿಂದೂ ಮಾಲೋ ಸಮುದಾಯವನ್ನು ಗುರಿಯಾಗಿಸಿಕೊಂಡರು. ಕ್ರೂರ ಹತ್ಯಾಕಾಂಡ ನಡೆಸಿದರು, ಲೂಟಿ ಮತ್ತು ಬೆಂಕಿ ಹಚ್ಚಿದರು. ಜೋಗ್ಮಯಳ ಕುಟುಂಬದ ಹಲವಾರು ಸದಸ್ಯರು ಗುಂಡುಗಳು ಅಥವಾ ಬೆಂಕಿಗೆ ಬಲಿಯಾದರು, ಅವಳ ಮಾವ ಮತ್ತು ಸೋದರ ಮಾವ ಸೇರಿದಂತೆ ಅನೇಕರು ಸತ್ತು ಹೋದರು. ಉರಿಯುತ್ತಿರುವ ಮನೆಗಳ ನಡುವೆ ಕಿರುಚಾಟಗಳು ಕೇಳಿದವು. ಅಲ್ಲಿ ಆರ್ತನಾದವಿತ್ತು, ಹೊಗೆ ಮತ್ತು ಗೊಂದಲವಿತ್ತು. ಸುಮಾರು 100 ಜನರೊಂದಿಗೆ ಅಪಹರಿಸಲ್ಪಟ್ಟ ಆಕೆಯನ್ನು ಮದರಿಪುರದ ಎ.ಆರ್. ಹೌಲೇಡರ್ ಜೂಟ್ ಮಿಲ್ಸ್ ಶಿಬಿರಕ್ಕೆ ಲಾಂಚ್ ಮೂಲಕ ಕರೆದೊಯ್ಯಲಾಯಿತು, ಇದನ್ನು ಚಿತ್ರಹಿಂಸೆ ಶಿಬಿರವಾಗಿ ಪರಿವರ್ತಿಸಲಾಯಿತು.
ಉಸಿರುಗಟ್ಟಿಸುವ ಮದರಿಪುರ ಶಿಬಿರದಲ್ಲಿ, ಜೋಗ್ಮಯ ಮತ್ತು ಇತರರು ಇಕ್ಕಟ್ಟಾದ ಕೋಣೆಗಳಲ್ಲಿ ಶವಗಳಂತೆ ಪಕ್ಕಪಕ್ಕದಲ್ಲಿ ಮಲಗಿದ್ದರು, ಪ್ರತಿ ಜಾಗಕ್ಕೂ 20-30 ಮಹಿಳೆಯರು ಗಾಳಿಯೂ ನುಸುಳುದಂತಹ ವಾತಾವರಣದಲ್ಲಿ ಇರಬೇಕಾಯಿತು.. ಮಹಿಳೆಯರು ಲೈಂಗಿಕ ಹಿಂಸೆ ಮತ್ತು ಅಮಾನವೀಯ ಬಂಧನದ ದಿನಗಳನ್ನು ಎದುರಿಸಿದರು, ಅವರನ್ನು ಕಾವಲಿನಲ್ಲಿ ಇರಿಸಲಾಯಿತು ಮತ್ತು ಪದೇ ಪದೇ ಅತ್ಯಾಚಾರ ಮಾಡಿದರು.ಅಲ್ಲಿ ಮಹಿಳೆಯರಿಗೆ ಪ್ರತಿರೋಧ ಅಸಾಧ್ಯವಾಯಿತು. ಹಸಿವು, ಭಯ ಮತ್ತು ಅವಮಾನಗಳು ಅಂತ್ಯವಿಲ್ಲದ್ದಾಯಿತು. ಮೌನವಾಗಿ ಎಲ್ಲವನ್ನು ಸಹಿಸಿಕೊಳ್ಳುವುದೇ ಬದುಕುಳಿಯುವ ಮಾರ್ಗವಾಯಿತು. ಸೈನಿಕರು ಭಯೋತ್ಪಾದಕರಂತೆ ವರ್ತಿಸುತ್ತಿದ್ದರು, ಚಿಕಿತ್ಸೆ ನೀಡದೆ ಕಾಯಿಲೆಗಳಿಂದ ಮಹಿಳೆಯರು ತಮ್ಮ ಕಣ್ಣುಗಳ ಮುಂದೆಯೇ ಸಾಯುವಂತೆ ಮಾಡಿದರು, ಹಸಿವಿನ ನಡುವೆ ಕರುಣೆಯಿಲ್ಲದೆ ಸತ್ತು ಬಿದ್ದವು ಅನೇಕ ದೇಹಗಳು. ಕೆಲ ದಿನಗಳ ನಂತರ ಬಿಡುಗಡೆಯಾದ ಜೋಗ್ಮಯ ಅವಶೇಷದಂತೆ ಮರಳಿದಳು, ಏಳು ತಿಂಗಳ ಕಾಯುವಿಕೆಯ ನಂತರ ಆಕೆ ತನ್ನ ಪತಿ ನೇಪಾಳ ಮಾಲೋ ಅವರೊಂದಿಗೆ ಮತ್ತೆ ಒಂದಾದಳು.
