ಪೂಂಚ್: ಪಾಕಿಸ್ಥಾನ ಸೆ. 11 ರಂದು ನಡೆಸಿದ್ದ ಕದನ ವಿರಾಮ ಉಲ್ಲಂಘನೆಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದ ಭಾರತ ಇಬ್ಬರು ಪಾಕಿಸ್ಥಾನಿ ಯೋಧರನ್ನು ಹೊಡೆದುರುಳಿಸಿತ್ತು. ಶನಿವಾರ ಬಿಳಿ ಬಾವುಟವನ್ನು ಹಾರಿಸುತ್ತಾ ಪಾಕಿಸ್ಥಾನ ಈ ಇಬ್ಬರ ಮೃತದೇಹಗಳನ್ನು ಹೊತ್ತೊಯ್ದಿದೆ.
ಜಮ್ಮು ಕಾಶ್ಮೀರದ ಹಝಿಪುರ್ ಸೆಕ್ಟರ್ಗೆ ಆಗಮಿಸಿದ ಪಾಕಿಸ್ಥಾನ ಸೇನಾಪಡೆಯ ಸಿಬ್ಬಂದಿಗಳು ಬಿಳಿ ಬಾವುಟವನ್ನು ತೋರಿಸಿ, ಶವಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಬಿಳಿ ಬಾವುಟ ಶಾಂತಿ ಮತ್ತು ಶರಣಾಗತಿಯ ಸಂಕೇತವಾಗಿದೆ.
ಬುಧವಾರ ಹಝಿಪುರ ಸೆಕ್ಟರ್ ಗಡಿ ನಿಯಂತ್ರಣ ಪ್ರದೇಶದಲ್ಲಿ ಪಾಕಿಸ್ಥಾನ ಕದನವಿರಾಮ ಉಲ್ಲಂಘನೆಯನ್ನು ಮಾಡಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿಯನ್ನು ನಡೆಸಲು ಆರಂಭಿಸಿತ್ತು, ಇದಕ್ಕೆ ಪ್ರತ್ಯುತ್ತರ ನೀಡಿದ್ದ ಭಾರತ ಇಬ್ಬರು ಪಾಕಿಸ್ಥಾನಿಯರನ್ನು ಹತ್ಯೆ ಮಾಡಿತ್ತು.
ಇಷ್ಟಾದರೂ ಬುದ್ಧಿ ಕಲಿಯದ ಭಾರತದ ಶನಿವಾರವೂ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಕೋಟ್ ಮತ್ತು ಮೆಂಧರ್ ಸೆಕ್ಟರ್ ಸಮೀಪ ಕದನವಿರಾಮವನ್ನು ಉಲ್ಲಂಘನೆ ಮಾಡಿದೆ.
ಸೆಪ್ಟೆಂಬರ್ 8 ರಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಮತ್ತು ಸುಂದರ್ಬಾನಿ ಪ್ರದೇಶಗಳಲ್ಲಿ ಪಾಕಿಸ್ಥಾನ ಕದನ ವಿರಾಮವನ್ನು ಉಲ್ಲಂಘಿಸಿತ್ತು.
#WATCH Hajipur Sector: Indian Army killed two Pakistani soldiers in retaliation to unprovoked ceasefire violation by Pakistan. Pakistani soldiers retrieved the bodies of their killed personnel after showing white flag. (10.9.19/11.9.19) pic.twitter.com/1AOnGalNkO
— ANI (@ANI) September 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.