ಬೆರ್ನೆ: ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಸ್ವಿಟ್ಜರ್ಲ್ಯಾಂಡ್ ಭರವಸೆ ನೀಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಯುಲಿ ಮೌರರ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಭರವಸೆಯನ್ನು ನೀಡಿದ್ದಾರೆ.
ಮೌರರ್ ಮತ್ತು ಕೋವಿಂದ್ ಅವರ ನಡುಗೆ ಶುಕ್ರವಾರ ನಿಯೋಗ ಮಟ್ಟದ ಮಾತುಕತೆ ನಡೆದಿದ್ದು, ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಸವಾಲು ಎಂಬುದನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ರಾಷ್ಟ್ರಪತಿಗಳ ಕಛೇರಿ ಟ್ವಿಟ್ ಮೂಲಕ ತಿಳಿಸಿದೆ.
ಪಾಕಿಸ್ಥಾನದ ಬಗ್ಗೆ ಪರೋಕ್ಷವಾಗಿ ಉಲ್ಲೇಖ ಮಾಡುವ ಮೂಲಕ ಕೋವಿಂದ್ ಅವರು ಭಾರತ ಭಯೋತ್ಪಾದನೆಯ ಬಲಿಪಶು ಎಂದು ಪ್ರತಿಪಾದಿಸಿದರು.
ಸ್ವಿಟ್ಜರ್ಲ್ಯಾಂಡ್ ಮತ್ತು ಭಾರತ ಆರ್ಥಿಕತೆ ಮತ್ತು ತಂತ್ರಜ್ಞಾನ ವಿಷಯದಲ್ಲೂ ಕೈಜೋಡಿಸುವ ಬಲಿಷ್ಠ ಬದ್ಧತೆಯನ್ನು ಪ್ರದರ್ಶಿಸಿವೆ.
ಹವಮಾನ ವೈಪರೀತ್ಯದ ಮೇಲೆ ತಾಂತ್ರಿಕ ಸಹಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಮೈತ್ರಿ, ಲೌಸನ್ನೆ ವಿಶ್ವವಿದ್ಯಾಲಯದಲ್ಲಿ ಹಿಂದಿ ಪೀಠದ ನವೀಕರಣಕ್ಕೆ ಸಂಬಂಧಿಸಿದ ಮೂರು ಒಪ್ಪಂದಗಳಿಗೆ ಸಹಿಯನ್ನು ಹಾಕಲಾಗಿದೆ.
ಬಳಿಕ, ಭಾರತ-ಸ್ವಿಟ್ಜರ್ಲ್ಯಾಂಡ್ ಬ್ಯುಸಿನೆಸ್ ರೌಂಡ್ಟೇಬಲ್ ಅನ್ನು ಉದ್ದೇಶಿಸಿ ಮಾತನಾಡಿದ ಕೋವಿಂದ್, ಭಾರತೀಯ ಮತ್ತು ಸ್ವಿಸ್ ಉದ್ಯಮಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ಹೆಚ್ಚಿನ ಮೌಲ್ಯಗಳನ್ನು ಸೇರ್ಪಡೆಗೊಳಿಸಬೇಕು ಎಂದರು.
ಐಸ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ಸ್ಲೊವೇನಿಯಾಗೆ ಒಂಬತ್ತು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಕೋವಿಂದ್ ಅವರು, ಗುರುವಾರ ಬೆರ್ನೆಗೆ ಭೇಟಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.