ಯುದ್ಧದ ಸಮಯದಲ್ಲಿ, ಬಂಗಾಳಿ ಮಹಿಳೆಯರನ್ನು ಬಹಿರಂಗವಾಗಿ ಅಮಾನಕ್ಕೀಡುಮಾಡಲಾಯಿತು. ಪಾಕಿಸ್ತಾನಿ ಸೈನಿಕರು ಬಂಗಾಳಿ ಮಹಿಳೆಯರನ್ನು “ಗೋನಿಮೋಟರ್ ಮಾಲ್” ಎಂದು ಕರೆದರು, ಅಂದರೆ ಯುದ್ಧದ ಲೂಟಿಗಳು, ಈ ಪದದ ಮೂಲಕ ಮಹಿಳೆಯರನ್ನು ಜನರಂತೆ ಅಲ್ಲ, ಆಸ್ತಿಯೆಂಬಂತೆ ಪರಿಗಣಿಸಲಾಯಿತು ಮತ್ತು 1971 ರ ಹಿಂಸಾಚಾರದಲ್ಲಿ ಅತ್ಯಾಚಾರವನ್ನು ಹೇಗೆ ಸಾಮಾನ್ಯೀಕರಿಸಲಾಯಿತು ಎಂಬುದನ್ನು ಪ್ರತಿಬಿಂಬಿಸುತ್ತದೆ. ಪಾಕಿಸ್ತಾನಿ ಸೈನ್ಯ ಮತ್ತು ಅವರ ಸ್ಥಳೀಯ ಸಹಚರರು ತಮ್ಮ ಯುದ್ಧ ತಂತ್ರದ ಭಾಗವಾಗಿ 200,000 ರಿಂದ 400,000 ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ನರಮೇಧ, ಅತ್ಯಾಚಾರ ಮತ್ತು ಚಿತ್ರಹಿಂಸೆಯ ವ್ಯವಸ್ಥಿತ ಅಭಿಯಾನವನ್ನು ನಡೆಸಿದರು. 1972 ರಲ್ಲಿ, ಅತ್ಯಾಚಾರಕ್ಕೊಳಗಾದ ಮಹಿಳೆಯರಲ್ಲಿ ಆತ್ಮಹತ್ಯೆ ದರಗಳು ಹೆಚ್ಚಿ ಜಾಗತಿಕ ಗಮನ ಸೆಳೆದವು. ನಂತರ ಆಸ್ಟ್ರೇಲಿಯಾದ ವೈದ್ಯ ಡಾ. ಜೆಫ್ರಿ ಡೇವಿಸ್ ವಿಶ್ವಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಬಾಂಗ್ಲಾದೇಶಕ್ಕೆ ಬಂದರು. ಅವರ ವೈದ್ಯಕೀಯ ತಂಡವು ದಿನಕ್ಕೆ 100 ಕ್ಕೂ ಹೆಚ್ಚು ಗರ್ಭಪಾತಗಳನ್ನು ಮಾಡಿತು ಎಂದು ವರದಿಯಾಗಿದೆ. ಈ ತಂತ್ರವು ಮಹಿಳೆಯರ ದೇಹಗಳನ್ನು ಯುದ್ಧಭೂಮಿಗಳನ್ನಾಗಿ ಪರಿವರ್ತಿಸಿತು, ಬಾಂಗ್ಲಾದೇಶದ ಇತಿಹಾಸದಲ್ಲಿ ಆಳವಾದ ಮತ್ತು ಶಾಶ್ವತವಾದ ಗಾಯವನ್ನು ಬಿಟ್ಟುಹೋಯಿತು.
ಕ್ಯಾನ್ಸರ್ ಜೋಗ್ಮಯಾ ಅವರ ಜೀವನವನ್ನು ಜನವರಿ 5, 2026 ರಂದು 84 ನೇ ವಯಸ್ಸಿನಲ್ಲಿ ಕೊನೆಗೊಳಿಸಿತು, ದಶಕಗಳ ಕಾಲ ವಾಸಿಯಾಗದ ಗಾಯಗಳ ನಂತರ ಅವರ ದೇಹವು ಅಂತಿಮವಾಗಿ ಶರಣಾಯಿತು. ಮರುದಿನ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


